ತಮಿಳುನಾಡು: ಈರೋಡ್‌ನ ಚೆನ್ನಿಮಲೈ ಬೆಟ್ಟಗಳಲ್ಲಿ ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ಒಡೆತನದ 600 ಕ್ಕೂ ಹೆಚ್ಚು ನಿಷ್ಕ್ರಿಯ ಮೊಬೈಲ್ ಟವರ್ಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಕಂಪನಿ ನೀಡಿದ ದೂರಿನನ್ವಯ ತನಿಖೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣ ಏನು?: ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮಹಾರಾಷ್ಟ್ರದ ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಇದು ದೇಶದ ಎಲ್ಲ ಕಡೆ ಮೊಬೈಲ್ ಟವರ್ಗಳನ್ನು ಸ್ಥಾಪಿಸಿ ನಿರ್ವಹಣೆ ಮಾಡುತ್ತಿದೆ. ತಮಿಳುನಾಡು ರಾಜ್ಯ ಒಂದರಲ್ಲೇ 6 ಸಾವಿರಕ್ಕೂ ಅಧಿಕ ಟವರ್ಗಳನ್ನು ಸ್ಥಾಪಿಸಿದೆ.
2018 ರಲ್ಲಿ ಖಾಸಗಿ ಶಿಪ್ಪಿಂಗ್ ಕಂಪನಿಯು ನೆಟ್‌ವರ್ಕಿಂಗ್ ಸೇವೆಯನ್ನು ನಿಲ್ಲಿಸಿತು. ಪರಿಣಾಮವಾಗಿ ಟವರ್ ಸ್ಥಾಪಿಸಿದ ಜಿಟಿಎಲ್ ಕಂಪನಿ ಭಾರತದಾದ್ಯಂತ ಸ್ಥಾಪಿಸಲಾದ ಸೆಲ್ ಫೋನ್ ಟವರ್‌ಗಳು ನಿಷ್ಕ್ರಿಯಗೊಂಡವು. ಕೊರೊನಾ ಅವಧಿಯಲ್ಲಿ ಯಾವುದೇ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಕೂಡ ಕೈಗೊಳ್ಳಲಾಗಿಲ್ಲ.
ಈ ವೇಳೆ ಟವರ್ಗಳಲ್ಲಿ ಕೆಲವನ್ನು ಕಳ್ಳತನ ಮಾಡಿದ ಬಗ್ಗೆ ಕಂಪನಿಯ ಗಮನಕ್ಕೆ ಬಂದಿದೆ. ಈ ವೇಳೆ ದೂರು ನೀಡಿ ತನಿಖೆ ನಡೆಸಿದಾಗ ಕಣ್ಗಾವಲು ಇಲ್ಲದ ಪ್ರದೇಶದಲ್ಲಿನ 600 ಕ್ಕೂ ಅಧಿಕ ಟವರ್‌ಗಳು ನಾಪತ್ತೆಯಾಗಿದ್ದು, ಇವನ್ನು ಕಳವು ಮಾಡಿರುವುದು ಗೊತ್ತಾಗಿದೆ.
ಒಂದು ಟವರ್ ಸ್ಥಾಪನೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ ಎಂದು ಕಂಪನಿ ಹೇಳಿದೆ. ವಿಚಿತ್ರ ಅಂದರೆ ಕಂಪನಿಯ ಉದ್ಯೋಗಿಯೇ ನಿಗೂಢ ಗ್ಯಾಂಗ್ ಜೊತೆ ಸೇರಿಕೊಂಡು ಈ ಟವರ್ಗಳನ್ನು ಕದ್ದಿದ್ದಾನಂತೆ.
ಇದನ್ನೂ ಓದಿ: ಬ್ಯಾಡ್ಮಿಂಟನ್ ಆಡುತ್ತಿದ್ದ ಯುವಕ ನೋಡನೋಡುತ್ತಿದ್ದಂತೆ ಕುಸಿದು ಬಿದ್ದು ಸಾವು: ವಿಡಿಯೋ