ETV Bharat / bharat

ಆನ್ ಲೈನ್ ಗೇಮ್ ವಂಚನೆ ಕೇಸ್​.. ಬುಕ್ಕಿ ಮನೆ ಮೇಲೆ ದಾಳಿ, 31 ಕೋಟಿ ವಶ

author img

By

Published : Aug 4, 2023, 12:26 PM IST

ಮಹಾರಾಷ್ಟ್ರದಲ್ಲಿ ಉದ್ಯಮಿಯೊಬ್ಬರು ಆನ್ ಲೈನ್ ಗೇಮ್​ನಲ್ಲಿ ವಂಚನೆಗೆ ಒಳಗಾಗಿ 58 ಕೋಟಿ ರೂ. ಕಳೆದುಕೊಂಡಿದ್ದು, ಪ್ರಕರಣ ಕುರಿತಂತೆ ತನಿಖೆ ಮುಂದುವರೆದಿದೆ.

ಜಪ್ತಿ ಮಾಡಲಾದ ಹಣ
ಜಪ್ತಿ ಮಾಡಲಾದ ಹಣ

ನಾಗ್ಪುರ (ಮಹಾರಾಷ್ಟ್ರ) : ನಗರದಲ್ಲಿ ಉದ್ಯಮಿಯೊಬ್ಬರು ಆನ್ ಲೈನ್ ಗೇಮ್ ಜಾಲದಲ್ಲಿ ಸಿಲುಕಿ ಬರೋಬ್ಬರಿ 58 ಕೋಟಿ ರೂ. ಕಳೆದುಕೊಂಡ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆರೋಪಿ ಮಾಸ್ಟರ್‌ಮೈಂಡ್ ಬುಕ್ಕಿ ಅನಂತ್​ನ ನಿವಾಸದಲ್ಲಿನ ಲಾಕರ್​ನಿಂದ ಪೊಲೀಸರು 31 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ.

ಇದರಲ್ಲಿ 16,59,00,000 ನಗದು, 12 ಕೆಜಿ ಚಿನ್ನದ ಬಿಸ್ಕತ್ ಹಾಗೂ 294 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದೆ. ಬಳಿಕ ನಾಲ್ಕೂವರೆ ಕೋಟಿ ಮೌಲ್ಯದ ಚಿನ್ನಾಭರಣ, ಹಾಗೂ 4 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

2023 ಜುಲೈ 21 ರಂದು, ವಂಚನೆಗೆ ಒಳಗಾದ ಉದ್ಯಮಿ ತಾನು ಆನ್​ಲೈನ್​ ಗೇಮ್​ ಮೂಲಕ ಹಣ ಕಳೆದುಕೊಂಡಿರುವ ಕುರಿತು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ನಾಗ್ಪುರ ಪೊಲೀಸರ ತಂಡ ಗೋಂಡಿಯಾದಲ್ಲಿ ನೆಲೆಸಿದ್ದ ಆರೋಪಿಯ ಮನೆ ಮೇಲೆ ದಾಳಿ ನಡೆಸಿತ್ತು. ದಾಳಿಯ ಮೊದಲ ದಿನ ಮನೆಯಿಂದ 4 ಕೆಜಿ ಚಿನ್ನ ಹಾಗೂ 10 ಕೋಟಿ ನಗದು ವಶಪಡಿಸಿಕೊಳ್ಳಲಾಗಿತ್ತು ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.

ಆನ್‌ಲೈನ್ ಗೇಮಿಂಗ್ ನೆಟ್‌ವರ್ಕ್ ಬೆಳೆಸಿದ್ದ ಆರೋಪಿ: ಅನಂತ್ ಅಲಿಯಾಸ್ ಸೋಂಟು ಎಂಬ ಬುಕ್ಕಿ ಆನ್‌ಲೈನ್ ಗೇಮಿಂಗ್ ನೆಟ್‌ವರ್ಕ್ ನಿರ್ಮಿಸಿದ್ದ. ತನ್ನ ಜಾಲಕ್ಕೆ ದೊಡ್ಡ ದೊಡ್ಡ ಉದ್ಯಮಿಗಳನ್ನು ಬೀಳಿಸಿ ಕೋಟ್ಯಂತರ ರೂಪಾಯಿ ದೋಚುತ್ತಿದ್ದ.

ಆರೋಪಿಗಾಗಿ ಕಾರ್ಯಾಚರಣೆ: ಪ್ರಕರಣ ದಾಖಲಾದಂತೆ ಎಚ್ಚೆತ್ತುಕೊಂಡ ಆರೋಪಿ ಅನಂತ್​ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತೇನೆಂಬ ಭಯದಿಂದ ದುಬೈಗೆ ಪರಾರಿಯಾಗಿದ್ದಾನೆ. ಪೊಲೀಸರ ವರದಿ ಪ್ರಕಾರ ಆತ ಇನ್ನೂ ದುಬೈನಲ್ಲೇ ಉಳಿದುಕೊಂಡಿದ್ದಾನೆ. ಅಲ್ಲಿಂದ ಆರೋಪಿಯನ್ನು ಸೆರೆ ಹಿಡಿದು ಭಾರತಕ್ಕೆ ಕರೆತರಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

ಆರೋಪಿ ಸಂಬಂಧಿಕರಿಗೂ ನೀಡಲಾಗಿತ್ತು ನೋಟೀಸ್​: ಆರೋಪಿ ಪರಾರಿಯಾದಂತೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸಂಬಂಧಿಕರಿಗೆ ಠಾಣೆಗೆ ಹಾಜರಾಗುವಂತೆ ನೋಟೀಸ್​ ನೀಡಿದ್ದರು. ಆದರೆ ಅವರು ಕೂಡ ಪರಾರಿಯಾಗಿದ್ದಾರೆ. ಇದರಿಂದ ಒಬ್ಬ ಆರೋಪಿಯಲ್ಲದೇ ಬೇರೆಯವರು ಈ ಜಾಲದಲ್ಲಿ ಇದ್ದಾರೆಯೇ, ಈ ವಂಚನೆಯಲ್ಲಿ ಆರೋಪಿಯೊಂದಿಗೆ ಯಾರಾದರೂ ಉದ್ಯಮಿಗೆ ವಂಚಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್​ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Nusrat Jahan: ಸಂಸದೆ, ನಟಿ ನುಸ್ರತ್ ಜಹಾನ್​ ವಿರುದ್ಧ ವಂಚನೆ ಆರೋಪ: ಕೋರ್ಟ್​, ಇಡಿ, ಪೊಲೀಸರಿಗೆ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.