ETV Bharat / bharat

ಛತ್ ಪೂಜಾ ಆಚರಣೆ ವೇಳೆ ನದಿಯಲ್ಲಿ ಮುಳುಗಿ ನಾಲ್ವರು ಮಕ್ಕಳ ದುರ್ಮರಣ - ಛತ್ ಪೂಜೆ ವೇಳೆ ದುರಂತ

ಜಾರ್ಖಂಡ್​ನ ಗಿರಿಡಿಹ್​ನಲ್ಲಿನ ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಛತ್ ಪೂಜೆ ವೇಳೆಯಲ್ಲಿ ನದಿಯಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ.

4 children drown in J'khand during 'Chhath Puja' festivities
ಛತ್ ಪೂಜಾ ಆಚರಣೆ ವೇಳೆ ನದಿಯಲ್ಲಿ ಮುಳುಗಿ ನಾಲ್ವರು ಮಕ್ಕಳು ದುರ್ಮರಣ
author img

By

Published : Nov 9, 2021, 10:43 PM IST

ರಾಂಚಿ(ಜಾರ್ಖಂಡ್): ಛತ್ ಪೂಜೆ ಅಂಗವಾಗಿ ತಮ್ಮ ಪೋಷಕರ ಜೊತೆಗೆ ನದಿಯ ಬಳಿ ತೆರಳಿದ್ದ 10 ವರ್ಷದೊಳಗಿನ ನಾಲ್ವರು ಮಕ್ಕಳು ಸಾವನ್ನಪ್ಪಿರುವ ಘಟನೆ ಜಾರ್ಖಂಡ್​ ರಾಜ್ಯದ ಗಿರಿಡಿಹ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗ್ರೋಡಿಹ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯರು ನದಿಯಲ್ಲಿ ಸ್ನಾನ ಮಾಡಲು ಹಾಗೂ ಪ್ರಸಾದ ತಯಾರಿಕೆಗಾಗಿ ನೀರನ್ನು ತರುವ ಸಲುವಾಗಿ ತೆರಳಿದ್ದರು. ಅವರ ಜೊತೆಗೆ ತೆರಳಿದ್ದ ನಾಲ್ವರು ಮಕ್ಕಳು ನದಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಎಎಸ್​ಐ ರತಿನಾಥ್ ಮುಂಡಾ ಮಾಹಿತಿ ನೀಡಿದ್ದಾರೆ.

4 children drown in J'khand during 'Chhath Puja' festivities
ದುರಂತ ನಡೆದ ನದಿ ಪ್ರದೇಶ

ಪೊಲೀಸರ ಮಾಹಿತಿ ಪ್ರಕಾರ, ಮಹೇಶ್ ಸಿಂಗ್ ಪುತ್ರನಾದ ಮುನ್ನಾ ಸಿಂಗ್, ಮದನ್ ಸಿಂಗ್ ಪುತ್ರಿಯಾದ ಸುಹಾನಾ ಕುಮಾರಿ, ಟಿಂಕು ಸಿಂಗ್ ಪುತ್ರಿಯಾದ ಸೋನಾಕ್ಷಿ ಕುಮಾರಿ, ಅಜಯ್ ಶರ್ಮಾ ಪುತ್ರಿಯಾದ ದೀಕ್ಷಾ ಕುಮಾರಿ ಸಾವನ್ನಪ್ಪಿದವರಾಗಿದ್ದಾರೆ.

ಇದನ್ನೂ ಓದಿ: ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಕರಿದ ಕೋಳಿ ಖಾದ್ಯ ತೆಗೆಯುವ ವ್ಯಾಪಾರಿ: ವಿಡಿಯೋ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.