ಮಧುರೈ (ತಮಿಳುನಾಡು): ಪೊಂಗಲ್ ನಿಮಿತ್ತ ಇಂದು ಮಧುರೈನ ಪಾಲಮೆಡು ಪ್ರದೇಶದಲ್ಲಿ ಜಲ್ಲಿಕಟ್ಟು ಪ್ರಾರಂಭವಾಗಿದೆ. ಹೋರಿಗಳನ್ನು ಅಖಾಡಕ್ಕೆ ಇಳಿಸಿ ಅವುಗಳನ್ನು ಪಳಗಿಸುವ ಪಂದ್ಯವೇ ಜಲ್ಲಿಕಟ್ಟು. ಈ ಸ್ಫರ್ಧೆ ಪ್ರೇಕ್ಷಕರಿಗೆ ಎಷ್ಟು ಮನರಂಜನೆ ನೀಡುತ್ತದೆಯೋ ಅಷ್ಟೇ ಭಯಾನಕವಾಗಿರುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಆಟಗಾರರ ಸಂಖ್ಯೆ 150ಕ್ಕಿಂತ ಹೆಚ್ಚಿರಬಾರದು ಹಾಗೂ ಅವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ ಎಂದು ತಮಿಳುನಾಡು ಸರ್ಕಾರ ನಿರ್ದೇಶಿಸಿದೆ. ಪ್ರೇಕ್ಷಕರ ಸಂಖ್ಯೆ ಕೂಡ ಶೇ.50ಕ್ಕಿಂತ ಹೆಚ್ಚಿರಬಾರದೆಂದು ರಾಜ್ಯ ಸರ್ಕಾರ ಸೂಚಿಸಿತ್ತಾದರೂ, ಕೊರೊನಾ ನಿಯಮಗಳನ್ನ ಮುರಿದು ಸಾವಿರಾರು ಜನರು ಸೇರಿದ್ದಾರೆ.
ಇದನ್ನೂ ಓದಿ: ಜಲ್ಲಿಕಟ್ಟು ಕ್ರೀಡೆ ವೇಳೆ ಕಪ್ಪು ಧ್ವಜ ಪ್ರದರ್ಶಿಸಿ ಕೃಷಿ ಕಾನೂನು ವಿರುದ್ಧ ಘೋಷಣೆ: ವಿಡಿಯೋ
ತಮಿಳುನಾಡಿನ ವಿವಿಧ ಭಾಗಗಳಲ್ಲಿ ಜಲ್ಲಿಕಟ್ಟು ನಡೆಯುತ್ತಿದ್ದು, ನಿನ್ನೆ ಮಧುರೈನಲ್ಲಿ ನಡೆದ ಸ್ಪರ್ಧೆಯ ವೇಳೆ ಪ್ರೇಕ್ಷಕರು, ಆಟಗಾರರು ಸೇರಿ 58 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.