ವಿಜಯನಗರಂ: ಮೂರು ವರ್ಷದ ಹಸುಳೆಯನ್ನು ಕತ್ತು ಸೀಳಿ ಕೊಲೆ ಮಾಡಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಮಗುವಿನ ಚಿಕ್ಕಪ್ಪ ವಿನೋದ ಎಂಬಾತನೇ ಈ ದುಷ್ಕೃತ್ಯ ಎಸಗಿದ್ದು, ಏನೂ ಅರಿಯದ ಕಂದಮ್ಮನ ಜೀವ ಬಲಿ ಪಡೆದಿದ್ದಾನೆ.
ಕಿಲ್ಲಾರ ಭವ್ಯಶ್ರೀ ಹೆಸರಿನ ಮಗು ಮಧ್ಯರಾತ್ರಿ ನಿದ್ರೆಯಲ್ಲಿರುವಾಗಲೇ ಪಾಪಿ ಚಿಕ್ಕಪ್ಪ ಅದರ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಆರೋಪಿ ಸದ್ಯ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕೊಲೆ ಆರೋಪಿ ವಿನೋದ ಮಾನಸಿಕವಾಗಿ ಅಸ್ವಸ್ಥನಾಗಿದ್ದನು ಎಂದು ಕುಟುಂಬಸ್ಥರು ಹೇಳಿದ್ದಾರೆ.