ETV Bharat / bharat

ಲಿವ್ ಇನ್ ರಿಲೇಶನ್‌ಶಿಪ್: ಹಿಂಸಾಚಾರಕ್ಕೆ ಈಶಾನ್ಯ ಭಾಗದ ಯುವತಿಯರೇ ಹೆಚ್ಚು ಬಲಿ

ಲಿವ್ ಇನ್ ರಿಲೇಶನ್ ಶಿಪ್: ದೆಹಲಿಯಲ್ಲಿ 560 ಹಿಂಸಾಚಾರ ಪ್ರಕರಣಗಳು ವರದಿ. 'ನಾನು ಯಾವುದೇ ನೈತಿಕ ಪೊಲೀಸ್‌ಗಿರಿ ಮಾಡುತ್ತಿಲ್ಲ. ಪ್ರತಿಯೊಬ್ಬರಿಗೂ ಅವರವರ ರೀತಿಯಲ್ಲಿ ಬದುಕುವ ಹಕ್ಕಿದೆ. ಓರ್ವ ಹಿರಿಯ ಸಹೋದರನಾಗಿ ನಾನು ಮದುವೆಯ ಪವಿತ್ರತೆಯಿಲ್ಲದೆ ಅಂತಹ ಲಿವ್-ಇನ್ ಸಂಬಂಧಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ-ದೆಹಲಿ ಪೊಲೀಸ್ ವಿಶೇಷ ಆಯುಕ್ತ ರಾಬಿನ್ ಹಿಬು.

author img

By

Published : Nov 29, 2022, 12:39 PM IST

Representative image
ಸಾಂದರ್ಭಿಕ ಚಿತ್ರ

ನವ ದೆಹಲಿ: ಶ್ರದ್ಧಾ ಹತ್ಯೆ ಪ್ರಕರಣ ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ. ಮತ್ತೊಂದೆಡೆ ಲಿವ್ ಇನ್ ರಿಲೇಶನ್‌ಶಿಪ್​​ಗಳಲ್ಲಿನ ಹಿಂಸಾಚಾರದ ವಿಷಯಕ್ಕೆ ಬಂದಾಗ ದೇಶದ ರಾಜಧಾನಿಯಲ್ಲಿ ಆಘಾತಕಾರಿ ಅಂಕಿ-ಅಂಶಗಳು ಬಹಿರಂಗಗೊಂಡಿವೆ.

ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಆಕೆಯ ಲಿವ್ ಇನ್ ಬಾಯ್ ಫ್ರೆಂಡ್ ಅಫ್ತಾಬ್ ಅಮೀನ್ ಪೂನಾವಾಲಾ ಎಂಬಾತನನ್ನು ಬಂಧಿಸಲಾಗಿದೆ. ಸದ್ಯ ಈ ಪ್ರಕರಣ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರುವವರ ದಿನನಿತ್ಯದ ಹಿಂಸಾಚಾರದ ಪ್ರಕರಣಗಳನ್ನು ಬಹಿರಂಗಪಡಿಸಿದೆ. ಕಳೆದ ವರ್ಷ ದೆಹಲಿ ಪೊಲೀಸರು 560 ಹಿಂಸಾಚಾರ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು 'ಈಟಿವಿ ಭಾರತ' ನಡೆಸಿದ ತನಿಖೆಯಿಂದ ತಿಳಿದು ಬಂದಿದೆ. ಆಘಾತಕಾರಿ ವಿಷಯವೆಂದರೆ ಸಂತ್ರಸ್ತರೆಲ್ಲರೂ ದೇಶದ ಈಶಾನ್ಯ ಪ್ರದೇಶದ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದಾರೆ.

