ETV Bharat / bharat

ಕೊರೊನಾ ಆಯ್ತು, ಈಗ ವಿಭಿನ್ನ ಡೆಂಗ್ಯೂ ಹಾವಳಿ: 40 ಮಕ್ಕಳು ಸೇರಿ ಕನಿಷ್ಠ 50 ಮಂದಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್ ಮಾತ್ರವಲ್ಲದೇ, ಮಥುರಾ ಮತ್ತು ಆಗ್ರಾ ಜಿಲ್ಲೆಗಳಲ್ಲೂ ಡೆಂಗ್ಯೂ ಹೆಮರಾಜಿಕ್ ಫೀವರ್​ ಹಾವಳಿ ಜೋರಾಗಿದ್ದು, 40 ಮಕ್ಕಳನ್ನು ಬಲಿ ತೆಗೆದುಕೊಂಡಿದೆ.

50 dies due to dengue fever in  western-uttar-pradesh
ಕೊರೊನಾ ಆಯ್ತು..ಈಗ ವಿಭಿನ್ನ ಡೆಂಗ್ಯೂ ಹಾವಳಿ: 40 ಮಕ್ಕಳು ಸೇರಿ ಕನಿಷ್ಠ 50 ಮಂದಿ ಸಾವು
author img

By

Published : Sep 3, 2021, 3:22 PM IST

Updated : Sep 3, 2021, 3:32 PM IST

ಲಖನೌ(ಉತ್ತರ ಪ್ರದೇಶ): ಡೆಂಗ್ಯೂ ಜ್ವರದ ಹಾವಳಿಯಿಂದ ಕೇವಲ 10 ದಿನಗಳಲ್ಲಿ 40 ಮಕ್ಕಳು ಸೇರಿ ಕನಿಷ್ಠ 50 ಮಂದಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಡೆಂಗ್ಯೂಗಿಂತ ತುಂಬಾ ಅಪಾಯಕಾರಿಯಾದ ಡೆಂಗ್ಯೂ ಹೆಮರಾಜಿಕ್ ಫೀವರ್‌ನಿಂದ​ (ಡೆಂಗ್ಯೂ ರಕ್ತಸ್ರಾವ ಜ್ವರ) ಅವರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಫಿರೋಜಾಬಾದ್ ಮಾತ್ರವಲ್ಲದೇ, ಪಶ್ಚಿಮ ಜಿಲ್ಲೆಗಳಾದ ಮಥುರಾ ಮತ್ತು ಆಗ್ರಾ ಜಿಲ್ಲೆಗಳಲ್ಲೂ ಕೂಡಾ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವೈರಲ್ ಫೀವರ್ ಮತ್ತು ನಿರ್ಜಲೀಕರಣದಿಂದ ಮಕ್ಕಳು ಬಳಲುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 'ವಿಶ್ವ ಆರೋಗ್ಯ ಸಂಘಟನೆಯ ತಂಡವೂ ಕೂಡಾ ಇದು ಹೆಮರಾಜಿಕ್ ಡೆಂಗ್ಯೂ ಎಂದು ಹೇಳಿದೆ. ಇದು ಅತ್ಯಂತ ಅಪಾಯಕಾರಿ ಡೆಂಗ್ಯೂ. ಮಕ್ಕಳ ಪ್ಲೇಟ್‌ಲೆಟ್ ಎಣಿಕೆ ಇದ್ದಕ್ಕಿದ್ದಂತೆ ಕುಸಿದು ರಕ್ತಸ್ರಾವವಾಗುತ್ತದೆ ಎಂದು ಫಿರೋಜಾಬಾದ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ ಹೇಳಿದ್ದಾರೆ.

ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (NCDC) ಮತ್ತು ರಾಷ್ಟ್ರೀಯ ವೆಕ್ಟರ್ ಬೋರ್ನ್ ಡಿಸೀಸ್ ಕಂಟ್ರೋಲ್ ಪ್ರೋಗ್ರಾಂನ ತಜ್ಞರ ತಂಡವನ್ನು ಫಿರೋಜಾಬಾದ್​ನ ಆರೋಗ್ಯ ಅಧಿಕಾರಿಗಳಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರವು ಸರ್ಕಾರವು ಕಳಿಸಿದೆ.

ಇದನ್ನೂ ಓದಿ: ತಮಿಳುನಾಡು ಮಾದರಿಯಲ್ಲಿ ತೈಲದ ಮೇಲಿನ ಸೆಸ್ ಕಡಿತ: ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಎಂದ ಬೈರತಿ ಬಸವರಾಜ್

ಫಿರೋಜಾಬಾದ್‌ನಿಂದ 60 ಕಿಮೀ ದೂರದಲ್ಲಿರುವ ಮಥುರಾ ಬಳಿಯ ಕೋಹ್ ಎಂಬ ಒಂದೇ ಗ್ರಾಮದಲ್ಲಿ ಕಳೆದ 15 ದಿನಗಳಲ್ಲಿ ಸುಮಾರು 11 ಮಕ್ಕಳು ವೈರಲ್ ಫೀವರ್ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಈವರೆಗೆ 15 ಮಂದಿ ಡೆಂಗ್ಯೂನಿಂದ ಸಾವನ್ನಪ್ಪಿದ್ದಾರೆ.

ರಾಷ್ಟ್ರ ರಾಜಧಾನಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಹಾಪುರದಲ್ಲಿಯೂ ಕೂಡಾ ಡೆಂಗ್ಯೂ ಹಾವಳಿ ತೀವ್ರವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಅದರಲ್ಲೂ ಮಕ್ಕಳು ಹೆಚ್ಚಾಗಿ ಕಂಡುಬರುತ್ತಿದ್ದಾರೆ.

'ಪಾಠ ಕಲಿಯಲಿಲ್ಲವೇ..?'

ಉತ್ತರ ಪ್ರದೇಶದ ಡೆಂಗ್ಯೂ ಹಾವಳಿಯ ವಿಚಾರಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಯೋಗಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ನೂರಕ್ಕೂ ಹೆಚ್ಚು ಮಂದಿ ರಾಜ್ಯದಲ್ಲಿ ಡೆಂಗ್ಯೂನಿಂದ ಸಾವನ್ನಪ್ಪಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  • The news of over 100 lives being lost to a viral fever in UP needs immediate attention.
    Has the UP government not learnt any lessons from the horrific consequences of its disastrous Covid management in the 2nd wave? 1/2

    — Priyanka Gandhi Vadra (@priyankagandhi) September 3, 2021 " class="align-text-top noRightClick twitterSection" data=" ">

ಕೋವಿಡ್ ಎರಡನೇ ಅಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಯಾವುದೇ ಪಾಠ ಕಲಿಯಲಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಡೆಂಗ್ಯೂ ಪೀಡಿತರಿಗೆ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾದಷ್ಟೂ ಮಟ್ಟಿಗೆ ಕ್ರಮ ಕೈಗೊಳ್ಳಬೇಕು. ರೋಗ ಹರಡದಂತೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ಫಿರೋಜಾಬಾದ್‌ಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಗ್ಯಾಧಿಕಾರಿಗಳನ್ನು ಭೇಟಿಯಾಗಿ, ಡೆಂಗ್ಯೂ ಪೀಡಿತರ ಚಿಕಿತ್ಸೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದರು.

Last Updated : Sep 3, 2021, 3:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.