ಪೂಂಚ್ (ಜಮ್ಮು ಮತ್ತು ಕಾಶ್ಮೀರ): ಅಕ್ರಮವಾಗಿ ಗಡಿ ನುಸುಳಲು ಯತ್ನಿಸಿದ ಮೂವರು ಭಯೋತ್ಪಾದಕರನ್ನು ಸೇನಾಪಡೆ ಕಾರ್ಯಾಚರಣೆ ನಡೆಸಿ ಮಂಗಳವಾರ ಮಧ್ಯರಾತ್ರಿ ಬಂಧಿಸಿದೆ. ಪೂಂಚ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯನ್ನು ದಾಟುತ್ತಿದ್ದಾಗ ಭಾರತೀಯ ಯೋಧರು ದಾಳಿ ಮಾಡಿದ್ದರು.
ಮಳೆ ಮತ್ತು ಕೆಟ್ಟ ಹವಾಮಾನ ಲಾಭ ಪಡೆದು ಮೇ 30- 31 ರ ಮಧ್ಯರಾತ್ರಿ ಪೂಂಚ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯ ಬೇಲಿಯನ್ನು ಉಗ್ರರು ಅಕ್ರಮವಾಗಿ ದಾಟುತ್ತಿದ್ದರು. ಇದರ ಸುಳಿವು ಸಿಕ್ಕ ತಕ್ಷಣವೇ ಯೋಧರು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಗಿಳಿದಿದೆ. ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದೆ. 3- 4 ಭಯೋತ್ಪಾದಕರು ಗಡಿ ದಾಟಲು ಯತ್ನಿಸುತ್ತಿದ್ದರು ಎನ್ನಲಾಗಿದೆ.
-
#WATCH | J&K: Three terrorists were apprehended by Indian Army and J&K Police on the Line of Control in the Poonch Sector. One Indian Army soldier was injured in the ensuing firing and has been evacuated. IED was later diffused by Army Bomb Disposal Squad. pic.twitter.com/onuCzUQcVC
— ANI (@ANI) May 31, 2023 " class="align-text-top noRightClick twitterSection" data="
">#WATCH | J&K: Three terrorists were apprehended by Indian Army and J&K Police on the Line of Control in the Poonch Sector. One Indian Army soldier was injured in the ensuing firing and has been evacuated. IED was later diffused by Army Bomb Disposal Squad. pic.twitter.com/onuCzUQcVC
— ANI (@ANI) May 31, 2023#WATCH | J&K: Three terrorists were apprehended by Indian Army and J&K Police on the Line of Control in the Poonch Sector. One Indian Army soldier was injured in the ensuing firing and has been evacuated. IED was later diffused by Army Bomb Disposal Squad. pic.twitter.com/onuCzUQcVC
— ANI (@ANI) May 31, 2023
ಮಧ್ಯರಾತ್ರಿ ಒಂದೂವರೆ ಸುಮಾರಿನಲ್ಲಿ ಉಗ್ರರು ತಮ್ಮ ಕೈಚಳಕ ತೋರಿಸುತ್ತಿದ್ದರು. ಗಡಿ ಬೇಲಿಯನ್ನು ಕಟ್ ಮಾಡಿ ಒಳನುಸುಳಲು ಯತ್ನಿಸುತ್ತಿದ್ದರು. ವಿಷಯ ತಿಳಿದ ಯೋಧರು ಅವರ ಮೇಲೆ ಗುಂಡು ಹಾರಿಸಿದರು. ಕೀಚಕರು ಕೂಡ ಪ್ರತಿದಾಳಿ ನಡೆಸಿದರು. ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕರು ಗಾಯಗೊಂಡರು. ನಂತರ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದು, ಶೋಧ ಕಾರ್ಯಾಚರಣೆ ನಡೆಸಿದಾಗ ಮೂವರು ಸಿಕ್ಕಿಬಿದ್ದರು ಎಂದು ತಿಳಿಸಿದೆ.
