ETV Bharat / bharat

ಮುಂಗಾರಿನಲ್ಲಿ ಆರೋಗ್ಯವಾಗಿರಲು 6 ಸರಳ ಯೋಗಾಸನ.. ಟ್ರೈ ಮಾಡಿ..

author img

By

Published : Jul 5, 2022, 6:35 PM IST

ಮುಂಗಾರಿನ ಈ ಸಮಯದಲ್ಲಿ ನಿತ್ಯ 60 ನಿಮಿಷ ವರ್ಕೌಟ್ ಮಾಡುವುದರಿಂದ ಕ್ರಿಯಾಶೀಲ ಹಾಗೂ ಫಿಟ್ ಆಗಿರಲು ಸಾಧ್ಯ ಎನ್ನುತ್ತಾರೆ ಯೋಗ ಹಾಗೂ ಪೌಷ್ಟಿಕಾಂಶ ತಜ್ಞೆ ಗರಿಮಾ ಗೋಯಲ್. ನಿತ್ಯ ಸರಳವಾದ ಕೆಲ ಯೋಗಾಸನಗಳನ್ನು ಮಾಡುವುದರಿಂದ ಫಿಟ್ನೆಸ್ ಕಾಪಾಡಿಕೊಳ್ಳಬಹುದು ಎನ್ನುವ ಗರಿಮಾ ಗೋಯಲ್, 5 ಸರಳ ಯೋಗಾಸನಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ.

6 yoga asanas to keep you healthy this monsoon

ಮುಂಗಾರು ಮಳೆಯ ಈ ಸಮಯದಲ್ಲಿ ಕಾಲರಾ, ಡೆಂಗಿ ಜ್ವರ ಅಥವಾ ಇನ್ನು ಕೆಲ ಮಳೆಗಾಲದ ಅನಾರೋಗ್ಯಗಳು ಕಾಡುವುದು ಸಹಜ. ಆದರೂ ಸಂಪೂರ್ಣ ಆರೋಗ್ಯ ಹಾಗೂ ಸುರಕ್ಷಿತವಾಗಿದ್ದು ಮುಂಗಾರನ್ನು ಆನಂದಿಸುವುದು ಹೇಗೆಂದು ತಿಳಿಯೋಣ.

ಮುಂಗಾರಿನ ಈ ಸಮಯದಲ್ಲಿ ನಿತ್ಯ 60 ನಿಮಿಷ ವರ್ಕೌಟ್ ಮಾಡುವುದರಿಂದ ಕ್ರಿಯಾಶೀಲ ಹಾಗೂ ಫಿಟ್ ಆಗಿರಲು ಸಾಧ್ಯ ಎನ್ನುತ್ತಾರೆ ಯೋಗ ಹಾಗೂ ಪೌಷ್ಟಿಕಾಂಶ ತಜ್ಞೆ ಗರಿಮಾ ಗೋಯಲ್. ಪ್ರತಿದಿನ ಸರಳವಾದ ಕೆಲ ಯೋಗಾಸನಗಳನ್ನು ಮಾಡುವುದರಿಂದ ಫಿಟ್ನೆಸ್ ಕಾಪಾಡಿಕೊಳ್ಳಬಹುದು ಎನ್ನುವ ಗರಿಮಾ ಗೋಯಲ್, 5 ಸರಳ ಯೋಗಾಸನಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ.

ಪಾದಂಗುಷ್ಠಾಸನ (ಹೆಬ್ಬೆರಳು): ಪಾದಂಗುಸ್ಥಾಸನವು ಅಷ್ಟಾಂಗ ಯೋಗದ ಮೂಲ ಆಸನವಾಗಿದೆ. ಇದು ಮೂಲವಾಗಿ ಮುಂದಕ್ಕೆ ಬಾಗುವಿಕೆಯ ರೀತಿಯಲ್ಲಿ ನಿಂತಿರುವ ಭಂಗಿಯಾಗಿದೆ. ಈ ಆಸನವು ಮಾಡಲು ಸುಲಭವಾಗಿರುವುದರಿಂದ ಪ್ರಾರಂಭದಲ್ಲಿಯೇ ಇದನ್ನು ಮಾಡಲಾಗುತ್ತದೆ.

