ಅಗರ್ತಲಾ (ತಿಪುರಾ): ತ್ರಿಪುರಾದ ಅಗರ್ತಲಾದಲ್ಲಿ ಏಡ್ಸ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಚುಚ್ಚುಮದ್ದಿನ ಡ್ರಗ್ಸ್ ಬಳಕೆಯಿಂದಾಗಿ ಹೆಚ್ಐವಿ ಪಾಸಿಟಿವ್ ಕೇಸ್ ಪತ್ತೆಯಾಗುತ್ತಿದ್ದು, ಇದರಿಂದ ತ್ರಿಪುರ ಏಡ್ಸ್ ನಿಯಂತ್ರಣ ಸೊಸೈಟಿಯು ಎಚ್ಚೆತ್ತುಕೊಂಡಿದೆ.
ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಹೆಚ್‌ಐವಿ ಪಾಸಿಟಿವ್ ಅನಿಯಂತ್ರಿತವಾಗಿ ಹೆಚ್ಚುತ್ತಿದ್ದು, ಇದು ಆತಂಕಕಾರಿಯಾಗಿದೆ. ಹೀಗಾಗಿ ಎಲ್ಲ ಕೌನ್ಸಿಲರ್‌ಗಳೊಂದಿಗೆ ಸಭೆ ನಡೆಲಾಗಿದೆ. ಹೆಚ್‌ಐವಿ ಏಡ್ಸ್ ಮತ್ತು ಚುಚ್ಚುಮದ್ದಿನ ಔಷಧಗಳ ಬಳಕೆಯ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ರಾಜ್ಯ ಕಣ್ಗಾವಲು ಅಧಿಕಾರಿ ಮತ್ತು ಪ್ರಭಾರ ಯೋಜನಾ ನಿರ್ದೇಶಕ ಡಾ.ದೀಪ್ ಕುಮಾರ್ ದೆಬ್ಬರ್ಮಾ ತಿಳಿಸಿದ್ದಾರೆ.
ಅಲ್ಲದೇ, ಕಳೆದ ವರ್ಷಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಹೆಚ್‌ಐವಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೆ, ಕಳೆದ ಕೆಲವು ತಿಂಗಳಲ್ಲಿ ಅಗರ್ತಲಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಅಗರ್ತಲಾದ 59 ವಾರ್ಡ್‌ಗಳಲ್ಲಿ ಅರ್ಧದಷ್ಟು ವಾರ್ಡ್‌ಗಳ ಜನರು ಚುಚ್ಚುಮದ್ದಿನ ಡ್ರಗ್ಸ್ ಬಳಸುತ್ತಿದ್ದಾರೆ. ಈ ಚುಚ್ಚುಮದ್ದಿನ ಡ್ರಗ್ಸ್ ಬಳಕೆದಾರರಲ್ಲಿ ಹೆಚ್ಚಿನವರು 16-24 ವರ್ಷದೊಳಗಿನವರೇ ಆಗಿದ್ಧಾರೆ. ಇದುವರೆಗೆ ಸುಮಾರು 500ಕ್ಕೂ ಹೆಚ್ಚು ಜನ ಯುವಕರನ್ನು ಗುರುತಿಸಲಾಗಿದೆ. ಇದರಲ್ಲಿ 400ಕ್ಕೂ ಹೆಚ್ಚು ಜನರಿಗೆ ಹೆಚ್ಐವಿ ಪಾಸಿಟಿವ್ ಪತ್ತೆಯಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ನಿನ್ನ ಬೆಳವಣಿಗೆಗೆ ಚಿಕ್ಕಪ್ಪನ ಮನೆಯವರೇ ಅಡ್ಡಿ ಎಂದ ಸ್ವಾಮೀಜಿ: ಗರ್ಭಿಣಿ ಸೇರಿ ಮೂವರನ್ನು ಕೊಲೆಗೈದ ಯುವಕ