Hibu Special Commissioner
ದೆಹಲಿ ಪೊಲೀಸ್ ವಿಶೇಷ ಆಯುಕ್ತ ಹಿಬು ವಿಶೇಷ ಸಂದರ್ಶನ

ಲಿವ್-ಇನ್ ಸಂಬಂಧದ ಬಗ್ಗೆ ದೊಡ್ಡ ಪ್ರಶ್ನೆ: ಅನೇಕ ಸಂದರ್ಭಗಳಲ್ಲಿ ಹುಡುಗಿಯರು ತಮ್ಮ ಗೆಳೆಯರಿಂದ ಎಲ್ಲಾ ರೀತಿಯ ಶೋಷಣೆಯನ್ನು ಅನುಭವಿಸಬೇಕಾಗುತ್ತದೆ. ಶ್ರದ್ಧಾ-ಅಫ್ತಾಬ್ ಘಟನೆ ಅಂತಹ ಲಿವ್ ಇನ್ ಸಂಬಂಧದ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ 'ಈಟಿವಿ ಭಾರತ'ದ ಹಿರಿಯ ವರದಿಗಾರ ಗೌತಮ್ ಡೆಬ್ರಾಯ್ ಅವರು ದೆಹಲಿ ಪೊಲೀಸ್ ವಿಶೇಷ ಆಯುಕ್ತ ರಾಬಿನ್ ಹಿಬು ಅವರೊಂದಿಗೆ ಮಾತನಾಡಿದ್ದಾರೆ. ಇಂತಹ ಘಟನೆಗಳಿಂದ ಆಘಾತಕ್ಕೊಳಗಾದ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ರಾಬಿನ್ ಹಿಬು ಎಲ್ಲಾ ಯುವಕರು ನೈತಿಕ ಶಿಕ್ಷಣವನ್ನು ಅನುಸರಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಪ್ರೇಮಿಯನ್ನು ನಂಬಿ ಪೋಷಕರನ್ನು ಬಿಟ್ಟು ಬಂದ ಯುವತಿ.. ತುಂಡಾಗಿ ಕತ್ತರಿಸಿ ಬೀದಿಗಳಲ್ಲಿ ಎಸೆದ ಪ್ರಿಯಕರ!

'ಈಟಿವಿ ಭಾರತ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ದೆಹಲಿ ಪೊಲೀಸ್ ವಿಶೇಷ ಆಯುಕ್ತ ಹಿಬು, 'ಪ್ರತಿಯೊಬ್ಬರಿಗೂ ತಮ್ಮದೇ ಆದ ರೀತಿಯಲ್ಲಿ ಬದುಕುವ ಹಕ್ಕಿದೆ. ಆದರೆ ಓರ್ವ ಹಿರಿಯ ಸಹೋದರನಾಗಿ, ಮದುವೆಯ ಪಾವಿತ್ರ್ಯತೆ ಇಲ್ಲದ ಈ ರೀತಿಯ ಲಿವ್ ಇನ್ ರಿಲೇಶನ್ ಶಿಪ್ ಅನ್ನು ನಾನು ಒಪ್ಪಿಕೊಳ್ಳುವುದಿಲ್ಲ' ಎಂದಿದ್ದಾರೆ.

ಪ್ರೀತಿಸುವುದರಲ್ಲಿ ತಪ್ಪಿಲ್ಲ. ಆದರೆ ನಾನು ಹೇಳುವುದೇನೆಂದರೆ ಯಾವುದೇ ಸಂಬಂಧಕ್ಕೆ ಧುಮುಕುವ ಮೊದಲು, ನೀವು ಪ್ರೀತಿಸುವ ಹುಡುಗ ಅಥವಾ ಹುಡುಗಿ ನಿಮ್ಮ ಜೀವನ ಸಂಗಾತಿಯಾಗುವ ಅರ್ಹತೆ ಇದ್ದರೂ ಇಲ್ಲದಿದ್ದರೂ ಪ್ರೀತಿಯನ್ನು ನೀಡುವ ಗುಣಗಳನ್ನು ಹೊಂದಿರಬೇಕು ಎಂಬುವುದನ್ನು ನೀವು ತಿಳಿದಿರಬೇಕು ಎಂದು ಸಲಹೆ ಕೊಟ್ಟಿದ್ದಾರೆ.

