ETV Bharat / bharat

ತೌಕ್ತೆಗೆ ಮುಳುಗಿದ ನೌಕೆ: ಸಾವಿನ ಸಂಖ್ಯೆ 49ಕ್ಕೇರಿಕೆ; ಇನ್ನೂ 26 ಮಂದಿಗೆ ಸಮುದ್ರದಲ್ಲಿ ಶೋಧ - Loss by the Cyclone Tauktae

ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮುಂಬೈ ಸಮೀಪದ ಅರಬ್ಬಿ ಸಮುದ್ರದಲ್ಲಿ ಬಾರ್ಜ್ ಪಿ 305 ಎಂಬ ನೌಕೆ ಮುಳುಗಿತ್ತು.

Navy continues search
ಬಾರ್ಜ್ ಪಿ 305 ದುರಂತ
author img

By

Published : May 21, 2021, 7:44 AM IST

ಮುಂಬೈ: ನಾಲ್ಕು ದಿನಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದ ನೌಕೆಯಲ್ಲಿನ ಸಾವಿನ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ಬಾರ್ಜ್‌ನಿಂದ ಕಾಣೆಯಾದ ಇನ್ನೂ 26 ಸಿಬ್ಬಂದಿಗೆ ಹುಡುಕಾಟವನ್ನು ಮುಂದುವರೆಸಿದ್ದಾರೆ.

ಸೋಮವಾರ ಮುಳುಗಿದ್ದ ಬಾರ್ಜ್ ಪಿ 305 ಯಲ್ಲಿದ್ದ 261 ಸಿಬ್ಬಂದಿಯಲ್ಲಿ 186 ಮಂದಿಯನ್ನು ಈವರೆಗೆ ರಕ್ಷಿಸಲಾಗಿದೆ ಎಂದು ನೌಕಾದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೌಕ್ತೆ ಅಬ್ಬರಕ್ಕೆ ಸಿಲುಕಿದ್ದ ಮತ್ತೊಂದು ಬೋಟ್​, ಆಂಕರ್ ದೋಣಿ ವರಪ್ರಾದಲ್ಲಿದ್ದ 13 ಜನರಲ್ಲಿ ಇಬ್ಬರನ್ನು ಈಗಾಗಲೇ ರಕ್ಷಿಸಲಾಗಿದ್ದು, ಉಳಿದ 11 ಮಂದಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಪಶ್ಚಿಮ ಕರಾವಳಿಯಲ್ಲಿರುವ 337 ತೈಲ ಬಾವಿಗಳು, ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ತೈಲ ಮತ್ತು ಅನಿಲ ಸ್ಥಾವರಗಳಲ್ಲಿ 6,961 ಜನರು ಸುರಕ್ಷಿತವಾಗಿ ಉಳಿದಿದ್ದಾರೆ. ಐದು ಹಡಗುಗಳು ಯಾಂತ್ರಿಕ ದೋಷಗಳನ್ನು ಎದುರಿಸಿದ್ದು, 714 ಸಿಬ್ಬಂದಿಯನ್ನು ಅಪಾಯಕ್ಕೆ ದೂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ತೌಕ್ತೆ ಅಬ್ಬರಕ್ಕೆ ಮುಳುಗಿದ ಪಿ 305 ಬಾರ್ಜ್‌: 14 ಮಂದಿ ಮೃತದೇಹ ಪತ್ತೆ

ಭಾರತೀಯ ನೌಕಾಪಡೆಯು ಐಎನ್ಎಸ್ ಕೊಚ್ಚಿ, ಐಎನ್ಎಸ್ ಕೋಲ್ಕತಾ, ಐಎನ್ಎಸ್ ತಲ್ವಾರ್, ಐಎನ್ಎಸ್ ಬಿಯಾಸ್, ಐಎನ್ಎಸ್ ಬೆಟ್ವಾ ಮತ್ತು ಐಎನ್ಎಸ್ ಟಗ್ ಸೇರಿ ಆರು ಹಡಗುಗಳನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿದ್ದರೆ, ಕೋಸ್ಟ್ ಗಾರ್ಡ್ ಐಸಿಜಿಎಸ್ ಸಮರ್ತ್, ಐಸಿಜಿಎಸ್ ಶೂರ್ ಮತ್ತು ಇತರ ಕಡಲಾಚೆಯ ಗಸ್ತು ಹಡಗುಗಳನ್ನು ಶೋಧ ಕಾರ್ಯಾಚರಣೆಗಾಗಿ ನಿಯೋಜಿಸಿದೆ.

ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಬಾರ್ಜ್​ ಮುಳುಗಡೆ: 37 ಶವಗಳು ಪತ್ತೆ, ಇನ್ನೂ 38 ಮಂದಿಗೆ ಮುಂದುವರೆದ ಶೋಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.