ETV Bharat / bharat

5ಜಿ ಸ್ಪೆಕ್ಟ್ರಮ್​ ಹರಾಜಿಗೆ ಕೇಂದ್ರ ಒಪ್ಪಿಗೆ: ಸಿಗಲಿದೆ 4ಜಿಗಿಂತಲೂ 10 ಪಟ್ಟು ವೇಗದ ಇಂಟರ್‌ನೆಟ್‌ - Cabinet approves 5G spectrum auction

ದೇಶದಲ್ಲಿ 5ಜಿ ಅತಿ ಶೀಘ್ರದಲ್ಲೇ ಲಭ್ಯವಾಗಲಿದೆ. ಅತಿ ವೇಗದ ಇಂಟರ್ನೆಟ್​ ಸೇವೆಗಾಗಿ 5ಜಿ ಸ್ಪೆಕ್ಟ್ರಮ್​ ಹರಾಜು ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

5ಜಿ ಸ್ಪೆಕ್ಟ್ರಮ್​ ಹರಾಜಿಗೆ ಕೇಂದ್ರ ಒಪ್ಪಿಗೆ
5ಜಿ ಸ್ಪೆಕ್ಟ್ರಮ್​ ಹರಾಜಿಗೆ ಕೇಂದ್ರ ಒಪ್ಪಿಗೆ
author img

By

Published : Jun 15, 2022, 3:17 PM IST

ನವದೆಹಲಿ: ಅತಿ ವೇಗದ ಇಂಟರ್ನೆಟ್​ ಸೇವೆ ಲಭ್ಯವಾಗುವಂತಾಗಲು ದೇಶದಲ್ಲಿ 5ಜಿ ತರಂಗಾಂತರ ಹರಾಜಿಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಈ ಮೂಲಕ ದೇಶದ ನಾಗರಿಕರಲ್ಲದೇ, ಖಾಸಗಿ, ಸರ್ಕಾರಿ ಸಂಸ್ಥೆಗಳಿಗೂ ಕೂಡ ಈಗಿರುವ 4ಜಿ ವೇಗಕ್ಕಿಂತಲೂ 10 ಪಟ್ಟು ಹೆಚ್ಚಿನ ವೇಗದ ಅಂತರ್ಜಾಲ ಸೇವೆ ಸಿಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟದಲ್ಲಿ 5G ಸೇವೆಗಳಿಗಾಗಿ ಸ್ಪೆಕ್ಟ್ರಮ್ ಹರಾಜಿಗೆ ದೂರಸಂಪರ್ಕ ಇಲಾಖೆಯ ಪ್ರಸ್ತಾವನೆಯನ್ನು ಅನುಮೋದಿಸಿದೆ. ಜುಲೈ ಅಂತ್ಯದ ವೇಳೆಗೆ 72,097.85 MHz ತರಂಗಾಂತರದ ಸ್ಪೆಕ್ಟ್ರಮ್ ಹರಾಜಾಗಲಿದೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

1. ಮೂರು ಸ್ಥರದಲ್ಲಿ ಮಾರಾಟ: 20 ವರ್ಷಗಳ ಅವಧಿಯಲ್ಲಿ ಒಟ್ಟು 72,097.85 ಮೆಗಾಹರ್ಟ್ಜ್ ರೇಡಿಯೋ ತರಂಗಗಳನ್ನು ಹರಾಜು ಮಾಡಲಾಗುತ್ತದೆ. ಸ್ಪೆಕ್ಟ್ರಮ್ ಅನ್ನು ಕಡಿಮೆ ಸ್ಥರದ (600 MHz, 700 MHz, 800 MHz, 900 MHz, 1800 MHz, 2100 MHz, 2300 MHz), ಮಧ್ಯಮ (3300 MHz) ಮತ್ತು ಅತ್ಯಧಿಕ ಸ್ಥರದ (26 GHz) ಆವರ್ತನ ಬ್ಯಾಂಡ್‌ಗಳನ್ನು ಹರಾಜು ಮಾಡಲಾಗುತ್ತದೆ. ಟೆಲಿಕಾಂ ವಲಯದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

