ಮಿಜೋರಾಂ : ಮಿಜೋರಾಂನ ಚಂಫೈನಲ್ಲಿ ಇಂದು ಮುಂಜಾನೆ ಭೂಕಂಪ ಸಂಭವಿಸಿದೆ. 4.2 ತೀವ್ರತೆಯ ಭೂಕಂಪನ ಉಂಟಾಗಿರುವ ಬಗ್ಗೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಚಂಫೈನ ಆಗ್ನೇಯಕ್ಕೆ 56 ಕಿ.ಮೀ ದೂರದಲ್ಲಿ ನಸುಕಿನ ಜಾವ 1:43ಕ್ಕೆ ಭೂಕಂಪನವಾಗಿದೆ. ಸರಿ ಸುಮಾರು 60 ಕಿ.ಮೀ. ದೂರದವರೆಗೆ ಭೂಮಿ ಕಂಪಿಸಿದೆ.
ಕಂಪನದಿಂದಾಗಿ ಈವರೆಗೆ ಯಾವುದೇ ಸಾವು-ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ. ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ತಿಳಿಸಿದೆ.