ETV Bharat / bharat

ವಿಶ್ವದ ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಜಾರ್ಖಂಡ್​ನ​ 47 ಪ್ರಾಧ್ಯಾಪಕರಿಗೆ ಸ್ಥಾನ - 47 professors from Jharkhand

ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿದ ವಿಶ್ವದ ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಜಾರ್ಖಂಡ್​ನ​ 47 ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ.

47-professors-from-jharkhand-found-place-among-top-two-percent-scientists-of-world
ವಿಶ್ವದ ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಜಾರ್ಖಂಡ್​ನ​ 47 ಪ್ರಾಧ್ಯಾಪಕರಿಗೆ ಸ್ಥಾನ
author img

By ETV Bharat Karnataka Team

Published : Oct 18, 2023, 5:52 PM IST

ರಾಂಚಿ (ಜಾರ್ಖಂಡ್‌): ವಿಶ್ವದ ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಜಾರ್ಖಂಡ್​ನ​ ಹೆಚ್ಚಿನ ಸಂಖ್ಯೆಯ ಪ್ರಾಧ್ಯಾಪಕರು ಹೆಸರು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ರಾಜ್ಯದ ವಿವಿಧ ಸಂಸ್ಥೆಗಳ 47 ಪ್ರಾಧ್ಯಾಪಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಒಟ್ಟಾರೆ ಈ ಪಟ್ಟಿಯಲ್ಲಿರುವ ವಿಜ್ಞಾನಿಗಳಲ್ಲಿ ಶೇ.2ರಷ್ಟು ಜಾರ್ಖಂಡ್​ನಿಂದಲೇ ಪ್ರತಿನಿಧಿಸುತ್ತಿದ್ದಾರೆ ಎಂಬುವುದೇ ಗಮನಾರ್ಹವಾಗಿದೆ.

ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವು ಪ್ರತಿ ವರ್ಷ ಉನ್ನತ ವಿಜ್ಞಾನಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಇದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಬೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳನ್ನು ಹೆಸರಿಸಲಾಗುತ್ತದೆ. ವಿಜ್ಞಾನಿಗಳ ಸಾಧನೆಗಳು, ನಾವೀನ್ಯತೆಗಳು, ಸಂಶೋಧನೆಗಳು ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟವಾದ ಅವರ ಲೇಖನಗಳು ಸೇರಿದಂತೆ ಇತರ ಮಹತ್ವದ ಚಟುವಟಿಕೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸತತ 3ನೇ ಬಾರಿಗೆ ಕುವೆಂಪು ವಿವಿ ಪ್ರಾಧ್ಯಾಪಕರು

ಇತ್ತೀಚೆಗೆ ಬಿಡುಗಡೆಯಾದ ಈ ಪಟ್ಟಿಯಲ್ಲಿ ಜಾರ್ಖಂಡ್‌ನಿಂದ 47 ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ. ಇದರಲ್ಲಿ ಧನಬಾದ್‌ನ ಐಐಟಿ - ಐಎಸ್‌ಎಂನ 24 ಪ್ರಾಧ್ಯಾಪಕರು ಸೇರಿದ್ದಾರೆ. ಪ್ರೊ.ಅಜಯ್ ಮಂಡಲ್, ಪ್ರೊ.ಹಿಮಾಂಶು ಗುಪ್ತಾ, ಪ್ರೊ.ಸುಬೋಧ್ ಕುಮಾರ್ ಮೈತಿ, ಪ್ರೊ.ಸುಮನ್ ದತ್ತಾ, ಪ್ರೊ.ವಿನೀತ್ ಕುಮಾರ್ ರಾಯ್​​, ಪ್ರೊ.ಶರತ್ ಕುಮಾರ್ ದಾಸ್​​, ಪ್ರೊ.ಸಾಗರ್​ ಪಾಲ್​​​, ಪ್ರೊ.ಸುಖರಂಜನ್​ ಸಮದಾರ, ಪ್ರೊ.ಮಹೇಂದ್ರ ಯಾದವ್, ಪ್ರೊ.ಗುರುದೀಪ್ ಸಿಂಗ್, ಪ್ರೊ.ಗೌರಿಶಂಕರ್ ಸೇಠ್, ಪ್ರೊ.ವಿ.ಮುಖರ್ಜಿ, ಪ್ರೊ.ಪ್ರಶಾಂತ್ ಕೆ.ಜೆನಾ, ಪ್ರೊ.ಸುಮಂತ ಕುಮಾರ್ ಸಾಹು, ಪ್ರೊ.ಅಮಿತ್ ರೈ ದೀಕ್ಷಿತ್, ಪ್ರೊ.ವರುಣ್ ಕುಮಾರ್ ನಂದಿ, ಪ್ರೊ.ಅಮರೇಶ್ ಚಟ್ಟೋಪಾಧ್ಯಾಯ, ಪ್ರೊ ತಾರಾಚಂದ್ ಅಮ್ಗೋತ್, ಪ್ರೊ.ರಾಘವೇಂದ್ರ ಕುಮಾರ್ ಚೌಧರಿ, ಪ್ರೊ.ಎಸ್.ಕೆ.ಘೋಷ್, ಪ್ರೊ.ವಿಪ್ಲವ್ ಭಟ್ಟಾಚಾರ್ಯ, ಪ್ರೊ.ಕೆ.ಕೆ.ಸಿಂಗ್, ಪ್ರೊ.ಮೊಹಮ್ಮದ್ ಅಮೀನ್, ಪ್ರೊ.ಸಂಜೀವ್ ರಘುವಂಶಿ ಸ್ಥಾನ ಗಳಿಸಿದ್ದಾರೆ.