ಪಾದಂಗುಷ್ಠಾಸನವು ತಲೆಯಿಂದ ಹೆಬ್ಬೆರಳವರೆಗೆ ದೇಹದ ಪ್ರತಿಯೊಂದು ಸ್ನಾಯುವಿಗೆ ವ್ಯಾಯಾಮ ನೀಡುತ್ತದೆ. ಇದು ದೇಹಕ್ಕೆ ವಿಶ್ರಾಂತಿ ನೀಡುತ್ತದೆ ಮತ್ತು ಚಪ್ಪಟೆ ಪಾದಗಳನ್ನು ಹೊಂದಿರುವ ಜನರಿಗೆ ಬಹಳ ಪ್ರಯೋಜನಕಾರಿಯಾಗಿದೆ. ನಿತ್ಯ ನಿಮ್ಮ ಯೋಗಾಭ್ಯಾಸವನ್ನು ಪ್ರಾರಂಭಿಸಲು ಪಡಂಗುಷ್ಠಾಸನವು ಅತ್ಯುತ್ತಮವಾಗಿದೆ.

ತ್ರಿಕೋನಾಸನ (ತ್ರಿಕೋನ ಭಂಗಿ): ತ್ರಿಕೋನಾಸನ ಪದವು 'ತ್ರಿಕೋನ' (ಮೂರು ಮೂಲೆಗಳು) ಮತ್ತು 'ಆಸನ' (ಭಂಗಿ) ಸಂಸ್ಕೃತ ಪದಗಳಿಂದ ಬಂದಿದೆ. ತ್ರಿಕೋನಾಸನ ಯೋಗದಲ್ಲಿ, ಮೊಣಕಾಲುಗಳನ್ನು ಬಗ್ಗಿಸದೆ, ತಮ್ಮ ಕೈಗಳನ್ನು ಅಗಲವಾಗಿ ವಿಸ್ತರಿಸಿ ಮೇಲಿನ ಮತ್ತು ಕೆಳಗಿನ ದೇಹಗಳ ನಡುವೆ 90 ಡಿಗ್ರಿ ಕೋನವನ್ನು ಮಾಡುವ ಮೂಲಕ ತಮ್ಮ ಕಾಲುಗಳನ್ನು ಅಗಲ ಮಾಡಬೇಕಾಗುತ್ತದೆ.

ತ್ರಿಕೋನಾಸನ ಯೋಗವನ್ನು ತ್ರಿಕೋನ ಸ್ಥಾನ ವ್ಯಾಯಾಮ ಎಂದೂ ಕರೆಯುತ್ತಾರೆ. ಇದು ನಿಂತಿರುವ ಭಂಗಿಯಾಗಿದ್ದು ಶಕ್ತಿ, ಸಮತೋಲನವನ್ನು ಸುಧಾರಿಸುತ್ತದೆ. ತ್ರಿಕೋನಾಸನ ಹಂತಗಳಲ್ಲಿ ಅಥವಾ ಪ್ರಕ್ರಿಯೆಗಳಲ್ಲಿ ಹಲವಾರು ರೂಪಾಂತರಗಳಿವೆ. ಸಾಮಾನ್ಯವಾಗಿ, ಇದನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ: ಬದ್ಧ ತ್ರಿಕೋನಾಸನ, ಪರಿವೃತ್ತ ತ್ರಿಕೋನಾಸನ ಮತ್ತು ಉತ್ತಿತ ತ್ರಿಕೋನಾಸನ.

ಉತ್ಕಟಾಸನ (ಕುರ್ಚಿ ಭಂಗಿ): ಈ ಆಸನವನ್ನು ನಿಂತಿರುವ ರೀತಿಯಲ್ಲಿ ಪ್ರಾರಂಭಿಸಬೇಕಾಗುತ್ತದೆ. ನೀವು ಕುರ್ಚಿಯಲ್ಲಿ ಕುಳಿತಿರುವಂತೆ ಕಲ್ಪನೆ ಮಾಡಿಕೊಂಡು ನಿಮ್ಮ ಮೊಣಕಾಲುಗಳನ್ನು ಬಾಗಿಸಿ ದೇಹವನ್ನು ಕೆಳಗಿಳಿಸಿ. ಹೀಗೆ ನಿಂತು ಮುಂದಕ್ಕೆ ಬಾಗಿರುವ ವಿನ್ಯಾಸವು ಅಷ್ಟಾಂಗ ಯೋಗ ಸೂರ್ಯ ನಮಸ್ಕಾರ ದಿನಚರಿಯ ಭಾಗವಾಗಿದೆ. ಈ ಭಂಗಿಯು ನಿಮ್ಮ ಕಾಲುಗಳು, ಬೆನ್ನಿನ ಮೇಲ್ಭಾಗ ಮತ್ತು ಭುಜಗಳನ್ನು ಬಲಪಡಿಸುತ್ತದೆ ಮತ್ತು ಸಮತೋಲನವನ್ನು ಸುಧಾರಿಸುತ್ತದೆ.

