ಮುಂಬೈ: ನಕಲಿ ಕೋವಿಡ್ ವರದಿಯನ್ನು ನೀಡಿ ಯುಎಇಗೆ ತೆರಳಲು ಸಜ್ಜಾಗಿದ್ದ ಸುಮಾರು 40 ಪ್ರಯಾಣಿಕರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ. ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷಾ ವರದಿ ಪರಿಶೀಲನೆ ವೇಳೆ ಕ್ಯೂಆರ್ ಕೋಡ್ನಲ್ಲಿ ವ್ಯತ್ಯಾಸಗಳು ಕಂಡುಬಂದ ನಂತರ ಪ್ರಮಾಣಪತ್ರಗಳನ್ನು ನಕಲಿ ಎಂದು ಗುರುತಿಸಲಾಗಿದೆ.
ದುಬೈಗೆ ಪ್ರಯಾಣಿಸುವ ಭಾರತೀಯ ಪ್ರಯಾಣಿಕರು ಎರಡು ಆರ್‌ಟಿ-ಪಿಸಿಆರ್ ವರದಿಗಳನ್ನು ಒದಗಿಸಬೇಕು. ಒಂದು 48 ಗಂಟೆಗಳ ಹಿಂದಿನ ಕೋವಿಡ್ ಪರೀಕ್ಷಾ ಪ್ರಮಾಣ ಪತ್ರವಾಗಿದ್ದು, ಮತ್ತೊಂದು 6 ಗಂಟೆಗಳ ಹಿಂದಿನ ಕೋವಿಡ್ ಪರೀಕ್ಷಾ ವರದಿಯದ್ದು ಆಗಿರಬೇಕು.
ಮೊದಲ ಪರೀಕ್ಷಾ ವರದಿಯನ್ನು ಪಡೆಯುವುದು ಸಾಕಷ್ಟು ಸುಲಭವಾಗಿದ್ದು, ಆದರೆ ಎರಡನೇಯ ಪರೀಕ್ಷಾ ವರದಿ ಪ್ರಯಾಣಿಕರಿಗೆ ಕೆಲವು ಸವಾಲುಗಳನ್ನು ಒಡ್ಡುತ್ತದೆ. ಎರಡನೇ ಪರೀಕ್ಷೆಯಲ್ಲಿ ಕೇವಲ 13 ನಿಮಿಷದಲ್ಲಿ ಅವರು ಫಲಿತಾಂಶವನ್ನು ಪಡೆಯಬಹುದಾಗಿದೆ. ಈ ಹೊಸ ರೀತಿಯ ಪರೀಕ್ಷೆಗೆ 4,500 ಸಾವಿರ ರೂಪಾಯಿ ಖರ್ಚಾಗುತ್ತದೆ.
ಈ ಕೋವಿಡ್ ಪರೀಕ್ಷಾ ವರದಿಗಳಲ್ಲಿ ಕ್ಯೂರ್ ಆರ್ ಕೋಡ್ ಇರುತ್ತದೆ. ಅವುಗಳನ್ನು ಪರಿಶೀಲನೆ ನಡೆಸಿದ ನಂತರವೇ ಪ್ರಯಾಣಿಕರನ್ನು ವಿಮಾನದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ. ಆದರೆ ದುಬೈಗೆ ತೆರಳಲಿದ್ದ 40 ಮಂದಿ ನಕಲಿ ಕೋವಿಡ್ ಪರೀಕ್ಷಾ ವರದಿ ಇದ್ದ ಕಾರಣದಿಂದ ಕ್ಯೂ ಆರ್ ಕೋಡ್ ಪರಿಶೀಲನೆ ಸಾಧ್ಯವಾಗಿರಲಿಲ್ಲ. ಇದರಿಂದ ಆ ಎಲ್ಲಾ ಪ್ರಯಾಣಿಕರಿಗೆ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ:Omicron variant: ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ, ಕೆಲ ದೇಶಗಳ ಮೇಲೆ ನಿಗಾ ಇಡಲು ಸೂಚನೆ