ಅದೇ ರೀತಿ ರಾಂಚಿ ಮೂಲದ ಬಿಐಟಿ ಮೆಸ್ರಾದ 14 ಪ್ರಾಧ್ಯಾಪಕರು ಮತ್ತು ಸಂಶೋಧಕರು ಈ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ ರಸಾಯನಶಾಸ್ತ್ರದ ಪ್ರೊ.ಇಂದ್ರನೀಲ್ ಮನ್ನಾ, ಪ್ರೊ.ಪ್ರೀತಮ್ ಚಟ್ಟೋರಾಜ್, ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಡಾ.ಅನುಪ್ ಚೌಧರಿ, ಫಾರ್ಮಾಸ್ಯುಟಿಕಲ್​ ಸೈನ್ಸ್ ಅಂಡ್ ಟೆಕ್ನಾಲಜಿಯ ಡಾ.ಪ್ರಾಣ್ ಕಿಶೋರ್​​ ದೇವ್, ಡಾ.ಓಂಪ್ರಕಾಶ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್​ನ ಡಾ.ಲಖ್ಬೀರ್ ಸಿಂಗ್, ಇಸಿಇ ವಿಭಾಗದ ಡಾ.ಚಿನ್ಮೊಯ್ ಚಕ್ರವರ್ತಿ, ಔಷಧ ವಿಜ್ಞಾನ ಮತ್ತು ತಂತ್ರಜ್ಞಾನದ ಡಾ.ಬಾಪಿ ಗೊರೈ, ಗಣಿತ ಶಾಸ್ತ್ರದ ಡಾ.ರಣಧೀರ್ ಸಿಂಗ್, ಬಯೋ ಇಂಜಿನಿಯರಿಂಗ್ ಮತ್ತು ಬಯೋಟೆಕ್​ನ ಡಾ.ಶೀಲಾ ಚಂದ್ರ, ಪ್ರೊಡಕ್ಷನ್ ಇಂಜಿನಿಯರಿಂಗ್​ನ ಡಾ.ಬಪ್ಪಾ ಚಟರ್ಜಿ, ಪ್ರೊ.ಅಶೋಕ್ ಮಿಶ್ರಾ ಮತ್ತು ಪಿಎಚ್‌ಡಿ ಸಂಶೋಧಕ ಸೂರಜ್ ಎ.ಮಾಲಿ ಸೇರಿದ್ದಾರೆ.

ಇವರಲ್ಲದೇ, ಜೆಮ್‌ಶೆಡ್‌ಪುರದ ಎನ್‌ಐಟಿಯ 9 ಪ್ರಾಧ್ಯಾಪಕರು ಸಹ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಡಾ.ಸುನೀಲ್ ಕುಮಾರ್, ಡಾ.ಸ್ನೇಹಶಿಶ್ ಕುಂದು, ಪ್ರೊ.ಸಂಜಯ್, ಡಾ.ಸತೀಶ್ ಕುಮಾರ್, ಡಾ.ವಿಶೇಷ್​ ರಂಜನಕರ್, ಪ್ರೊ.ಉಜ್ವಲ್ ಲಾಹಾ, ಡಾ.ಅಜಯ್ ಕುಮಾರ್, ಡಾ.ನಾಗೇಂದ್ರ ಕುಮಾರ್ ಮತ್ತು ಬಲರಾಮ್ ಅಂಬಾಡೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಜಾಗತಿಕ ಮಟ್ಟದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿ: ದಾವಣಗೆರೆ ವಿವಿಯ 7 ಮಂದಿಗೆ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.