ETV Bharat / bharat

2024ರಲ್ಲಿ ಎಷ್ಟು ಗ್ರಹಣಗಳು ನಡೆಯುತ್ತೆ, ಭಾರತದಲ್ಲಿ ಗೋಚರಿಸುವ ವಿಸ್ಮಯಗಳೆಷ್ಟು? - Astronomer

ಈ ವರ್ಷ ಖಗೋಳದಲ್ಲಿ ಎಷ್ಟು ಗ್ರಹಣಗಳು ಸಂಭವಿಸಲಿವೆ. ಅದರಲ್ಲಿ ಎಷ್ಟು ಭಾರತದಲ್ಲಿ ಗೋಚರಿಸಲಿವೆ ಎಂಬುದನ್ನು ವಿಜ್ಞಾನಿಗಳು ವಿವರಿಸಿದ್ದಾರೆ.

ಗ್ರಹಣಗಳು
ಗ್ರಹಣಗಳು
author img

By ETV Bharat Karnataka Team

Published : Jan 4, 2024, 10:05 AM IST

ಇಂದೋರ್ (ಮಧ್ಯಪ್ರದೇಶ) : ಪ್ರತಿವರ್ಷದಂತೆ ಈ ವರ್ಷವೂ ಖಗೋಳ ಕುತೂಹಲ ನಡೆಯಲಿವೆ. ಆದರೆ, ಭಾರತೀಯರಿಗೆ ಅವು ನಿರಾಸೆ ಮೂಡಿಸಲಿವೆ. ಕಾರಣ ಈ ವರ್ಷ (2024) ದಲ್ಲಿ ಒಂದು ಸಂಪೂರ್ಣ ಸೂರ್ಯಗ್ರಹಣ ಸೇರಿದಂತೆ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಅವುಗಳಲ್ಲಿ ಯಾವೊಂದೂ ಭಾರತದಲ್ಲಿ ಗೋಚರಿಸುವುದಿಲ್ಲ.

ಈ ಬಗ್ಗೆ ಮಾಹಿತಿ ನೀಡಿರುವ ಮಧ್ಯಪ್ರದೇಶದ ಉಜ್ಜಯಿನಿಯ ಜಿವಾಜಿ ವೀಕ್ಷಣಾಲಯದ ಹಿರಿಯ ಅಧೀಕ್ಷಕ ಡಾ.ರಾಜೇಂದ್ರಪ್ರಕಾಶ್ ಗುಪ್ತಾ, 2024 ರಲ್ಲಿ ಗ್ರಹಣಗಳ ಸರಣಿಯು ಮಾರ್ಚ್ 25 ರಂದು ಪೆನಂಬ್ರಾಲ್ ಚಂದ್ರಗ್ರಹಣದೊಂದಿಗೆ ಪ್ರಾರಂಭವಾಗುತ್ತದೆ. ನಾಲ್ಕು ಖಗೋಳ ಕುತೂಹಲಗಳು ಸಂಭವಿಸಿದರೂ, ಅದರಲ್ಲಿ ಒಂದು ಕೂಡ ಭಾರತದಲ್ಲಿ ನೋಡಲು ಸಾಧ್ಯವಿಲ್ಲ ಎಂದರು.

