ಔರೈಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಔರೈಯಾದ ಬಿದುನಾದಲ್ಲಿ 31 ವರ್ಷದ ರಕ್ಷಾ ಸೋಲಂಕಿ ಎಂಬ ಮಹಿಳೆ ಶ್ರೀ ಕೃಷ್ಣನ ವಿಗ್ರಹದ ಜೊತೆ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ್ದಿದ್ದಾರೆ. ಈ ವಿಶೇಷ ಕ್ಷಣಕ್ಕೆ ವಧುವಿನ ಕುಟುಂಬದವರು ಮತ್ತು ಅಕ್ಕಪಕ್ಕದ ಮನೆಯವರು ಸಾಕ್ಷಿಯಾದರು.
ಈ ಮದುವೆ ಬಗ್ಗೆ ವಧುವಿನ ತಂದೆ ರಂಜಿತ್ ಸಿಂಗ್ ಮಾತನಾಡಿ, ‘‘ನನ್ನ 31 ವರ್ಷದ ಮಗಳು ರಕ್ಷಾ ಸೋಲಂಕಿ ಬಾಲ್ಯದಿಂದಲೂ ಕೃಷ್ಣನ ಭಕ್ತಿಯಲ್ಲಿ ಮುಳುಗಿದ್ದಳು. ನಂತರ ಶ್ರೀ ಕೃಷ್ಣನನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದಳು, ನಂತರ ಮನೆಯವರೆಲ್ಲ ನಿರ್ಧರಿಸಿ ಪುರೋಹಿತರನ್ನು ಮನೆಗೆ ಕರೆಸಿ ಹಿಂದೂ ಸಂಪ್ರದಾಯದ ಪ್ರಕಾರ ಬೆಂಕಿಯ ಸಾಕ್ಷಿಯಾಗಿ ಏಳು ಸುತ್ತು ಹಾಕಿದಳು. ಮಗಳ ನಿರ್ಧಾರದಿಂದ ಬಹಳ ಸಂತೋಷವಾಗಿದೆ. ಈಗ ಭಗವಾನ್ ಶ್ರೀ ಕೃಷ್ಣ ನನ್ನ ಅಳಿಯಾನಾಗಿದ್ದಾನೆ’’ ಎಂದು ಹೇಳಿದರು.
ಮದುವೆ ನಂತರ ವಧು ಹೇಗೆ ವರನ ಮನೆಗೆ ಹೋಗುತ್ತಾರೆ, ಅದೇ ರೀತಿ ಈ ಮದುವೆಯಲ್ಲೂ ಕೂಡ ನಡೆದಿದು ಕುಟುಂಬಸ್ಥರು ಸಾಂಪ್ರದಾಯಿಕವಾಗಿ ವಧುವನ್ನು ಬೀಳ್ಕೊಟ್ಟರು. ಶ್ರೀ ಕೃಷ್ಣನ ವಿಗ್ರಹದ ಜೊತೆಗೆ ಮದುವೆವಾದ ರಕ್ಷಾ ಸೋಲಂಕಿ ತನ್ನ ಸಂಬಂಧಿಕರ ಮನೆಗೆ ತೆರಳಿದಳು.
ಕನಸಿನಲ್ಲಿ ಬರುತ್ತಿದ್ದ ಶ್ರೀ ಕೃಷ್ಣ: ‘‘ರಕ್ಷಾನನ್ನು ನಾವು ಬೇರೆ ವರವ ಜೊತೆ ಮದುವೆ ಮಾಡಲು ನಿರ್ಧರಿಸಿದ್ದೆವು. ಆದರೆ, ಕೆಲವು ದಿನಗಳ ಹಿಂದೆ ಶ್ರೀ ಕೃಷ್ಣನು ತನ್ನ ಕೊರಳಿಗೆ ಹೂವಿನ ಮಾಲೆಯನ್ನ ಹಾಕಿದ ಹಾಗೆ ಕನಸು ಬಿದ್ದಿತ್ತು ಎಂದು ತಿಳಿಸಿದಳು. ನಂತರ ಅವಳ ಇಚ್ಛೆಯಂತೆ ಶ್ರೀ ಕೃಷ್ಣನ ವಿಗ್ರಹದ ಜೊತೆ ಮದುವೆಯಾಗಿ ಸಂತೋಷವಾಗಿದ್ದಾಳೆ’’ ಎಂದು ವಧುವಿನ ತಂದೆ ತಿಳಿಸಿದರು.
ಇದನ್ನೂ ಓದಿ: ಮೆಡಿಕಲ್ ಎಮೆರ್ಜೆನ್ಸಿ: ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ
ಐಪಿಎಸ್ ಅಧಿಕಾರಿ ಜೊತೆ ಆಫ್ ಶಾಸಕನ ಮದುವೆ: ಇದು ಶ್ರೀಕೃಷ್ಣನ ವಿಗ್ರಹದೊಂದಿಗೆ ಯುವತಿ ಮದುವೆ ಆಗಿದ್ದರೆ, ಅತ್ತ ಪಂಜಾಬಿನ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಹರ್ಜೋತ್ ಸಿಂಗ್ ಬೈನ್ಸ್ ಅವರು ಐಪಿಎಸ್ ಅಧಿಕಾರಿ ಜ್ಯೋತಿ ಯಾದವ್ ಅವರೊಂದಿಗೆ ಈ ತಿಂಗಳ ಕೊನೆಯಲ್ಲಿ ವಿವಾಹವಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇಬ್ಬರ ನಿಶ್ಚಿತಾರ್ಥ ಇತ್ತೀಚೆಗೆ ನೆರವೇರಿತ್ತು. ರೂಪನಗರ ಜಿಲ್ಲೆಯ ಆನಂದಪುರ ಸಾಹಿಬ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಬೈನ್ಸ್ ಅವರು ಪ್ರಸ್ತುತ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ.
ಮುಂಬರುವ ದಿನಗಳಲ್ಲಿ ತಮ್ಮ ಜೀವನದ ಹೊಸ ಪ್ರಯಾಣವನ್ನು ಪ್ರಾರಂಭಿಸಲಿರುವ ಬೈನ್ಸ್ ಮತ್ತು ಯಾದವ್ ಅವರನ್ನು ಪಂಜಾಬ್ ಅಸೆಂಬ್ಲಿ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವನ್ ಅವರು ಅಭಿನಂದಿಸಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ 32 ವರ್ಷದ ಬೈನ್ಸ್ ಆನಂದಪುರ ಸಾಹಿಬ್‌ನ ಗಂಭೀರ್‌ಪುರ ಗ್ರಾಮದವರು. 2017ರ ಚುನಾವಣೆಯಲ್ಲಿ ಸಾಹ್ನೇವಾಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಬೈನ್ಸ್ ಇದಕ್ಕೂ ಮುನ್ನ ಆಪ್ನ ರಾಜ್ಯ ಯುವ ಘಟಕದ ಮುಖ್ಯಸ್ಥರಾಗಿದ್ದರು.
ಇದನ್ನೂ ಓದಿ: 'ಆರ್‌ಆರ್‌ಆರ್', 'ದ ಎಲಿಫೆಂಟ್ ವಿಸ್ಪರರ್ಸ್' ಆಸ್ಕರ್ ಸಾಧನೆ: ಪ್ರಧಾನಿ ಮೋದಿ ಅಭಿನಂದನೆ