-
J&K | Three-four terrorists were intercepted by Indian Army and J&K Police on the Line of Control in the Poonch Sector while attempting to cross the fence. Three terrorists were apprehended and some weapons, war-like stores including one IED and Narco were recovered. One Indian… pic.twitter.com/28IpTRcskz
— ANI (@ANI) May 31, 2023 " class="align-text-top noRightClick twitterSection" data="
">J&K | Three-four terrorists were intercepted by Indian Army and J&K Police on the Line of Control in the Poonch Sector while attempting to cross the fence. Three terrorists were apprehended and some weapons, war-like stores including one IED and Narco were recovered. One Indian… pic.twitter.com/28IpTRcskz
— ANI (@ANI) May 31, 2023J&K | Three-four terrorists were intercepted by Indian Army and J&K Police on the Line of Control in the Poonch Sector while attempting to cross the fence. Three terrorists were apprehended and some weapons, war-like stores including one IED and Narco were recovered. One Indian… pic.twitter.com/28IpTRcskz
— ANI (@ANI) May 31, 2023
ಒಳನುಸುಳಲು ಯತ್ನಿಸಿದ ಸ್ಥಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಐಇಡಿ ಮತ್ತು ಮಾದಕ ವಸ್ತು ಸೇರಿದಂತೆ ಕೆಲ ಶಸ್ತ್ರಾಸ್ತ್ರಗಳ ಸಮೇತ ಮೂವರು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಉಗ್ರರ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯ ಯೋಧ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಭಯೋತ್ಪಾದಕರ ಬಳಿ 10 ಕೆಜಿಯಷ್ಟು ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸಿಕ್ಕಿದೆ ಎಂದು ಸೇನೆ ತಿಳಿಸಿದೆ.
ಕುಪ್ವಾರ ಎನ್ಕೌಂಟರ್ನಲ್ಲಿ ಉಗ್ರರು ಹತ: ತಿಂಗಳ ಆರಂಭದಲ್ಲಿ ಉಗ್ರರು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದರು. ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಸೇನಾ ಪಡೆ ದಾಳಿ ನಡೆಸಿತ್ತು.
ಜಿಲ್ಲೆಯ ಪಿಚ್ನಾಡ್ ಮಚಿಲ್ ಪ್ರದೇಶದ ಬಳಿ ಭಯೋತ್ಪಾದಕರು ನುಸುಳಿದ್ದಾರೆ ಎಂದು ಬಂದ ಮಾಹಿತಿಯ ಮೇರೆಗೆ ಸೇನಾ ಈ ಪ್ರದೇಶದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿತ್ತು. ಪ್ರತಿದಾಳಿ ನಡೆದ ಸೇನೆ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು.
ಗ್ರೆನೇಡ್ ದಾಳಿಗೆ ಐವರು ಸೈನಿಕರು ಮೃತ: ಏಪ್ರಿಲ್ 20ರಂದು ಭಯೋತ್ಪಾದಕರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಪೂಂಚ್ ಜಿಲ್ಲೆಯ ಭಟ ಧುರಿಯನ್ ಪ್ರದೇಶದ ಹೆದ್ದಾರಿಯಲ್ಲಿ ಈ ದಾಳಿ ನಡೆದಿತ್ತು.
ಭಿಂಬರ್ ಗಲಿಯಿಂದ ಸಾಂಗಿಯೋಟ್‌ಗೆ ಸೇನಾ ವಾಹನ ತೆರಳುತ್ತಿತ್ತು. ಈ ವೇಳೆ ಏಕಾಏಕಿ ವಾಹನದ ಮೇಲೆ ಉಗ್ರರು ಎಸೆದ ಗ್ರೆನೇಡ್ನಿಂದ ಬೆಂಕಿ ಹೊತ್ತಿಕೊಂಡಿತ್ತು ಎಂದು ಸೇನಾಧಿಕಾರಿಗಳು ತಿಳಿಸಿದ್ದರು. ಘಟನೆಗೆ ಸಂಬಂಧಿಸಿದ ವಿಡಿಯೋ ಕೂಡ ಲಭ್ಯವಾಗಿತ್ತು. ಇದರಲ್ಲಿ ಯೋಧರ ಮೃತದೇಹಗಳು ವಾಹನದ ಪಕ್ಕದಲ್ಲಿಯೇ ಬಿದ್ದಿರುವುದು ಮತ್ತು ಸೇನಾ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದು ಸೆರೆಯಾಗಿತ್ತು.
ಇದನ್ನೂ ಓದಿ: ಹೃದಯಾಘಾತದಿಂದ ಚಾಲಕ ಸಾವು: ಪೆಟ್ರೋಲ್ ಬಂಕ್ಗೆ ನುಗ್ಗಿದ ಬಸ್, ಸಮಯ ಪ್ರಜ್ಞೆ ಮರೆದ ನಿರ್ವಾಹಕ