ಮುಂಬೈ: ಜಾಗತಿಕ ತಂತ್ರಜ್ಞಾನ ದೈತ್ಯ ಗೂಗಲ್ ಸಹಭಾಗಿತ್ವದಲ್ಲಿ ದೇಶದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ 4ಜಿ ಫೋನ್ ಬಿಡುಗಡೆ ಮಾಡುವ ಕಂಪನಿಯ ಯೋಜನೆಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅನಾವರಣಗೊಳಿಸಿದ್ದಾರೆ.
44 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ವಾಸ್ತವಿಕವಾಗಿ ಆರ್‌ಐಎಲ್‌ನ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಜಿಯೋಫೋನ್ ನೆಕ್ಸ್ಟ್' ಮುಂದಿನ ಸೆಪ್ಟೆಂಬರ್ 10 ರಂದು ಗಣೇಶ ಚತುರ್ಥಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಹೇಳಿದ್ದಾರೆ.
ರಿಲಯನ್ಸ್ ತನ್ನ ಮೊದಲ 4-ಜಿ ಫೋನ್ ಅನ್ನು ಗೂಗಲ್ ಮತ್ತು ಜಿಯೋ ಬುಕ್ ಸಹಯೋಗದೊಂದಿಗೆ ಬಿಡುಗಡೆ ಮಾಡಲಿದೆ. 5 ಜಿ ನೆಟ್ವರ್ಕ್ನಲ್ಲಿ 4 ಜಿ ಫೋನ್ ಬಳಕೆ ಮಾಡಬಹುದಾದ ಹೊಸ ಆವಿಷ್ಕಾರ ಇದಾಗಿದೆ.
ಇನ್ನು ಇದೇ ಸಂದರ್ಭದಲ್ಲಿ, ರಿಲಿಯನ್ಸ್ ಇಂಡಸ್ಟ್ರೀಸ್ ಬರೋಬ್ಬರಿ 10 ಲಕ್ಷ ಉದ್ಯೋಗಾವಕಾಶ ಸೃಷ್ಟಿಸುತ್ತಿದ್ದು, ನಿರುದ್ಯೋಗಿಗಳಿಗೆ ಈ ಆಫರ್ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.
ಹೊಸ ಮೊಬೈಲ್ ಫೀಚರ್ಸ್:
- ಜಿಯೋ ಮತ್ತು ಗೂಗಲ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಆಂಡ್ರಾಯ್ಡ್ ಓಎಸ್ ಆಪ್ಟಿಮೈಸ್ಡ್ ಆವೃತ್ತಿಯನ್ನು ಹೊಂದಿರಲಿದೆ
- ಗೂಗಲ್ ಮತ್ತು ಜಿಯೋದ ಅಪ್ಲಿಕೇಶನ್‌ಗಳನ್ನು ಬಳಸಬಹುದು
- ಟ್ರಾನ್ಸ್ಲೇಷನ್ ವೈಶಿಷ್ಟ್ಯಗಳು
- ಧ್ವನಿ ಸಹಾಯಕ
- ಸ್ನ್ಯಾಪ್‌ಚಾಟ್ ಗ್ಲಾಸ್ಗಳನ್ನು ನೇರವಾಗಿ ಫೋನ್‌ನ ಕ್ಯಾಮರಾಕ್ಕೆ ಅಳವಡಿಸಲಾಗುತ್ತದೆ.