ETV Bharat / bharat

ದೈವದರ್ಶನ ಮುಗಿಸಿ ಬರ್ತಿದ್ದ ಭಕ್ತರ ಮೇಲೆ ಎರಗಿದ ಜವರಾಯ.. 6 ಮಂದಿ ದುರ್ಮರಣ - ಸರಣಿ ಅಪಘಾತದಲ್ಲಿ ಭಕ್ತರ ದುರ್ಮರಣ

ದೇವಸ್ಥಾನಗಳಿಗೆ ಭೇಟಿ ನೀಡಿ ವಾಪಸ್​ ಆಗುತ್ತಿದ್ದ ಭಕ್ತರ ಕಾರು ಸರಣಿ ರಸ್ತೆ ಅಪಘಾತದಲ್ಲಿ ಸಿಲುಕಿ ಜಖಂಗೊಂಡು 6 ಮಂದಿ ಸಾವನ್ನಪ್ಪಿದ ದಾರುಣ ಘಟನೆ ತಮಿಳುನಾಡಿನಲ್ಲಿ ಇಂದು ಬೆಳಗ್ಗೆ ನಡೆದಿದೆ.

people-died-in-a-road-accident
ಭಕ್ತರ ಮೇಲೆ ಎರಗಿದ ಜವರಾಯ
author img

By

Published : Dec 7, 2022, 9:15 AM IST

Updated : Dec 7, 2022, 9:34 AM IST

ಚೆಂಗಲ್ಪಟ್ಟು(ತಮಿಳುನಾಡು): ದೈವದರ್ಶನಕ್ಕೆ ಹೋಗಿ ವಾಪಸ್​ ಬರುತ್ತಿದ್ದ 10 ಮಂದಿ ಭಕ್ತರಲ್ಲಿ 6 ಮಂದಿ ಭೀಕರ ಸರಣಿ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ. ಉಳಿದವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರ್ತಿಕೈ ದೀಪಂ ಹಬ್ಬದ ನಿಮಿತ್ತ ನಿನ್ನೆ(ಡಿಸೆಂಬರ್​ 6) ಟಾಟಾ ಏಸ್ ವಾಹನದಲ್ಲಿ ಪೊಝಿಚಲೂರ್ ಜ್ಞಾನಾಂಬಿಕ ನಗರದ 10 ಮಂದಿ ತಿರುವಣ್ಣಾಮಲೈ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ತೆರಳಿದ್ದರು. ದರ್ಶನ ಮುಗಿಸಿ ಇಂದು ಮನೆಗೆ ವಾಪಸ್​ ಬರುತ್ತಿದ್ದಾಗ ಮುಂಜಾನೆ 4 ಗಂಟೆಯ ಸುಮಾರಿಗೆ ಎದುರಿನಿಂದ ಬರುತ್ತಿದ್ದ ಲಾರಿಗೆ ಕಾರು ರಭಸವಾಗಿ ಡಿಕ್ಕಿ ಹೊಡೆದಿದೆ.

ಇದರ ಬಳಿಕ ಇನ್ನೊಂದು ವಾಹನ ಭಕ್ತರಿದ್ದ ಕಾರಿಗೆ ಹಿಂದಿನಿಂದ ಗುದ್ದಿದೆ. ಇದರಿಂದ ಕಾರು ಎರಡು ವಾಹನಗಳ ಮಧ್ಯೆ ಸಿಲುಕಿ ಪೂರ್ಣ ಜಖಂಗೊಂಡಿದೆ. ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ 10 ಭಕ್ತರಲ್ಲಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಮಧುರಾಂತಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ: ಕುಷ್ಟಗಿ ರೈತ ಸಂಪರ್ಕ‌ ಕೇಂದ್ರದ ಕೃಷಿ ಅಧಿಕಾರಿ ನಾಪತ್ತೆ

Last Updated : Dec 7, 2022, 9:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.