ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದಲ್ಲಿ 485 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದು, ಅವುಗಳನ್ನ ಭರ್ತಿ ಮಡಿಕೊಳ್ಳುವುದು ನಿರಂತರ ಪ್ರಕ್ರಿಯೆ ಎಂದು ಕೇಂದ್ರ ಸಹಾಯಕ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಸಚಿವರು, ನಾಗರಿಕ ಸೇವಾ ಪರೀಕ್ಷೆ ನಡೆಸುವ ಕೇಂದ್ರ ಲೋಕಸೇವಾ ಆಯೋಗದಲ್ಲಿ 485 ಹುದ್ದೆಗಳು ಖಾಲಿ ಇವೆ ಎಂದಿದ್ದಾರೆ. ಇದರಲ್ಲಿ UPSC ಗ್ರೂಪ್ A ವಿಭಾಗದಲ್ಲಿ 45, ಗ್ರೂಪ್ B ವಿಭಾಗದಲ್ಲಿ 240 ಮತ್ತು ಗ್ರೂಪ್ C ವಿಭಾಗದಲ್ಲಿ 200 ಹುದ್ದೆಗಳು ಖಾಲಿ ಇರುವುದಾಗಿ ವಿವರಿಸಿದ್ದಾರೆ.
ಇದನ್ನೂ ಓದಿರಿ: ಒಡಿಶಾ ಪಂಚಾಯಿತಿ ಚುನಾವಣೆ: ಮತದಾರರ ಸೆಳೆಯಲು ಜೀವಂತ ಮೀನಿನೊಂದಿಗೆ ಮತಯಾಚನೆ
ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲು ಆಯಾ ಸಚಿವಾಲಯಗಳು ಅಥವಾ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ ಭಾರತೀಯ ಆಡಳಿತ ಸೇವೆ(IAS), ಭಾರತೀಯ ವಿದೇಶಾಂಗ ಸೇವೆ(IFS) ಮತ್ತು ಭಾರತೀಯ ಪೊಲೀಸ್ ಸೇವೆ(IPS) ಅಧಿಕಾರಿಗಳ ನೇಮಕ ಮಾಡಲು ಪರೀಕ್ಷೆ ನಡೆಸುತ್ತದೆ.