ನವದೆಹಲಿ: 2014ರಿಂದ 2021ರ ಅವಧಿಯಲ್ಲಿ ದೇಶದಲ್ಲಿ ಒಟ್ಟು 4.28 ಕೋಟಿ ಬೋಗಸ್ ಪಡಿತರ ಚೀಟಿ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ಹಂಚಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ಸಾಧ್ವಿ ನಿರಂಜನ್ ಜ್ಯೋತಿ ಮಾಹಿತಿ ನೀಡಿದ್ದಾರೆ.
ಆಧಾರ್ ಮತ್ತು ಮಾಹಿತಿ ತಂತ್ರಜ್ಞಾನದ ಆಧಾರದ ಮೇಲೆ ನಕಲಿ ಪಡಿತರ ಚೀಟಿ ಬಳಕೆದಾರರ ಮಾಹಿತಿ ಪತ್ತೆ ಹಚ್ಚಲಾಗಿದೆ ಎಂದರು. ಇದೇ ವೇಳೆ, ವಿಕಲಚೇತನರು ಮತ್ತು ವೃದ್ಧಾಪ್ಯ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಫಲಾನುಭವಿಗಳಿಗೆ ನಿಯಮಿತವಾಗಿ ಸಬ್ಸಿಡಿ ಆಹಾರ ಧಾನ್ಯ ವಿತರಣೆ ಮಾಡಲಾಗ್ತಿದೆ ಎಂದಿರುವ ಅವರು, ಫಲಾನುಭವಿಗಳಿಗೆ ಮನೆಗೆ ತೆರಳಿ ಆಹಾರಧಾನ್ಯ ನೀಡಲು ವ್ಯವಸ್ಥೆ ಮಾಡಲಾಗ್ತಿದೆ ಎಂದರು.
ಇದನ್ನೂ ಓದಿರಿ: ವೀರ ಪುತ್ರನ ಪಾರ್ಥಿವ ಶರೀರದ ಅಂತಿಮ ಯಾತ್ರೆ.. ಮಹಾಯೋಧನಿಗೆ ಶ್ವಾನದಿಂದಲೂ ಗೌರವ!
ಇದೇ ವಿಚಾರವಾಗಿ ಇತ್ತೀಚಿನ ಕೆಲ ದಿನಗಳ ಹಿಂದೆ ಮಾಹಿತಿ ನೀಡಿದ್ದ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದಲ್ಲಿ 91 ಸಾವಿರಕ್ಕೂ ಹೆಚ್ಚಿನ ಬಿಪಿಎಲ್ ಪಡಿತರ ಚೀಟಿ ರದ್ಧುಗೊಳಿಸಿದ್ದಾಗಿ ಮಾಹಿತಿ ನೀಡಿತ್ತು.