ETV Bharat / bharat

ವಿಶ್ವದ ಅತಿದೊಡ್ಡ ಆಲದ ಉದ್ಯಾನ ನಿರ್ಮಾಣ; ದಾಖಲೆ ಬರೆದ 500 ಮಹಿಳೆಯರ ಶ್ರಮ

ರಾಜಸ್ಥಾನದ ಜೈಪುರದಲ್ಲಿ 'ಅತಿದೊಡ್ಡ ಆಲದ ಸಸಿ ನೆಡುವಿಕೆ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯವು 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಿಂದ ಗುರುತಿಸಲ್ಪಟ್ಟಿದೆ.

Jaipur
ಅತಿದೊಡ್ಡ ಆಲದ ಉದ್ಯಾನ ನಿರ್ಮಾಣ
author img

By

Published : Aug 10, 2021, 7:44 AM IST

Updated : Aug 10, 2021, 8:53 AM IST

ಜೈಪುರ (ರಾಜಸ್ಥಾನ): ಮಹಾವೀರ್ ಇಂಟರ್‌ನ್ಯಾಷನಲ್ ಪಿಂಕ್ ಸಿಟಿ ಮತ್ತು ಗ್ರಾಮ ಪಂಚಾಯತ್ ಮಂದ ಭೋಪವಾಸ್​ ಜಂಟಿ ಕಾರ್ಯದ ಮೂಲಕ ರಾಜಸ್ಥಾನದ ಜೈಪುರದಲ್ಲಿ 'ಅತಿದೊಡ್ಡ ಆಲದ ಸಸಿ ನೆಡುವಿಕೆ' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯವೀಗ ವಿಶ್ವ ದಾಖಲೆ ಬರೆದಿದೆ.

ಅತಿದೊಡ್ಡ ಆಲದ ಉದ್ಯಾನ ನಿರ್ಮಾಣ

ಆಗಸ್ಟ್ 8ರಂದು ಮಂದ ಭೋಪವಾಸ್ ಗ್ರಾಮದಲ್ಲಿ ಸುಮಾರು 500 ಮಹಿಳೆಯರ ತಂಡ ಪರಿಸರ ಉಳಿಸುವ ದೃಷ್ಟಿಯಿಂದ 2,100 ಸಸಿಗಳನ್ನು ನೆಟ್ಟಿದ್ದಾರೆ. ಅದರಲ್ಲಿ 500 ಆಲದ ಸಸಿಗಳಾಗಿವೆ. ಉಳಿದಂತೆ ಅನೇಕ ಹಣ್ಣಿನ ಗಿಡಗಳನ್ನು ಸಹ ಇಲ್ಲಿ ನೆಡಲಾಗಿದೆ. ಈ ನೆಡುತೋಪು ಉಪಕ್ರಮವು 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಿಂದ ಗುರುತಿಸಲ್ಪಟ್ಟಿದೆ.

ವಿಶ್ವದ ಅತಿದೊಡ್ಡ ಆಲದ ಉದ್ಯಾನವನ್ನು 16 ಬಿಘಾ (1 ಬಿಘಾ ಎಂದರೆ 0.17 ಹೆಕ್ಟೇರ್​) ಭೂಮಿಯಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿನ ಜನರ ಒಗ್ಗಟ್ಟಿನ ಈ ಕಾರ್ಯ ಭವಿಷ್ಯದಲ್ಲಿ ಪರಿಸರ ಕ್ರಾಂತಿ ಮೂಡಿಸುವಲ್ಲಿ ಯಶಸ್ವಿಯಾಗಲಿದೆ ಎನ್ನಬಹುದು.

ಆಲದ ಸಸಿ ನೆಡಲು ಪ್ರೇರಣೆ ಮತ್ತು ಉಪಯೋಗ: ಭಾರತದ ರಾಷ್ಟ್ರೀಯ ಮರ ಆಲದ ಮರ. ಇದನ್ನು ಇನ್ನಷ್ಟು ಬೆಳೆಸಬೇಕು ಎಂಬ ದೃಷ್ಟಿಯಿಂದ ಇಲ್ಲಿನ ಜನರು ಖಾಲಿಯಾಗಿದ್ದ ಭೂಮಿಯಲ್ಲಿ ಸಸಿಗಳನ್ನು ನೆಟ್ಟಿದ್ದಾರೆ. ಆಲದ ಮರ ಒಮ್ಮೆ ನೆಲದ ಮೇಲೆ ಬೇರು ಬಿಟ್ಟರೆ ನೂರಾರು ವರ್ಷಗಳ ಕಾಲ ಬೆಳೆದು ಬದುಕುತ್ತವೆ. ಆಲದ ಮರ ಬೆಳೆದಂತೆ ಅನೇಕ ಬಿಳಲುಗಳನ್ನು ಹೊಂದಿ ವಿಸ್ತಾರವಾಗುತ್ತಾ, ಅನೇಕ ಜೀವ ಜಂತುಗಳಿಗೆ ಆಶ್ರಯ ನೀಡುತ್ತದೆ. ಆಲದ ಸಸಿ ನೆಡಲು ಮುಖ್ಯ ಕಾರಣವೆಂದರೆ ಪರಿಸರ ಸಂರಕ್ಷಣೆಯಾಗಿದೆ.

Last Updated : Aug 10, 2021, 8:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.