ಭುಜಂಗಾಸನ (ಕೋಬ್ರಾ ಭಂಗಿ): ಭುಜಂಗಾಸನವು ಭುಜಂಗ (ನಾಗರ ಅಥವಾ ಹಾವು) ಮತ್ತು ಆಸನ (ಭಂಗಿ) ಪದಗಳಿಂದ ಬಂದಿದೆ. ಕೋಬ್ರಾ ಸ್ಟ್ರೆಚ್ ಎಂಬುದು ಭುಜಂಗಾಸನದ ಇನ್ನೊಂದು ಹೆಸರು. ಸೂರ್ಯ ನಮಸ್ಕಾರ (ಸೂರ್ಯನಮಸ್ಕಾರದ ಸ್ಥಾನ) ಮತ್ತು ಪದ್ಮ ಸಾಧನಗಳನ್ನು ಈ ಭಂಗಿಯು ಒಳಗೊಂಡಿದೆ.

ಹೊಟ್ಟೆ ಕರಗಿಸಲು ಬಯಸುತ್ತಿದ್ದರೆ ಹಾಗೂ ಅದೇ ಸಮಯಕ್ಕೆ ಜಿಮ್‌ಗೆ ಹೋಗಲು ಸಮಯವಿಲ್ಲದಿದ್ದರೆ ಮನೆಯಲ್ಲಿಯೇ ಭುಜಂಗಾಸನ ಅಭ್ಯಾಸ ಮಾಡುವುದು ಸಹಾಯಕವಾಗಬಹುದು. ನಿಮ್ಮ ಹೊಟ್ಟೆಯ ಮೇಲೆ ಮಲಗುವ ಮೂಲಕ ಇದನ್ನು ಸರಳವಾಗಿ ಮಾಡಬಹುದು. ಇದು ನಿಮ್ಮ ದೇಹವನ್ನು ವಿಸ್ತರಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಶಿಶು ಆಸನ (ಮಕ್ಕಳ ಭಂಗಿ): ಬಾಲಾಸನ/ಶಿಶುವಾಸನ ಎಂದೂ ಕರೆಯಲ್ಪಡುವ ಮಗುವಿನ ಭಂಗಿಯು ಮನಸ್ಸು ಮತ್ತು ದೇಹದ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಬಾಲಾಸನವು ಸಂಸ್ಕೃತ ಪದಗಳಾದ ಬಾಲ ಮತ್ತು ಆಸನಗಳಿಂದ ಬಂದಿದೆ. ಬಾಲ ಎಂದರೆ ಚಿಕ್ಕ ಹುಡುಗ ಅಥವಾ ಮಗು.

ಇದು ದೇಹಕ್ಕೆ ವಿಶ್ರಾಂತಿ ನೀಡುವ ಪ್ರಮುಖವಾದ ಭಂಗಿಯಾಗಿದೆ. ಇದು ಇಂದ್ರಿಯಗಳಿಗೆ ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಇದು ಮೂಲ ಯೋಗ ಭಂಗಿಗಳಲ್ಲೊಂದಾಗಿದೆ. ನಿಷ್ಕ್ರಿಯವಾಗಿರುವುದು ಕೂಡ ಕ್ರಿಯೆ ಮಾಡುವಂತೆಯೇ ನಮ್ಮ ಆರೋಗ್ಯಕ್ಕೆ ಸಹಾಯಕವಾಗಬಹುದು ಎಂಬುದನ್ನು ಈ ಆಸನ ನಮಗೆ ಕಲಿಸುತ್ತದೆ.

ತಾಡಾಸನ (ಪರ್ವತ ಭಂಗಿ): ತಾಡಾಸನವು ಎಲ್ಲಾ ಹಂತದ ಜನರಿಗೆ ಅನುಕೂಲವಾಗಿದೆ. ಇದು ವಿವಿಧ ದೈಹಿಕ ಮತ್ತು ಭಾವನಾತ್ಮಕ ಪ್ರಯೋಜನಗಳನ್ನು ನೀಡುತ್ತದೆ. ತಾಡಾಸನವು ನಿಮ್ಮ ದೇಹ ಮತ್ತು ಮನಸ್ಸುಗಳಿಗೆ ವಿಶ್ರಾಂತಿ ನೀಡುತ್ತದೆ ಹಾಗೂ ಆಂತರಿಕ ನೆಮ್ಮದಿಯನ್ನು ಉತ್ತೇಜಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.