ETV Bharat / bharat

ಗೋರಖ್​ಪುರ ದರೋಡೆ ಪ್ರಕರಣ: ಮೂವರು ಪೊಲೀಸರು, 9 ಮಂದಿ ಶಂಕಿತರ ಬಂಧನ - ಉತ್ತರಪ್ರದೇಶ ಇತ್ತೀಚಿನ ಸುದ್ದಿ

ಗೋರಖ್​ಪುರದಲ್ಲಿ ನಡೆದ ದರೋಡೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದು, ಮೂವರು ಪೊಲೀಸರನ್ನು ಮತ್ತು 9 ಮಂದಿ ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.

gorakhpur
ಗೋರಖ್​ಪುರ ದರೋಡೆ
author img

By

Published : Jan 22, 2021, 11:10 AM IST

ಬಸ್ತಿ (ಉತ್ತರಪ್ರದೇಶ): ಗೋರಖ್​ಪುರದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿದ ಎಸ್‌ಪಿ ಹೇಮರಾಜ್ ಮೀನಾ ಮೂವರು ಪೊಲೀಸರನ್ನು ಮತ್ತು 9 ಮಂದಿ ಶಂಕಿತರನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ಗೋರಖ್​ಪುರ ಸಮೀಪದ ಜ್ಯುವೆಲ್ಲರಿ ಶಾಪ್ ಮಾಲೀಕ ಗೋರಖ್‌ಪುರದ ಮಹಾರಾಜ್‌ಗಂಜ್‌ನ ಬುಲಿಯನ್ ಉದ್ಯಮಿ ಬಳಿಯಿಂದ 19 ಲಕ್ಷ ನಗದು, 12 ಲಕ್ಷ ಮೌಲ್ಯದ ಚಿನ್ನ ಮತ್ತು 4 ಲಕ್ಷ ಮೌಲ್ಯದ ಬೆಳ್ಳಿಯನ್ನು ದರೋಡೆ ಮಾಡಲಾಗಿತ್ತು. ಇನ್ನು ದೂರು ನೀಡಲು ಬಂದಾಗ ದರೋಡೆಕೋರರು ಪೊಲೀಸ್​ ಸಮವಸ್ತ್ರ ಧರಿಸಿದ್ದರು ಎಂದು ತಿಳಿಸಿದ್ದರು. ಬಳಿಕ ಗೋರಖ್‌ಪುರ ಕ್ಯಾಂಟ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸಿದ್ದಾರೆ.

ಇದಾದ ಬಳಿಕ ಎಸ್​ಪಿ ಧರ್ಮೇಂದ್ರ ಯಾದವ್, ಕಾನ್​ಸ್ಟೇಬಲ್ ಮಹೇಂದ್ರ ಯಾದವ್ ಮತ್ತು ಕಾನ್​ಸ್ಟೇಬಲ್ ಸಂತೋಷ್ ಯಾದವ್​ರನ್ನು ಅಮಾನತುಗೊಳಿಸಿ ಬಂಧಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.