ETV Bharat / bharat

ತೆಲಂಗಾಣದಲ್ಲಿ ಪ್ರವಾಹ ಪರಿಸ್ಥಿತಿ : ನವವಿವಾಹಿತೆ ಸೇರಿ ನೀರಿನಲ್ಲಿ ಕೊಚ್ಚಿ ಹೋದ ಐವರು

ರಂಗಾರೆಡ್ಡಿ ಜಿಲ್ಲೆಯ ಶಂಕರಪಲ್ಲಿ ಮಂಡಲದ ಕೊತ್ತಪಲ್ಲಿ ಹೊಳೆಯಲ್ಲಿ ಕೂಡ ಕಾರೊಂದು ಕೊಚ್ಚಿ ಹೋಗಿದೆ. ವೆಂಕಟಯ್ಯ ಎಂಬ 70 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಐವರು ಕಾರಿನಲ್ಲಿ ಹಿಂದಿರುಗುವ ವೇಳೆ ಈ ಘಟನೆ ನಡೆದಿದ್ದು, ಉಳಿದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ..

ತೆಲಂಗಾಣದಲ್ಲಿ ಪ್ರವಾಹ ಪರಿಸ್ಥಿತಿ
ತೆಲಂಗಾಣದಲ್ಲಿ ಪ್ರವಾಹ ಪರಿಸ್ಥಿತಿ
author img

By

Published : Aug 30, 2021, 4:45 PM IST

ಹೈದರಾಬಾದ್(ತೆಲಂಗಾಣ) : ಆಗಸ್ಟ್​ 31ರವರೆಗೆ ತೆಲಂಗಾಣದಲ್ಲಿ ಭಾರಿ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈಗಾಗಲೇ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ವಿಕಾರಾಬಾದ್ ಮತ್ತು ರಂಗಾರೆಡ್ಡಿ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ನವ ವಿವಾಹಿತೆ ಸೇರಿದಂತೆ ಐವರು ಮಳೆಯಿಂದ ತುಂಬಿದ ಹೊಳೆಗಳಲ್ಲಿ ಕೊಚ್ಚಿ ಹೋಗಿದ್ದಾರೆ.

ನವಾಜ್ ರೆಡ್ಡಿ ಮತ್ತು ಪ್ರವಳಿಕಾ ಎಂಬುವರು ಆಗಸ್ಟ್ 26ರಂದು ವಿವಾಹವಾಗಿದ್ದರು. ವಿಕಾರಾಬಾದ್​ ಜಿಲ್ಲೆಯ ಮಾರ್ಪಲ್ಲಿ ಮಂಡಲದಲ್ಲಿರುವ ತಿಮ್ಮಾಪುರ ಹೊಳೆ ತುಂಬಿ ಹರಿಯುತ್ತಿದೆ. ನವ ವಿವಾಹಿತ ದಂಪತಿ ಸೇರಿದಂತೆ ಆರು ಜನರನ್ನು ಹೊತ್ತೊಯ್ಯುತ್ತಿದ್ದ ಕಾರು ನಿನ್ನೆ ರಾತ್ರಿ ಹೊಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯರ ಸಹಾಯದಿಂದ ನವಾಜ್ ರೆಡ್ಡಿ ಹಾಗೂ ಆತನ ಸಹೋದರಿ ರಾಧಮ್ಮಾರನ್ನು ರಕ್ಷಿಸಿದ್ದಾರೆ. ಪ್ರವಳಿಕಾ, ನವಾಜ್ ರೆಡ್ಡಿಯ ಸಹೋದರಿ ಶ್ರುತಿ ಮತ್ತು ಚಾಲಕ ರಘುವೇಂದರ್ ರೆಡ್ಡಿಯ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ನಾಪತ್ತೆಯಾಗಿರುವ ಇನ್ನೊಬ್ಬ ಬಾಲಕನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಅವಾಚ್ಯ ಶಬ್ದಗಳಿಂದ ನಿಂದನೆ: ಪ್ರಶ್ನಿಸಿದ ಮಹಿಳಾ ಪೊಲೀಸ್​ ಮೇಲೆ ಲಾಯರ್​ ಮಗನಿಂದ ಹಲ್ಲೆ

ರಂಗಾರೆಡ್ಡಿ ಜಿಲ್ಲೆಯ ಶಂಕರಪಲ್ಲಿ ಮಂಡಲದ ಕೊತ್ತಪಲ್ಲಿ ಹೊಳೆಯಲ್ಲಿ ಕೂಡ ಕಾರೊಂದು ಕೊಚ್ಚಿ ಹೋಗಿದೆ. ವೆಂಕಟಯ್ಯ ಎಂಬ 70 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಐವರು ಕಾರಿನಲ್ಲಿ ಹಿಂದಿರುಗುವ ವೇಳೆ ಈ ಘಟನೆ ನಡೆದಿದ್ದು, ಉಳಿದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.