ಕುಶಿನಗರ( ಉತ್ತರಪ್ರದೇಶ): ಕೆಲ ದುಷ್ಕರ್ಮಿಗಳು ಮನೆ ಬಾಗಿಲಲ್ಲಿ ಎಸೆದ ಸ್ವೀಟ್ ತಿಂದು ನಾಲ್ವರು ಮಕ್ಕಳು ಒಟ್ಟಿಗೆ ಮೃತಪಟ್ಟಿರುವ ಘಟನೆ ಕುಶಿನಗರದ ಕಸಾಯ ಪೊಲೀಸ್ ಠಾಣಾ ವ್ಯಾಪ್ತಿಯ ಸಿಸಾಯಿ ಗ್ರಾಮದ ಲಾತೂರ್ ತೋಲಾ ಎಂಬಲ್ಲಿ ನಡೆದಿದೆ.
ನಡೆದಿದ್ದೇನು?: ಅಪರಿಚಿತ ದುಷ್ಕರ್ಮಿಗಳು ಮನೆ ಬಾಗಿಲಿಗೆ ಮಿಠಾಯಿ ಎಸೆದಿದ್ದಾರೆ. ನನ್ನ ದೊಡ್ಡ ಮಗಳು ಆ ಮಿಠಾಯಿ ನೋಡಿದ್ದಾಳೆ. ಬಳಿಕ ಮಿಠಾಯಿಯನ್ನು ನಾಲ್ವರು ಹಂಚಿಕೊಂಡು ತಿಂದಿದ್ದಾರೆ. ತಿಂದ ಕೆಲವೇ ಕ್ಷಣಗಳಲ್ಲಿ ಅವರ ಆರೋಗ್ಯ ಹದಗೆಡಲು ಪ್ರಾರಂಭಿಸಿತು. ಕೂಡಲೇ ಅವರೆಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಮೃತ ಮಕ್ಕಳ ತಂದೆ ತಮ್ಮ ನೋವು ಹಂಚಿಕೊಂಡಿದ್ದಾರೆ.
ಓದಿ: ಧಾರವಾಡ: ಕಾಟನ್ ಮಿಲ್ನಲ್ಲಿ ಭಾರಿ ಅಗ್ನಿ ಅವಘಡ- ಕೋಟ್ಯಂತರ ರೂ. ಮೌಲ್ಯದ ಹತ್ತಿ ಬೆಂಕಿಗಾಹುತಿ!
ಮೃತರಲ್ಲಿ ರಸಗುಲ್ ಎಂಬವರ ಮೂವರು ಮಕ್ಕಳಾದ ಮಂಜನಾ (7), ಸ್ವೀಟಿ (5), ಸಮರ್ (3) ಮತ್ತು ಅವರ ಸಹೋದರಿ ಖುಷ್ಬೂ ಅವರ ಮಗ ಆಯುಷ್ (5) ಎಂದು ಗುರುತಿಸಲಾಗಿದೆ. ಮಕ್ಕಳ ಸಾವನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ಮಕ್ಕಳ ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಈಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಮೃತ ಮಕ್ಕಳ ಕುಟುಂಬಗಳು ಪರಿಶಿಷ್ಟ ಪಂಗಡದಿಂದ ಬಂದವರು ಎಂಬುದನ್ನು ಗಮನಿಸಬೇಕು.
ಸಂತಾಪ ಸೂಚಿಸಿದ ಸಿಎಂ ಯೋಗಿ ಆದಿತ್ಯನಾಥ: ಘಟನೆ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದು, ದುರಂತದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.