ETV Bharat / bharat

ಲಸಿಕೆ ಪಡೆಯದೇ ಹೊರಗೆ ಹೋದ್ರೆ 500 ರೂ. ದಂಡ: ವ್ಯಾಕ್ಸಿನೇಷನ್​ ಹೆಚ್ಚಿಸಲು ಪುರಸಭೆ ಹೊಸ ಕ್ರಮ - aurangabad vaccination news

ಮಹಾರಾಷ್ಟ್ರದ ಔರಂಗಾಬಾದ್​​ನಲ್ಲಿ ಕೊರೊನಾ ವ್ಯಾಕ್ಸಿನೇಷನ್​ ಚುರುಕುಗೊಳಿಸಲು ಪುರಸಭೆ ಮುಂದಾಗಿದ್ದು, ಒಂದು ವೇಳೆ ಲಸಿಕೆ ಪಡೆಯದೇ ಇದ್ದಲ್ಲಿ 45 ವರ್ಷ ಮೇಲ್ಪಟ್ಟವರು 500 ರೂಪಾಯಿ ದಂಡ ತೆರಬೇಕಾಗುತ್ತದೆ.

vaccine
vaccine
author img

By

Published : Jun 5, 2021, 10:15 PM IST

ಔರಂಗಾಬಾದ್​: ಲಸಿಕೆ ಪಡೆಯಲು ಉತ್ತೇಜಿಸುವ ಸಲುವಾಗಿ ಇಲ್ಲಿನ ಪುರಸಭೆ ಹೊಸ ಕ್ರಮಕ್ಕೆ ಮುಂದಾಗಿದ್ದು, ಪುರಸಭೆ ವ್ಯಾಪ್ತಿಯೊಳಗೆ 45 ವರ್ಷ ಮೇಲ್ಪಟ್ಟವರು ಸಂಚರಿಸಬೇಕಾದರೆ ಕೊರೊನಾ ವ್ಯಾಕ್ಸಿನ್​ ಹಾಕಿಸಿಕೊಳ್ಳುವುದು ಕಡ್ಡಾಯ. ಇಲ್ಲವಾದರೆ 500 ರೂ ದಂಡ ವಿಧಿಸಲು ಪುರಸಭೆ ಯೋಜಿಸಿದೆ.

ವ್ಯಾಕ್ಸಿನೇಷನ್​ ಹೆಚ್ಚಿಸಲು ಮುನ್ಸಿಪಲ್ ಕಾರ್ಪೊರೇಶನ್‌ ಪ್ರಯತ್ನ :

ಔರಂಗಾಬಾದ್ ನಗರದಲ್ಲಿ 17 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಅವರ ಪ್ರಕಾರ, ನಗರದಲ್ಲಿ ಶೇ. 20 ಅಂದರೆ 3 ಲಕ್ಷ 8 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ ಅಷ್ಟೆ. ಇದರಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು ಕೂಡ ಇದ್ದಾರೆ. ಹೀಗಾಗಿ ಸಾರ್ವಜನಿಕರಿಗೆ ಲಸಿಕೆ ನೀಡುವ ಉದ್ದೇಶದಿಂದ ಪುರಸಭೆ ಹೊಸ ಕಾರ್ಯಕ್ಕೆ ಮುಂದಾಗಿದ್ದು, ಲಸಿಕೆ ಪಡೆಯದೇ ಹೊರಗೆ ಹೋದರೆ 45 ವರ್ಷ ದಾಟಿದವರಿಗೆ ಪುರಸಭೆ 500 ರೂ. ದಂಡ ವಿಧಿಸುತ್ತದೆ ಎಂದು ಡಾ.ನೀತಾ ಪಡಲ್ಕರ್ ಮಾಹಿತಿ ನೀಡಿದರು.

ನಗರದಲ್ಲಿ ಲಸಿಕೆಗಳು ಲಭ್ಯವಿದೆ;

ಲಸಿಕೆಗಳು ಲಭ್ಯವಿಲ್ಲದ ಕಾರಣ ಎರಡು ವಾರಗಳ ಹಿಂದೆ ವ್ಯಾಕ್ಸಿನೇಷನ್ ಅಭಿಯಾನ ನಿಲ್ಲಿಸಲಾಯಿತು. ಅಷ್ಟೇ ಅಲ್ಲ, 18 ರಿಂದ 44 ವರ್ಷದೊಳಗಿನ ನಾಗರಿಕರಿಗೆ ಲಸಿಕೆ ಹಾಕುವುದನ್ನು ನಿಲ್ಲಿಸಲಾಗಿದೆ. ಆದರೆ, 45 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಈಗ ಲಸಿಕೆಗಳ ದಾಸ್ತಾನು ಲಭ್ಯ ಇರುವುದರಿಂದ ಲಸಿಕೆ ಪಡೆಯುವಂತೆ ಜನರಿಗೆ ಮನವಿ ಮಾಡಿದೆ. ಒಂದು ವೇಳೆ ಲಸಿಕೆ ಪಡೆಯದೇ ಇದ್ದಲ್ಲಿ 500 ರೂ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಮುನ್ಸಿಪಲ್ ಕಾರ್ಪೊರೇಶನ್‌ ಎಚ್ಚರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.