ಇಂದೋರ್ : ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಐವರನ್ನು ಇಂದೋರ್ ಪೊಲೀಸರು ಬಂಧಿಸಿದ್ದಾರೆ.
ಡಿಆರ್‌ಐ ಇಂದೋರ್ ತಂಡವು ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಪ್ರಕರಣ ಬೇಧಿಸಿದ್ದು, ಬಂಧಿತರಿಂದ 18.18 ಕೆಜಿ ಚಿನ್ನ, 4,545 ಕೆಜಿ ಬೆಳ್ಳಿ ಮತ್ತು 32.35 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಸರಕುಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 42 ಕೋಟಿ ರೂ. ಯಷ್ಟಿದೆ. ಇಂದೋರ್ ಡಿಆರ್‌ಐ ಇತಿಹಾಸದಲ್ಲಿ ಇದು ಅತಿದೊಡ್ಡ ಕಳ್ಳಸಾಗಣೆ ಪ್ರಕರಣವಾಗಿದೆ.
ಕೋಲ್ಕತಾದಿಂದ ರಾಜನಂದಗಾಂವ್‌ಗೆ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ 2 ಜನರನ್ನು ಡಿಆರ್‌ಐ ರಾಯಪುರ ಘಟಕ ಬಂಧಿಸಿದೆ. ಅವರಿಂದ 13.53 ಕೆಜಿ ತೂಕದ ಚಿನ್ನದ ಗಟ್ಟಿ ಬಾರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆ ನಂತರ ಇದೇ ತಂಡವು ಚಿನ್ನ ತೆಗೆದುಕೊಳ್ಳಲು ಬಂದ ಇತರ ಇಬ್ಬರನ್ನು ಸಹ ಬಂಧಿಸಿದೆ. ಅವರ ಮೂಲಕ ಕಳ್ಳಸಾಗಣೆ ಮಾಡಿದ ಚಿನ್ನ ಮತ್ತು ಬೆಳ್ಳಿ ಖರೀದಿಸಿದ ಆಭರಣ ವ್ಯಾಪಾರಿಗಳನ್ನೂ ಬಂಧಿಸಲಾಗಿದೆ.