2. ಮುಂಗಡ ಬೇಕಿಲ್ಲ, ವಾಪಸ್​ ಕೊಡಬಹುದು: ಟೆಲಿಕಾಂ ಹರಾಜಿನಲ್ಲಿ ಮುಂಗಡ ಪಾವತಿಯನ್ನು ಭರಿಸುವುದನ್ನು ಕೈಬಿಡಲಾಗಿದೆ. ಈ ರೀತಿಯ ನಿರ್ಧಾರ ಇದೇ ಮೊದಲ ಸಲವಾಗಿದೆ. ಅಂದರೆ, ಸ್ಪೆಕ್ಟ್ರಮ್​ ಹರಾಜನ್ನು ಗೆದ್ದ ಬಿಡ್ಡರ್​ ಬಿಡ್ಡರ್ ಮುಂಗಡವಾಗಿ ಹಣವನ್ನು ಪಾವತಿಸಬೇಕಾಗಿಲ್ಲ. ಬಿಡ್ಡಿನ ಒಟ್ಟಾರೆ ಹಣವನ್ನು 20 ಕಂತುಗಳಲ್ಲಿ ಕಟ್ಟಬೇಕು. ಪ್ರತಿ ಕಂತನ್ನು ವರ್ಷದ ಆರಂಭದಲ್ಲಿಯೇ ಪಾವತಿಸಬೇಕು ಎಂದು ಸೂಚಿಸಲಾಗಿದೆ.

3. ವಾಪಸ್​ ಸರ್ಕಾರಕ್ಕೆ ಹಸ್ತಾಂತರಿಸುವ ಅವಕಾಶ: 10 ವರ್ಷಗಳ ಬಳಿಕ ಸ್ಪೆಕ್ಟ್ರಮ್​ ಅನ್ನು ಬಿಡ್​ದಾರ ವಾಪಸ್​ ಸರ್ಕಾರಕ್ಕೆ ಹಸ್ತಾಂತರಿಸುವ ಅವಕಾಶವನ್ನೂ ನೀಡಲಾಗಿದೆ. ವಾಪಸ್ ಬಳಿಕ ಬಾಕಿ ಉಳಿದ ಕಂತುಗಳನ್ನು ಪಾವತಿಸುವ ಅಗತ್ಯವಿಲ್ಲ. 5ಜಿ ಸ್ಪೆಕ್ಟ್ರಮ್​ ಎಷ್ಟು ಮೊತ್ತಕ್ಕೆ ಹರಾಜಾಗಿದೆ ಎಂಬ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

4. ಹರಾಜು ದರ ಗೌಪ್ಯ: 5G ಸ್ಪೆಕ್ಟ್ರಮ್‌ ಹರಾಜಿಗೆ ಸರ್ಕಾರ ನಿಗದಿಪಡಿಸಿದ ದರದ ಬಗ್ಗೆ ಟೆಲಿಕಾಂ ಕಂಪನಿಗಳು ಅತೃಪ್ತ ವ್ಯಕ್ತಪಡಿಸಿವೆ ಎನ್ನಲಾಗಿದೆ. ಹೀಗಾಗಿ ಬಿಡ್​ ಸಲ್ಲಿಸುವ ಟೆಲಿಕಾಂ ವಲಯಗಳ ಕೈಗೆಟುಕುವ ದರದಲ್ಲಿ ತರಂಗಾಂತರವನ್ನು ಮಾರಾಟ ಮಾಡಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ. 5G ಸೇವೆಗಳ ಲಭ್ಯತೆಯ ಬಳಿಕ ಇಂಟರ್ನೆಟ್ ಸೇವೆಗಳು ಈಗಿರುವ 4G ಡೌನ್‌ಲೋಡ್ ವೇಗಕ್ಕಿಂತ 10 ಪಟ್ಟು ಹೆಚ್ಚಾಗಲಿದೆ.

ಇದನ್ನೂ ಓದಿ: 2 ತಿಂಗಳು ಆರೋಪಿಗಳನ್ನು ಬಂಧಿಸುವಂತಿಲ್ಲ: ವರದಕ್ಷಿಣೆ ಕಿರುಕುಳ ಕೇಸ್​ ಕುರಿತು ಮಹತ್ವದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.