ಗಯಾ(ಬಿಹಾರ) : ಸೇನೆ ಮತ್ತು ರಾಜ್ಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪಶ್ಚಿಮ ಬಂಗಾಳದ ಪಶ್ಚಿಮ ಬುರ್ದ್ವಾನ್ ಜಿಲ್ಲೆ ಮಾರ್ಗವಾಗಿ ಬಸ್ನಲ್ಲಿ ಸಾಗಿಸುತ್ತಿದ್ದ 30 ಬಾಂಬ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಪಶ್ಚಿಮಬಂಗಾಳದಿಂದ ಈ ಬಸ್ ಬಿಹಾರದ ಗಯಾಕ್ಕೆ ಸಂಚಾರ ಮಾಡುತ್ತಿತ್ತು ಎನ್ನಲಾಗಿದೆ. ಬಸ್ನಲ್ಲಿ ಬಾಂಬುಗಳ ಸಾಗಾಟದ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸರು ಹಾಗೂ ಸೇನೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಪಶ್ಚಿಮ ಬಂಗಾಳ-ಜಾರ್ಖಂಡ್ ಗಡಿಯಲ್ಲಿರುವ ದುಬುರ್ಡಿ ಚೆಕ್ ಪೋಸ್ಟ್ನಲ್ಲಿ ಬಸ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಬಾಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಇಡೀ ರಾತ್ರಿ ಬಸ್ನಲ್ಲಿದ್ದ ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರಿಗೆ ಬೆಂಕಿ.. ಸ್ವಲ್ಪದರಲ್ಲೇ ಇಬ್ಬರು ಬಚಾವ್..
ಬಸ್ನಲ್ಲಿ ಒಂದು ಪತ್ರ ಪತ್ತೆಯಾಗಿದೆ. ಜಾರ್ಖಂಡ್ ನಿವಾಸಿ ಸಫಿ ಮೊಹಮ್ಮದ್ ಭಾಯ್ಗೆ ಈ ಬಾಂಬ್ಗಳನ್ನು ಕಳಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, 12461 ಎಂಬ ಕೋಡ್ವರ್ಡ್ ಇದ್ದು, ಒಂದು ಬಾಂಬ್ಗೆ 1 ಸಾವಿರ ರೂಪಾಯಿ, ಮುಂಗಡವಾಗಿ 5 ಸಾವಿರ ರೂಪಾಯಿ ನೀಡಿದ್ದೀರಿ, ಉಳಿದ ಹಣವನ್ನು ಶೀಘ್ರವೇ ಕೊಡಿ ಎಂದು ಬರೆಯಲಾಗಿದೆ. ಜತೆಗೆ ಈ ಪತ್ರದಲ್ಲಿ ಕೋಲ್ಕತಾದ ಇಬ್ಬರು ನಿವಾಸಿಗಳ ಹೆಸರನ್ನೂ ಬರೆಯಾಗಿದೆ. ಈ ಮಾಹಿತಿ ಆಧರಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.