ETV Bharat / bharat

Delhi mohalla clinic : ಕೆಮ್ಮಿನ ಸಿರಪ್ ಸೇವಿಸಿ 3 ಮಕ್ಕಳ ಸಾವು.. 13 ಚಿಣ್ಣರು ಆಸ್ಪತ್ರೆಗೆ ದಾಖಲು..

ದೆಹಲಿಯ ಮೊಹಲ್ಲಾ ಚಿಕಿತ್ಸಾಲಯದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸೇವೆಗಳ ನಿರ್ದೇಶನಾಲಯ (DGHS) ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Dec 20, 2021, 4:56 PM IST

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಮೊಹಲ್ಲಾ ಚಿಕಿತ್ಸಾಲಯದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಒಟ್ಟು 16 ಮಕ್ಕಳು ಅಸ್ವಸ್ಥರಾಗಿದ್ದಾರೆ. ಅವರನ್ನು ನವದೆಹಲಿಯ ಕಲಾವತಿ ಸರನ್ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಾದ 16 ಮಕ್ಕಳ ಪೈಕಿ ಮೂವರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸೇವೆಗಳ ನಿರ್ದೇಶನಾಲಯ (DGHS) ತಿಳಿಸಿದೆ.

ವರದಿಯ ಪ್ರಕಾರ, ಮಕ್ಕಳಿಗೆ ಔಷಧ ನೀಡಿದ ನಂತರ ವಿಷಪೂರಿತವಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ನಂತರ, ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕರು (DGHS) ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಔಷಧವನ್ನು ನೀಡದಂತೆ ಎಲ್ಲಾ ಡಿಸ್ಪೆನ್ಸರಿಗಳು ಮತ್ತು ಮೊಹಲ್ಲಾ ಚಿಕಿತ್ಸಾಲಯಗಳಿಗೆ ಅಧಿಸೂಚನೆ ಕಳುಹಿಸುವಂತೆ ದೆಹಲಿ ಸರ್ಕಾರಕ್ಕೆ ತಿಳಿಸಿದ್ದಾರೆ.

ಔಷಧವು ಕೆಮ್ಮು ನಿವಾರಕವಾಗಿದ್ದು, ಇದನ್ನು ಬಹುರಾಷ್ಟ್ರೀಯ ಕಂಪನಿಯು ತಯಾರಿಸುತ್ತದೆ. ಇದರ ಅಡ್ಡ ಪರಿಣಾಮಗಳ ಕಾರಣ ಸಾರ್ವಜನಿಕ ಹಿತಾಸಕ್ತಿಯಿಂದ ಔಷಧವನ್ನು ಹಿಂಪಡೆಯಬೇಕು ಎಂದು ಡಿಜಿಹೆಚ್​​ಎಸ್​​ ಸೂಚಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಎಐಐಎಂಎಸ್ ಪಾಟ್ನಾದ ಮಕ್ಕಳ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ.ಚಂದ್ರಮೋಹನ್ ಕುಮಾರ್, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಔಷಧವನ್ನು ಬಳಸಲು ಶಿಫಾರಸು ಮಾಡದಿದ್ದರೂ, ಇದನ್ನು ಇನ್ನೂ ಬಳಸಲಾಗುತ್ತಿದೆ. ಇದರಿಂದ ದೃಷ್ಟಿ ಮಸುಕಾಗುವಿಕೆ, ಅರೆನಿದ್ರಾವಸ್ಥೆ, ಚಡಪಡಿಕೆ ಮತ್ತು ಕಿರಿಕಿರಿಯಂತಹ ಅಡ್ಡಪರಿಣಾಮಗಳು ಬೀರುತ್ತವೆ ಎಂದು ತಿಳಿಸಿದ್ದಾರೆ.

ಮೊಹಲ್ಲಾ ಕ್ಲಿನಿಕ್ ದೆಹಲಿಯ ಜನರಿಗೆ ಉಚಿತ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ನಗರದಲ್ಲಿ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ ಕೈಗೊಂಡ ಪ್ರಮುಖ ಆರೋಗ್ಯ ಸೇವೆಯಾಗಿದೆ. ಹಿರಿಯ ಆರೋಗ್ಯ ಅಧಿಕಾರಿಯ ಪ್ರಕಾರ, ದೆಹಲಿಯಲ್ಲಿ 500ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್‌ಗಳಿವೆ.

ಇದನ್ನೂ ಓದಿ: 2 ಗಂಟೆಯಲ್ಲಿ ಒಮಿಕ್ರಾನ್​ ಪತ್ತೆ ಹಚ್ಚುವ ಕಿಟ್​ ಅಭಿವೃದ್ಧಿಪಡಿಸಿದ ಐಸಿಎಂಆರ್..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.