ETV Bharat / bharat

ಪೆನ್ಸಿಲ್, ಮ್ಯಾಗಿ ಬೆಲೆ ತುಟ್ಟಿಯಾಗಿದ್ದಕ್ಕೆ ಸಿಟ್ಟು.. ಪ್ರಧಾನಿಗೆ ಪತ್ರ ಬರೆದ 6ರ ಬಾಲೆ - ಉತ್ತರಪ್ರದೇಶ ಬಾಲಕಿ ಪ್ರಧಾನಿಗೆ ಪತ್ರ

ಬೆಲೆ ಏರಿಕೆಯ ಬಿಸಿಯಿಂದ ಸಂಕಷ್ಟಕ್ಕೀಡಾದ 1ನೇ ತರಗತಿ- ಪ್ರಧಾನಿಗೆ ಪತ್ರ ಬರೆದು ದೂರು -ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​

6-yr-old-girl-complains-to-pm
ಪ್ರಧಾನಿಗೆ ಪತ್ರ ಬರೆದ 6 ರ ಬಾಲೆ
author img

By

Published : Aug 1, 2022, 12:07 PM IST

Updated : Aug 1, 2022, 12:56 PM IST

ಕನೌಜ್ (ಉತ್ತರ ಪ್ರದೇಶ): ಬೆಲೆ ಏರಿಕೆ ಬಿಸಿ ಯಾರನ್ನೂ ಬಿಟ್ಟಿಲ್ಲ. 1ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳು ಹಣದುಬ್ಬರದಿಂದ ತಾನು ಎದುರಿಸುತ್ತಿರುವ ‘ಕಷ್ಟಗಳ’ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾಳೆ. ಆಕೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪತ್ರದಲ್ಲೇನಿದೆ?: ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ನಿವಾಸಿಯಾದ ಕೃತಿ ದುಬೆ ಪ್ರಧಾನಿಗೆ ಪತ್ರ ಬರೆದಿರುವ ದಿಟ್ಟ ಬಾಲಕಿ. ಹಿಂದಿಯಲ್ಲಿ ಪತ್ರವನ್ನು ಬರೆದಿದ್ದು, 'ನಮಸ್ಕಾರ ಮೋದಿಜಿ, ನೀವು ಅಪಾರ ಬೆಲೆ ಏರಿಕೆಗೆ ಕಾರಣರಾಗಿದ್ದೀರಿ. "ನನ್ನ ಅಭ್ಯಾಸಕ್ಕೆ ಅಗತ್ಯವಿರುವ ಪೆನ್ಸಿಲ್, ರಬ್ಬರ್​ ಬೆಲೆ ಸಹ ತುಟ್ಟಿಯಾಗಿದೆ. ನನಗೆ ಇಷ್ಟವಾದ ಮ್ಯಾಗಿಯ ಬೆಲೆಯೂ ದುಬಾರಿಯಾಗಿದೆ.

ಪ್ರಧಾನಿಗೆ ಬಾಲಕಿ ಬರೆದ ಪತ್ರ
ಪ್ರಧಾನಿಗೆ ಬಾಲಕಿ ಬರೆದ ಪತ್ರ

ತಾಯಿಗೆ ಪೆನ್ಸಿಲ್​, ರಬ್ಬರ್​ ಕೇಳಿದಲ್ಲಿ ಕೊಡಿಸಲಾಗದ್ದಕ್ಕೆ ನನ್ನ ಮೇಲೆ ರೇಗುತ್ತಾರೆ. ದಬಾಯಿಸುತ್ತಾರೆ. ಕಲಿಕೆಗೆ ಇವೆಲ್ಲಾ ಅಗತ್ಯ. ನಾನೇನು ಮಾಡಲಿ ಎಂದು ಪ್ರಶ್ನಿಸಿದ್ದಾಳೆ'. ಅಲ್ಲದೇ, ನನ್ನ ಸಹಪಾಠಿಗಳು ಪೆನ್ಸಿಲ್​ ಕದಿಯುತ್ತಾರೆ ಎಂದು ಬಾಲಕಿ ದೂರಿದ್ದಾಳೆ.

ಆಕೆಯ ತಂದೆ ವಕೀಲರಾಗಿರುವ ವಿಶಾಲ್ ದುಬೆ, ಇದು ನನ್ನ ಮಗಳ 'ಮನ್ ಕಿ ಬಾತ್' ಆಗಿದೆ. ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡಾಗ ನನ್ನ ಹೆಂಡತಿ ಅವಳನ್ನು ಗದರಿಸಿದಾಗ ಸಿಟ್ಟಾಗಿ ಈ ರೀತಿ ಪತ್ರ ಬರೆದಿದ್ದಾಳೆ. ಬೆಲೆ ಏರಿಕೆಯಿಂದ ಮಕ್ಕಳೂ ಕೂಡ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಾಲಕಿ ಬರೆದ ಪತ್ರ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿದ್ದು, ಇದು ಅಲ್ಲಿನ ಶಿಕ್ಷಣಾಧಿಕಾರಿಗಳ ಗಮನಕ್ಕೂ ಬಂದಿದೆ. ಮಗುವಿಗೆ ಯಾವುದೇ ರೀತಿಯ ಸಹಾಯ ಮಾಡಲು ನಾವು ಸಿದ್ಧ. ಆಕೆ ಬರೆದ ಪತ್ರ ಸಂಬಂಧಪಟ್ಟವರಿಗೆ ತಲುಪುವಂತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಓದಿ: ಏರಿಕೆಯೊಂದಿಗೆ ಸೆನ್ಸೆಕ್ಸ್, ನಿಫ್ಟಿ ಸೋಮವಾರದ ವಹಿವಾಟು ಆರಂಭ

Last Updated : Aug 1, 2022, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.