ಮೊದಲ ಸೂರ್ಯಗ್ರಹಣ: ಸೂರ್ಯ, ಭೂಮಿ ಮತ್ತು ಚಂದ್ರ ಬಹುತೇಕ ಸರಳ ರೇಖೆಯಲ್ಲಿ ಒಟ್ಟಾಗಿ ಬಂದಾಗ ಪೆನಂಬ್ರಾಲ್ ಚಂದ್ರಗ್ರಹಣ ಸಂಭವಿಸುತ್ತದೆ. ವರ್ಷದ ಮೊದಲ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಏಕೆಂದರೆ ಈ ಖಗೋಳ ವಿಸ್ಮಯವು ಹಗಲಿನಲ್ಲಿ ನಡೆಯಲಿದೆ. ಹೀಗಾಗಿ ಕಣ್ಣಿಗೆ ಕಾಣುವುದಿಲ್ಲ. ಏಪ್ರಿಲ್ 8 ಮತ್ತು 9 ರ ಮಧ್ಯರಾತ್ರಿಯಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಇದು ಕೂಡ ಭಾರತದಲ್ಲಿ ಗೋಚರಿಸುವುದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಸೆಪ್ಟೆಂಬರ್​ 18 ರಂದು ಬೆಳಗ್ಗೆ ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ. ಅಕ್ಟೋಬರ್ 2 ಮತ್ತು 3 ರ ಮಧ್ಯರಾತ್ರಿಯಲ್ಲಿ ಸಂಭವಿಸುವ ವಾರ್ಷಿಕವಾಗಿ ನಡೆಯುವ ಸೂರ್ಯಗ್ರಹಣವನ್ನು ನೋಡಲು ಬಯಸುವ ಖಗೋಳಶಾಸ್ತ್ರದ ಉತ್ಸಾಹಿಗಳಿಗೆ ಈ ಬಾರಿ ನಿರಾಸೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಹೊಳೆಯುವ ಬಳೆಯಂತೆ ಗೋಚರ: ವಾರ್ಷಿಕ ಸೂರ್ಯಗ್ರಹಣವು 7 ನಿಮಿಷ ಮತ್ತು 21 ಸೆಕೆಂಡುಗಳ ಕಾಲ ಇರಲಿದೆ. ಈ ವೇಳೆ ಸೂರ್ಯನು ಶೇಕಡಾ 93 ರಷ್ಟು ಮರೆಯಾಗುತ್ತಾನೆ. ಇದರಿಂದಾಗಿ ಸೂರ್ಯನನ್ನು ಭೂಮಿಯಿಂದ ಕಂಡಾಗ ಹೊಳೆಯುವ ಬಳೆಯಂತೆ ಗೋಚರಿಸುತ್ತಾನೆ. ಇದನ್ನು ವಿದೇಶಗಳ ಕೆಲ ಭಾಗದಿಂದ ನೋಡಬಹುದು. ಭಾರತದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.

2023 ರಲ್ಲಿ ಸೂರ್ಯಗ್ರಹಣ, ಪೆನಂಬ್ರಾಲ್ ಚಂದ್ರಗ್ರಹಣ, ವಾರ್ಷಿಕ ಸೂರ್ಯಗ್ರಹಣ ಮತ್ತು ಭಾಗಶಃ ಚಂದ್ರಗ್ರಹಣ ಸೇರಿದಂತೆ ಒಟ್ಟು ನಾಲ್ಕು ಖಗೋಳ ವಿಸ್ಮಯಗಳು ನಡೆದಿದ್ದವು. ವರ್ಷದ ಕೊನೆಯ ಚಂದ್ರಗ್ರಹಣ ಅಕ್ಟೋಬರ್​ 29 ರಂದು ರಾತ್ರಿ ಸಂಭವಿಸಿತ್ತು. ಖಂಡಗ್ರಾಸ ಗ್ರಹಣವು ಒಟ್ಟು 3 ಗಂಟೆ 7 ನಿಮಿಷಗಳ ಕಾಲ ನಡೆಯಿತು. ಮಧ್ಯರಾತ್ರಿ 1 ಗಂಟೆ 05 ನಿಮಿಷಕ್ಕೆ ಆರಂಭವಾದ ಗ್ರಹಣವು 2 ಗಂಟೆ 24 ನಿಮಿಷಕ್ಕೆ ಕೊನೆಗೊಂಡಿತ್ತು.

ಇದನ್ನೂ ಓದಿ: 580 ವರ್ಷಗಳ ನಂತರ ಇಂದು ಸಂಭವಿಸಲಿದೆ ದೀರ್ಘಾವಧಿಯ ಚಂದ್ರಗ್ರಹಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.