ಚಂಡೀಗಢ (ಪಂಜಾಬ್): ಪಂಜಾಬ್‌ನ ಅಮೃತಸರ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಬಳಿಯ ಮೈದಾನದಿಂದ ಪಾಕಿಸ್ತಾನದ ಡ್ರೋನ್‌ನಿಂದ ಏರ್‌ಡ್ರಾಪ್ ಮಾಡಲಾದ 565 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿರುವುದಾಗಿ ಬಿಎಸ್‌ಎಫ್ ಮಂಗಳವಾರ ತಿಳಿಸಿದೆ.
ನವೆಂಬರ್ 20 ಮತ್ತು 21 ರ ಮಧ್ಯರಾತ್ರಿಯಲ್ಲಿ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್‌ಎಫ್) ಪಡೆಗಳು ಮೋಡ್ ಹಳ್ಳಿಯಲ್ಲಿ ಡ್ರೋನ್ ತಡೆದಿವೆ. ಆಗ ನೆಲದ ಮೇಲೆ ಏನೋ ಬಿದ್ದ ಶಬ್ದ ಅವರಿಗೆ ಕೇಳಿಸಿದೆ. ತದನಂತರ ಹುಡುಕಾಟ ನಡೆಸಿದ ಬಿಎಸ್ಎಫ್ ಪಡೆಗಳಿಗೆ 565 ಗ್ರಾಂ ಹೆರಾಯಿನ್ ಹೊಂದಿರುವ ಹಳದಿ ಟೇಪ್‌ನಲ್ಲಿ ಸುತ್ತಿದ ಪ್ಯಾಕೆಟ್ ಕಂಡುಬಂದಿದೆ. ನಂತರ ಅದನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಾಗಣೆಯ ಅಂತಾರಾಷ್ಟ್ರೀಯ ಬೆಲೆ ಸುಮಾರು 3.5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನೂ ಆರಂಭಿಸಲಾಗಿದೆ. ಬಿಎಸ್ಎಫ್ ಪಂಜಾಬ್ ಫ್ರಾಂಟಿಯರ್ ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆ x( ಈ ಹಿಂದಿನ ಟ್ವಿಟರ್) ಮೂಲಕ ಹಂಚಿಕೊಂಡಿದೆ.
ಪಂಜಾಬ್ ಬಿಎಸ್ಎಫ್ ಪಡೆಗಳು ಡ್ರೋನ್ ಒಳನುಸುಳುವಿಕೆಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆಸಿ ಹೆರಾಯಿನ್ ವಶಪಡಿಸಿಕೊಂಡಿವೆ. ಡ್ರೋನ್ ಆಕ್ರಮಣಕ್ಕೆ ಪಡೆಗಳು ತ್ವರಿತವಾಗಿ ಪ್ರತಿಕ್ರಿಯಿಸಿದವು. ಅದು ಪಾಕಿಸ್ತಾನಕ್ಕೆ ಹಿಂದಿರುಗುವ ಮೊದಲು ಡ್ರಗ್ಸ್ ಅನ್ನು ಕೈಬಿಟ್ಟಿತು. ಈ ಮೂಲಕ ಭಾರತದ ಪ್ರದೇಶಕ್ಕೆ ಮಾದಕವಸ್ತು ಕಳ್ಳಸಾಗಣೆ ಮಾಡುವ ಪಾಕಿಸ್ತಾನಿ ಸ್ಮಗ್ಲರ್‌ಗಳ ಮತ್ತೊಂದು ಪ್ರಯತ್ನವನ್ನು ಬಿಎಸ್‌ಎಫ್ ಪಡೆಗಳು ಯಶಸ್ವಿಯಾಗಿ ವಿಫಲಗೊಳಿಸಿವೆ ಎಂದು ಪಂಜಾಬ್ ಬಿಎಸ್‌ಎಫ್ ಅಧಿಕಾರಿ ತಿಳಿಸಿದ್ದಾರೆ.
84 ಕೋಟಿ ಮೌಲ್ಯದ 12 ಕೆ. ಜಿ ಹೆರಾಯಿನ್ ವಶ : ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದ ಕಳ್ಳಸಾಗಣೆದಾರರಿಗೆ ಪಂಜಾಬ್ ಪೊಲೀಸರು ಬಿಗ್ ಶಾಕ್ (ಅಕ್ಟೋಬರ್- 12-2023) ನೀಡಿದ್ದರು. ಪಂಜಾಬ್ ಪೊಲೀಸರು ದೇಶದ ಗಡಿಭಾಗಕ್ಕೆ ಕಳುಹಿಸಲಾದ 12 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದರು. ಅಷ್ಟೇ ಅಲ್ಲ, ಫಿರೋಜ್‌ಪುರದ ಕೌಂಟರ್ ಇಂಟೆಲಿಜೆನ್ಸ್ (ಸಿಐ) ತಂಡ ಇಬ್ಬರು ಭಾರತೀಯ ಕಳ್ಳಸಾಗಣೆದಾರರನ್ನು ಬಂಧಿಸಿತ್ತು. ಕಳ್ಳಸಾಗಾಣಿಕೆದಾರರು ಈ ಸರಕುಗಳನ್ನು ಗಡಿಯಾಚೆಯಿಂದ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದರು ಎಂದು ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು.
ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ಪಂಜಾಬ್ ಡಿಜಿಪಿ : ಪಂಜಾಬ್ ಡಿಜಿಪಿ ಗೌರವ್ ಯಾದವ್ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದರು. 'ಟ್ರಾನ್ಸ್-ಬಾರ್ಡರ್ ಡ್ರಗ್ ನೆಟ್‌ವರ್ಕ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಗುಪ್ತಚರ ಸಂಸ್ಥೆ ನೇತೃತ್ವದ ಕಾರ್ಯಾಚರಣೆ ಸಂದರ್ಭದಲ್ಲಿ, ಸಿಐ ಫಿರೋಜ್‌ಪುರ 2 ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಬಂಧಿತರಿಂದ 12 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ'' ಎಂದು ಅವರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದರು.
ಇದನ್ನೂ ಓದಿ: 84 ಕೋಟಿ ಮೌಲ್ಯದ 12 ಕೆ.ಜಿ ಹೆರಾಯಿನ್ ವಶ: ಇಬ್ಬರು ಡ್ರಗ್ ಸ್ಮಗ್ಲರ್‌ಗಳು ಅರೆಸ್ಟ್...