ETV Bharat / bharat

ಮಣ್ಣಿನ ಗೋಡೆಯಡಿ ಸಿಲುಕಿ ಮೂವರು ಮಕ್ಕಳ ಸಾವು - ಈಟಿವಿ ಭಾರತ ಕನ್ನಡ

ಮಣ್ಣಿನ ಗೋಡೆಯಡಿ ಸಿಲುಕಿ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾ ಸಮೀಪ ನಡೆದಿದೆ.

3 children crushed under crumbling mud wall in Bengals Bankura
ಮಣ್ಣಿನ ಗೋಡೆಯಡಿ ಸಿಲುಕಿ ಮೂವರು ಮಕ್ಕಳು ಸಾವು
author img

By ETV Bharat Karnataka Team

Published : Sep 30, 2023, 7:06 PM IST

ಬಂಕುರಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಮಣ್ಣಿನ ಗೋಡೆಯಡಿ ಸಿಲುಕಿ ಮೂವರು ಮಕ್ಕಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಂಕುರಾ ಜಿಲ್ಲೆಯ ಬಿಷ್ಣುಪುರ ಪೊಲೀಸ್​ ಠಾಣೆಯ ಸಮೀಪದ ಬಕಡ ಬೋರಮರ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ. ಮೃತಪಟ್ಟ ಮಕ್ಕಳು ಮೂರು, ನಾಲ್ಕು ಮತ್ತು ಐದು ವರ್ಷದವರಾಗಿದ್ದಾರೆ.

ಈ ಮೂವರು ಮಕ್ಕಳು ಮನೆಯ ಗೋಡೆಯ ಬಳಿಯೇ ಆಟವಾಡುತ್ತಿದ್ದರು. ಅದು ಮಣ್ಣಿನ ಗೋಡೆಯಾದ್ದರಿಂದ ಮಕ್ಕಳ ಮೇಲೆ ಕುಸಿದು ಬಿದ್ದಿದೆ ಎಂದು ಕುಟುಂಬಸ್ಥರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಗೋಡೆಯ ಅಡಿ ಸಿಲುಕಿದ್ದ ಮಕ್ಕಳನ್ನು ಹೊರತೆಗೆದ ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳು ಬಿಷ್ಣುಪುರ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅದಾಗಲೇ ಮಕ್ಕಳು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು.

ಇಡೀ ಮನೆ ಕುಸಿದಿಲ್ಲ, ಇದು ಮಣ್ಣಿನ ಗೋಡೆಯಾದ ಕಾರಣ ಒಂದು ಬದಿ ಮಾತ್ರ ಕುಸಿದು ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸದ್ಯ ಮೂವರು ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಇವರೆಲ್ಲರೂ ಒಂದೇ ಕುಟುಂಬದ ಮಕ್ಕಳು.

ಇದನ್ನೂ ಓದಿ: ಗೋಡೆ ಕುಸಿದು ಬಿದ್ದು ಹೆಣ್ಣು ಮಗು ಸಾವು: ಸ್ಪೂರ್ತಿ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿದ ಜಿಲ್ಲಾಧಿಕಾರಿ

ಇನ್ನೂ ಬಿಷ್ಣುಪುರ ಪೊಲೀಸ್​ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇಂತಹ ಅನಿರೀಕ್ಷಿತ ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ರಾಜಕೀಯ ಮುಖಂಡರು ಇಂದು ಮೃತರ ಪೋಷಕರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಬಿಷ್ಣುಪುರದ ಪಕ್ಕದಲ್ಲಿರುವ ಈ ಗ್ರಾಮದಲ್ಲಿ ಬಹುತೇಕ ಜನರು ಮಣ್ಣಿನ ಮನೆಯನ್ನೇ ಹೊಂದಿದ್ದಾರೆ. ನಿನ್ನೆ ರಾತ್ರಿಯಿಂದ ಈ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿದ್ದು, ಮಣ್ಣಿನ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಹೈದರಾಬಾದ್‌ನಲ್ಲಿ ಕಟ್ಟಡದ ಗೋಡೆ ಕುಸಿತ: ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು, ಆರು ಮಹಡಿಯಿಂದ ಕೆಳಗೆ ಬಿದ್ದು ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಕೆಲವು ದಿನಗಳ ಹಿಂದೆ ಹೈದರಾಬಾದ್‌ನ ಕೆಪಿಎಚ್‌ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಮೃತರನ್ನು ಸಾಮಾ ಪಟ್ನಾಯಕ್ (23), ಸನ್ಯಾ ಚಲನ್​ (19) ಮತ್ತು ಸನ್ಯಾ ಪಟ್ನಾಯಕ್ (18) ಎಂದು ಗುರುತಿಸಲಾಗಿತ್ತು.

ಪೊಲೀಸರು, ಕೂಲಿಕಾರ್ಮಿಕರು ಮತ್ತು ಸ್ಥಳೀಯರು ತಿಳಿಸಿರುವಂತೆ, ಕೆಪಿಎಚ್‌ಬಿ ಅಡ್ಡಗುಟ್ಟಾದಲ್ಲಿ ದಾಸರಿ ಸಂತೋಷ್ ಅವರು ದಾಸರಿ ಶ್ರೀರಾಮ್ ಹೆಸರಿನಲ್ಲಿ 5 ಅಂತಸ್ತಿನ ಕಟ್ಟಡ ನಿರ್ಮಿಸಲು ಅನುಮತಿ ಪಡೆದುಕೊಂಡಿದ್ದರು. ಆದರೆ ಅಕ್ರಮವಾಗಿ ಆರನೇ ಮಹಡಿ ನಿರ್ಮಿಸಲಾಗುತ್ತಿತ್ತು. ಅಲ್ಲದೇ ಕಳಪೆ ಗೋಡೆ ನಿರ್ಮಾಣ ಹಾಗೂ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಕಟ್ಟಡ ಮಾಲೀಕರು ಹಾಗೂ ಬಿಲ್ಡರ್​ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ರಾಮನಗರ: ನೀರಿನ ಟ್ಯಾಂಕ್​ ಗೋಡೆ ಕುಸಿದು ವಿದ್ಯಾರ್ಥಿ ಸಾವು, ಮತ್ತೋರ್ವನಿಗೆ ಗಂಭೀರ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.