ETV Bharat / bharat

ಟೈರ್​ ಸ್ಫೋಟಗೊಂಡು ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಕಾರು... ಒಂದೇ ಕುಟುಂಬದ ನಾಲ್ವರ ಸಾವು! - ಸಿಕಾರ್​ ರಸ್ತೆ ಅಪಘಾತ ಸುದ್ದಿ,

ಕಾರಿನ ಟೈರ್​ ಸ್ಫೋಟಗೊಂಡು ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಸಿಕಾರ್​ ಜಿಲ್ಲೆಯಲ್ಲಿ ನಡೆದಿದೆ.

4 people died, 4 people died of same family, 4 people died of same family in Sikar, Sikar road accident, Sikar road accident news, ನಾಲ್ವರು ಸಾವು, ಒಂದೇ ಕುಟುಂಬದ ನಾಲ್ವರು ಸಾವು, ಸಿಕಾರ್​ನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು, ಸಿಕಾರ್​ ರಸ್ತೆ ಅಪಘಾತ, ಸಿಕಾರ್​ ರಸ್ತೆ ಅಪಘಾತ ಸುದ್ದಿ,
ಟೈರ್​ ಸ್ಫೋಟಗೊಂಡು ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಕಾರು
author img

By

Published : Nov 5, 2020, 12:58 PM IST

ಸಿಕರ್ (ರಾಜಸ್ಥಾನ್​): ಗುರುವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 3 ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ಝುಂಝುನು ಜಿಲ್ಲೆಯ ನವಾಲ್​ಗಢ್​ ಪ್ರದೇಶದ ಮೆನಾಸ್ ಗ್ರಾಮದ ಐವರು ಕೆಲಸದ ನಿಮಿತ್ತ ಜಮಲ್ ನಾಗೌರ್‌ಗೆ ತೆರಳುತ್ತಿದ್ದರು. ತಾಸರ್ ಗ್ರಾಮದ ಬಳಿ ಕಾರಿನ ಟೈರ್​ ಸ್ಫೋಟಗೊಂಡಿದೆ. ಈ ವೇಳೆ, ಎದುರಿಗೆ ಬರುತ್ತಿದ್ದ ಟ್ಯಾಂಕರ್​ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಐವರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಟೈರ್​ ಸ್ಫೋಟಗೊಂಡು ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಕಾರು

ಅಪಘಾತದಲ್ಲಿ ಕಾರು ಚಾಲಕ ಕಂ ಮಾಲೀಕ ಗಂಭೀರವಾಗಿ ಗಾಯಗೊಂಡಿದ್ದು, ಜೈಪುರ್​ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಕಾರು ಚಾಲಕನ ಬದಿಯ ಮುಂಭಾಗದ ಟೈರ್​ ಸ್ಫೋಟಗೊಂಡು ಎದುರಿಗೆ ಬರುತ್ತಿದ್ದ ಟ್ಯಾಂಕರ್​ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಮಾಲೀಕ ಮಹೇಂದ್ರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.