ನಳಂದಾ(ಬಿಹಾರ): ಬಿಹಾರದಲ್ಲಿ ಮಗನ ಜನ್ಮದಿನದ ಪಾರ್ಟಿಯ ವೇಳೆ ಐದು ವರ್ಷದ ಮುಗ್ದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಮಗನ ಬರ್ತ್‌ಡೇ ಪಾರ್ಟಿ ವೇಳೆ ಆರೋಪಿ ತಂದೆ ಕುಡಿದು ಬಂದು ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿ ಸೋದರ ಮಾವ ಹಿಲ್ಸಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾನೆ.
ಸಂತ್ರಸ್ತ ಬಾಲಕಿ ಗ್ರಾಮದ ಸೊಸೆಯಾಗಿದ್ದು, ಆಕೆ ತನ್ನ ತಾಯಿಯ ತವರು ಮನೆಯಲ್ಲಿ ಓದುತ್ತಿದ್ದಾಳೆ. ಗುರುವಾರ ಸಂಜೆಯಾದರೂ ಮನೆಗೆ ಬಾರದೆ ಇದ್ದಾಗ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಆಗ ಪಾನಮತ್ತ ಸತ್ಯನಾರಾಯಣ ಸಿಂಗ್ ಎಂಬ ವ್ಯಕ್ತಿಯೂ ಬಾಲಕಿಯನ್ನು ಕರೆದುಕೊಂಡು ಹೋಗಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಪಾನಮತ್ತ ವ್ಯಕ್ತಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಸತ್ಯನಾರಾಯಣ ಸಿಂಗ್ ಎಂಬ ವ್ಯಕ್ತಿ ಮದ್ಯದ ಅಮಲಿನಲ್ಲಿ ಬಾಲಕಿಯನ್ನು ತನ್ನ ಮಡಿಲಲ್ಲಿ ಎತ್ತಿಕೊಂಡು ಚಾಕೊಲೇಟ್ ತಿನ್ನಿಸುತ್ತಿದ್ದನು ಎಂದು ಜನರು ಮಾಹಿತಿ ನೀಡಿದ ಮೇರೆಗೆ ಬಾಲಕಿ ಸಂಬಂಧಿಕರು ತರಾತುರಿಯಲ್ಲಿ ವ್ಯಕ್ತಿಯ ಮನೆಗೆ ಹೋಗಿದ್ದಾರೆ. ಅಲ್ಲಿ ಆತನು ಮಗನ ಜನ್ಮದಿನದ ಆಚರಣೆ ಪಾರ್ಟಿ ನಡೆಯುತ್ತಿತ್ತು. ಮನೆಗೆ ಹೋದ ವೇಳೆ ಬಾಲಕಿ ಎಲ್ಲಿಯೂ ಕಾಣಿಸಲಿಲ್ಲ. ಮತ್ತೆ ಭಯಭೀತರಾಗಿ ಹುಡುಕಾಟ ಆರಂಭಿಸಿದ್ದಾರೆ.
ಬಾಲಕಿ ಬಟ್ಟೆಯಿಲ್ಲದೇ ಸಮೀಪದ ಬೀದಿ ಸಮೀಪದ ನಿರ್ಜನ ಪ್ರದೇಶದಲ್ಲಿ ಅಳುತ್ತಾ ಮಲಗಿದ್ದರ ಬಗ್ಗೆ ಅಪರಚಿತರಿಂದ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಸಂಬಂಧಿಕರು ಬರುತ್ತಿದ್ದಂತೆ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ನೋಡಿದ ಪೋಷಕರು, ಹಿಲ್ಸಾ ವಿಭಾಗದ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಾಕೊಲೇಟ್ ನೀಡಿ ಬಾಲಕಿಗೆ ಆಮಿಷ: ಚಾಕೊಲೇಟ್ ಆಮಿಷ ತೋರಿಸಿ ಬಾಲಕಿಯನ್ನು ಸತ್ಯನಾರಾಯಣ ಸಿಂಗ್ ವ್ಯಕ್ತಿಯೊಬ್ಬನು ಬಲವಂತವಾಗಿ ಕರೆದೊಯ್ದು ಅತ್ಯಾಚಾರ ವೆಸಗಿದ್ದಾನೆ ಎಂದು ಸ್ಥಳೀಯರ ಹೇಳಿಕೆಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವೈದ್ಯಕೀಯ ವರದಿ ಬಂದ ನಂತರ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿಲ್ಸಾ ಉಪವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಮುರಾರಿ ತಿಳಿಸಿದ್ದಾರೆ.
ವೈದ್ಯಕೀಯ ವರದಿಗೆ ಕಾಯುತ್ತಿರುವ ಪೊಲೀಸರು: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಸದ್ಯ ಗ್ರಾಮದಿಂದ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಜಾಲಬೀಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ವರದಿ ಬಂದ ತಕ್ಷಣ ತನಿಖೆ ಚುರುಕುಗೊಳ್ಳಲಿದೆ.
ಇದನ್ನೂಓದಿ:Delhi Woman Killed: ದೆಹಲಿಯಲ್ಲಿ ಮಹಿಳೆಯನ್ನು ಗುಂಡಿಕ್ಕಿ ಹತ್ಯೆಗೈದು ಯುವಕ ಆತ್ಮಹತ್ಯೆ