ETV Bharat / bharat

ಚಾಕೊಲೇಟ್​​ ನೀಡುವುದಾಗಿ ಹೇಳಿ ನಾಲ್ಕು ವರ್ಷದ ಬಾಲಕಿ ಮೇಲೆ ಕಾಮುಕನ ಅತ್ಯಾಚಾರ - ತೆಲಂಗಾಣ ಕ್ರೈಂ ನ್ಯೂಸ್​

ನಾಲ್ಕು ವರ್ಷದ ಬಾಲಕಿಯೊಬ್ಬಳ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

4 Year Old girl Raped In Hyderabad
4 Year Old girl Raped In Hyderabad
author img

By

Published : Oct 21, 2021, 4:27 PM IST

ರಂಗಾರೆಡ್ಡಿ(ತೆಲಂಗಾಣ): ನಾಲ್ಕು ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗುವ ಮೂಲಕ ಕಾಮುಕನೊಬ್ಬ ದುಷ್ಕೃತ್ಯ ಮೆರೆದಿದ್ದು, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರ ನಗರದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಸ್ನೇಹಿತರೊಂದಿಗೆ ಆಟವಾಡಲು ಹೋಗಿದ್ದ ಬಾಲಕಿಗೆ ಚಾಕೊಲೇಟ್ ನೀಡುವುದಾಗಿ ಕರೆದುಕೊಂಡು ಹೋಗಿರುವ ಕಾಮುಕ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ನೋವು ತಾಳದ ಬಾಲಕಿ ಕಿರುಚಾಡಿದ್ದಾಳೆಂದು ತಿಳಿದು ಬಂದಿದೆ. ಅಳುತ್ತ ವಾಪಸ್​ ಬಂದಿರುವ ಬಾಲಕಿಯನ್ನ ನೋಡಿರುವ ಇತರ ಸ್ನೇಹಿತರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಏನಾಯಿತು ಎಂದು ಪೋಷಕರು ಕೇಳಿದ್ದಾರೆ.

ಇದರ ಮಧ್ಯೆ ಆಕೆಯ ಖಾಸಗಿ ಭಾಗದಲ್ಲಿ ರಕ್ತಸ್ರಾವವಾಗುತ್ತಿರುವುದನ್ನ ನೋಡಿದ್ದಾರೆ. ಈ ಸಂದರ್ಭದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಮಾಹಿತಿ ಗೊತ್ತಾಗಿದೆ. ತಕ್ಷಣವೇ ಸ್ಥಳೀಯರ ಸಹಾಯದಿಂದ ಬಾಲಕಿಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ.

ಇದನ್ನೂ ಓದಿರಿ: ತುಟ್ಟಿಭತ್ಯೆ ಹೆಚ್ಚಳ.. ನೌಕರರಿಗೆ ದೀಪಾವಳಿ ಗಿಫ್ಟ್​​ ನೀಡಿದ ಮೋದಿ ಸರ್ಕಾರ

ಸಂತ್ರಸ್ತ ಬಾಲಕಿಯ ತಾಯಿ ನೀಡಿರುವ ದೂರಿನನ್ವಯ ರಾಜೇಂದ್ರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಂತು ಎಂಬ ವ್ಯಕ್ತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಆರೋಪ ಮಾಡಿದ್ದಾರೆ. ಅತ ಗಾಂಜಾ ವ್ಯಸನಿಯಾಗಿದ್ದಾನೆಂಬ ಮಾಹಿತಿ ಕೂಡ ಹಂಚಿಕೊಂಡಿದ್ದಾರೆ. ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ಈಗಾಗಲೇ ಆರೋಪಿಗಾಗಿ ಶೋಧಕಾರ್ಯ ಆರಂಭ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.