ETV Bharat / bharat

ಅಯೋಧ್ಯೆಯಲ್ಲಿ ರೈಲು ಅಪ್ಪಳಿಸಿ ಒಂದೇ ಕುಟುಂಬದ ನಾಲ್ವರ ದುರ್ಮರಣ - ಉತ್ತರ ಪ್ರದೇಶದ ಅಪರಾಧ ಸುದ್ದಿ

ಮಾನವರಹಿತ ರೈಲ್ವೆ ಕ್ರಾಸಿಂಗ್ ಬಳಿ ಬೈಕ್‌ನಲ್ಲಿ ದಾಟುತ್ತಿದ್ದಾಗ ವೇಗವಾಗಿ ಬಂದಪ್ಪಳಿಸಿದ ರೈಲು ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆಯಿತು.

4 people of the same family died after being hit by a train
ಆಯೋಧ್ಯೆಯಲ್ಲಿ ರೈಲು ಅಪ್ಪಳಿಸಿ ಒಂದೇ ಕುಟುಂಬದ ನಾಲ್ವರ ದುರ್ಮರಣ
author img

By

Published : Nov 6, 2021, 3:52 PM IST

ಅಯೋಧ್ಯೆ(ಉತ್ತರ ಪ್ರದೇಶ): ಬೈಕ್​ನಲ್ಲಿ ರೈಲ್ವೆ ಕ್ರಾಸಿಂಗ್ ದಾಟುತ್ತಿದ್ದಾಗ ರೈಲು ಅಪ್ಪಳಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಅಯೋಧ್ಯೆ ಜಿಲ್ಲೆಯ ಗೋಸೈಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ರಾಮಚಂದ್ರ ನಿಶಾದ್ (42), ಅವರ ಪತ್ನಿ ವಿಮಲಾ (40) ಹಾಗೂ ಗಣೇಶ್ (3) ಮತ್ತು ಬಾಲಕೃಷ್ಣ (7) ಸಾವನ್ನಪ್ಪಿದ್ದಾರೆ. ಮಹಾರಾಜಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನೆಲೆಸಿರುವ ಇವರು ಬೈಕ್​ನಲ್ಲಿ ಬೇರೊಂದು ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಹೋಗುತ್ತಿದ್ದರು.

ಅಲನ್​​ಭಾರಿ ಮತ್ತು ವಿಲ್ವಾಹ್ರಿಘಾಟ್ ರೈಲ್ವೆ ನಿಲ್ದಾಣದ ನಡುವಿನ ರಾಮಪುರವಾ ಬಳಿಯಿರುವ ಮಾನವ ರಹಿತ ರೈಲ್ವೆ ಕ್ರಾಸಿಂಗ್‌ ದಾಟಲು ಯತ್ನಿಸಿದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಮೂವರು ಸ್ಥಳದಲ್ಲೇ ಮೃತಪಟ್ಟರೆ 7 ವರ್ಷದ ಬಾಲಕೃಷ್ಣ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ಪರೀಕ್ಷೆ ಒತ್ತಡ: ಮೈಸೂರಿನಲ್ಲಿ ಪಿಎಚ್​ಡಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.