ETV Bharat / bharat

ಕೋವಿಡ್ ಮಹಾಮಾರಿಗೆ 5 ತಿಂಗಳ ಮಗು ಬಲಿ; ಹೆಚ್ಚಿದ ಆತಂಕ

ಎರಡನೇ ಹಂತದ ಕೋವಿಡ್ ಅಲೆಗೆ ದೆಹಲಿಯಲ್ಲಿ 5 ತಿಂಗಳ ಮಗುವೊಂದು ಬಲಿಯಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

5-month-old child who died due to COVID19

author img

By

Published : May 14, 2021, 4:20 PM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ಗೆ ಇದೀಗ ಐದು ತಿಂಗಳ ಮಗುವೊಂದು ಬಲಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಅದರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಜ್ವರದಿಂದ ಬಳಲುತ್ತಿದ್ದ ಐದು ತಿಂಗಳ ಮಗುವನ್ನ ದಿಲ್ಶಾದ್ ಗಾರ್ಡ್​​ನಲ್ಲಿರುವ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತದನಂತರ ಚಾಚಾ ನೆಹರೂ ಬಾಲ್​ ಚಿಕಿತ್ಸಾಲಯಕ್ಕೆ ಮಗುವನ್ನ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿ ಸೋಂಕು ತಗುಲಿರುವುದು ದೃಢಗೊಂಡಿದೆ. ಹೀಗಾಗಿ ಮಗುವನ್ನ ಜಿಟಿಬಿ ಆಸ್ಪತ್ರೆ ಕರೆದೊಯ್ಯಲಾಗಿದೆ. ಮಗುವನ್ನ ಮೇ. 6ರಿಂದ ವೆಂಟಿಲೇಟರ್​​ನಲ್ಲಿಟ್ಟಿದ್ದರೂ ಮೇ 12ರಂದು ಸಾವನ್ನಪ್ಪಿದೆ. ಸೀಮಾಪುರಿ ಶವಾಗಾರದಲ್ಲಿ ಮಗುವಿನ ಅಂತ್ಯಕ್ರಿಯೆ ನಡೆಸಲಾಗಿದೆ.

  • She was burning with fever. We had approached a children's hospital in Dilshad Garden, then Chacha Nehru Bal Chikitsalaya where she was detected to be infected. Then she was referred to GTB Hospital where she was on ventilator since 6th May, she died on 12th: Pari's father pic.twitter.com/5nBHtYOoJK

    — ANI (@ANI) May 14, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಕೋವಿಡ್​ ಹೋರಾಟದಲ್ಲಿ 'ಹನುಮ ಪಡೆ'..100 ಮಂದಿ ತಂಡ ರಚಿಸಿ ನೆರವು

ಕೊರೊನಾ ವೈರಸ್​ನ ಎರಡನೇ ಹಂತದ ಕೋವಿಡ್​ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ದೇಶದಲ್ಲಿ ಈಗಾಗಲೇ ಸಾವಿರಾರು ಮಕ್ಕಳಿಗೆ ಈ ಸೋಂಕು ಕಂಡು ಬಂದಿದೆ. ಆದರೆ ಇದೀಗ ಐದು ತಿಂಗಳ ಮಗುವೊಂದು ಸಾವನ್ನಪ್ಪಿದ್ದು, ಎಲ್ಲರಲ್ಲೂ ಮತ್ತಷ್ಟು ಆತಂಕ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.