ನೈತಿಕ ನಿಯಮ ಪಾಲನೆ ಅಗತ್ಯ: ಮಹಾನಗರಗಳಲ್ಲಿ ಉದ್ಯೋಗ ಅಥವಾ ಓದುತ್ತಿರುವ ಯುವಕರು ಪಾಲಕರು ದೂರವಾಗಿದ್ದಾರೆ. ಹಾಗಾಗಿ ಅವರು ಪ್ರೀತಿಯಲ್ಲಿ ಬೀಳುವ ಸಂಭವ ಹೆಚ್ಚು. ಆದರೆ ನಿಮ್ಮದೇ ಆದ ನೈತಿಕ ನಿಯಮ ಪಾಲನೆ ಅನುಸರಿಸಬೇಕು. ವರದಿಗಳ ಪ್ರಕಾರ ಅಫ್ತಾಬ್ ಕೂಡ ಮಾದಕ ವ್ಯಸನಿಯಾಗಿದ್ದ ಮತ್ತು ಶ್ರದ್ಧಾ ಜತೆ ಜಗಳವಾಡುತ್ತಿದ್ದ. ಒಬ್ಬ ವ್ಯಕ್ತಿ ಮಾದಕ ವ್ಯಸನಿಯಾಗಿದ್ದರೆ ಅಥವಾ ಇನ್ನೊಬ್ಬ ಗೆಳತಿಯನ್ನು ಹೊಂದಿದ್ದರೆ ಹುಡುಗಿಯರು ಯಾವುದೇ ಸಂಬಂಧವನ್ನು ಬೆಳೆಸುವ ಮೊದಲು ಇದೆಲ್ಲವನ್ನೂ ತಿಳಿದಿರಬೇಕು ಎಂದರು.

ಸಾವಿರಾರು ಯುವಕರು ತಮ್ಮ ಉನ್ನತ ಶಿಕ್ಷಣ ಅಥವಾ ಉತ್ತಮ ವೃತ್ತಿಜೀವನದ ಕನಸುಗಳನ್ನು ಈಡೇರಿಸಲು ದೆಹಲಿ ಮತ್ತು ಇತರ ಮಹಾನಗರಗಳಿಗೆ ವಲಸೆ ಹೋಗುತ್ತಾರೆ. ಈಶಾನ್ಯದಿಂದ ಸಾಮೂಹಿಕ ವಲಸೆ ಇದೆ. ನಮಗೆ ರಾಜ್ಯದಲ್ಲಿ ಹೆಚ್ಚಿನ ಅವಕಾಶಗಳಿಲ್ಲದ ಕಾರಣ, ಅವರು ದೊಡ್ಡ ನಗರಗಳ ಕಡೆಗೆ ಹೋಗುತ್ತಾರೆ. ಅನೇಕ ಯುವಕರು ಅಸಂಘಟಿತ ಖಾಸಗಿ ವಲಯಕ್ಕೆ ಸೇರುತ್ತಾರೆ. ಅಂಕಿ-ಅಂಶಗಳ ಪ್ರಕಾರ 2021ರಲ್ಲಿ ಐಎಎಸ್ ಆಕಾಂಕ್ಷಿಗಳು, ಸ್ಪಾ ಹುಡುಗಿಯರು, ಗಗನ ಸಖಿಯರು ಸೇರಿದಂತೆ ಈಶಾನ್ಯದ 16 ಯುವತಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಭಾಷೆಯ ತೊಡಕು: ಈಶಾನ್ಯದ ಜನರಿಗೆ ಭಾಷೆ ಹೆಚ್ಚಾಗಿ ತೊಡಕಾಗಿದೆ. ಹಲವರಿಗೆ ಭಾಷೆಯ ಅರಿವಿಲ್ಲ ಮತ್ತು ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೌಶಲ್ಯ ತರಬೇತಿ ಉತ್ತಮವಾಗಿರಬೇಕು. ಇಂಗ್ಲಿಷ್, ಹಿಂದಿ ಮತ್ತು ಇತರ ಕೆಲವು ಭಾಷೆಗಳನ್ನು ಕಲಿತಿರಬೇಕು ಎಂದು ಹಿಬು ಹೇಳಿದರು.

ಇದನ್ನೂ ಓದಿ: ಶ್ರದ್ಧಾ ಹತ್ಯೆ ಪ್ರಕರಣ: ಆರೋಪಿಯನ್ನು ಕಾಡಿಗೆ ಕರೆದೊಯ್ದು ಪೊಲೀಸರಿಂದ ತನಿಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.