ಫತೇಹಾಬಾದ್: ತೋಹಾನಾದಲ್ಲಿ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಧರಣಿಗೆ 6 ವರ್ಷದ ಬಾಲಕ ತನ್ನದೇ ಆದ ಕೊಡುಗೆ ನೀಡುವ ಮೂಲಕ ಗಮನ ಸೆಳೆದಿದ್ದಾನೆ.
ಸುಮಾರು 6 ವರ್ಷದ ಏಕಂ ಎಂಬ ಬಾಲಕ ನಿತ್ಯ ಶಾಲೆಯಿಂದ ಬಂದು ಟೌನ್ ಪಾರ್ಕ್ ಬಳಿ ಧರಣಿ ಸ್ಥಳಕ್ಕೆ ಆಗಮಿಸುತ್ತಾನೆ. ರಾತ್ರಿಯಲ್ಲ ತನ್ನ ತಾತನ ಜೊತೆಗಿರುವ ಮೂಲಕ ಧರಣಿಗೆ ಸಾಥ್ ನೀಡುತ್ತಿದ್ದಾನೆ.
ರೈತರಿಗೆ ಆಹಾರ ತಯಾರಿಕೆ :
ಕಳೆದ 36 ದಿನಗಳಿಂದ ಧರಣಿಗೆ ಬರುವ ರೈತರಿಗೆ ಏಕಂ ಮತ್ತು ಅವನ ಅಜ್ಜ ಆಹಾರ ತಯಾರಿಕೆ ಮಾಡುತ್ತಾರೆ. ಇದರ ಜೊತೆಗೆ ಧರಣಿ ಸಂಬಂಧ ರೂಪುರೇಷಗಳನ್ನು ಸಿದ್ಧಪಡಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಅಜ್ಜನ ಜೊತೆಯೇ ರಾತ್ರಿ ಅಲ್ಲೆ ಉಳಿದುಕೊಂಡು ಬೆಳಗ್ಗೆ ಮನೆಗೆ ತೆಳರುತ್ತಾನಂತೆ.
ಓದಿ: ಭಾರತದಲ್ಲಿ ಕೋವಿಡ್ ಲಸಿಕೆ ತುರ್ತು ಬಳಕೆಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಫೈಜರ್..!
ಪ್ರತಿಭಟನಾ ಸ್ಥಳದಲ್ಲಿ ಅಧ್ಯಯನ ಮಾಡುವ ಪೋರ:
ಶಾಲೆಯನ್ನು ಮುಗಿಸಿಕೊಂಡು ನೇರವಾಗಿ ಬಾಲಕ ತನ್ನ ತಾತ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಹೋಗುತ್ತಾನೆ. ಈ ವೇಳೆ ಶಾಲೆಯಲ್ಲಿ ನೀಡಿದ ಕೆಲಸಗಳನ್ನು ಅಜ್ಜನ ಸಹಾಯದಿಂದ ಮುಗಿಸಿಕೊಳ್ಳುತ್ತಾನೆ. ಧರಣಿ ನಡೆಯುತ್ತಿರುವ ಸ್ಥಳದಲ್ಲಿ ಯಾವುದೇ ವಿದ್ಯುತ್ ವ್ಯವಸ್ಥೆಯಿಲ್ಲ. ಆದರೂ ಬಾಲಕ ತನ್ನ ತಾತನ ಮೊಬೈಲ್ ಬೆಳಕಿನಲ್ಲಿ ಕೆಲಸಗಳನ್ನು ಮಾಡಿಕೊಳ್ಳುತ್ತಾನೆ. ಶಾಲೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಧರಣಿಗೆ ಬರುವುದನ್ನು ನಿಲ್ಲಿಸಿಲ್ಲವಂತೆ.