ಅಜ್ಮೀರ್ (ರಾಜಸ್ಥಾನ): ಇಲ್ಲಿನ ರಾಮಗಂಜ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಮೂವರು ಭಿಕ್ಷುಕರನ್ನು ಥಳಿಸುವ ವಿಡಿಯೋ ವೈರಲ್ ಆಗಿದೆ. ಪೋಲಿಸರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದ ಆಧಾರದ ಮೇಲೆ ಭಿಕ್ಷುಕರ ವಿರುದ್ಧ ಕೈ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ.
ರಾಮಗಂಜ್ ಪೊಲೀಸ್ ಠಾಣೆಯ ಪ್ರಭಾರಿ ಸತೇಂದ್ರ ನೇಗಿ ಅವರಿಗೆ ಆಗಸ್ಟ್ 20 ರಂದು ಹಲ್ಲೆಯ ವಿಡಿಯೋ ಸಾಮಾಜಿಕ ಮಾಧ್ಯಮದ ಮೂಲಕ ದೊರೆತಿದೆ. ಆ ವಿಡಿಯೋ ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ ನಗರದ್ದು ಎಂದು ಅವರಿಗೆ ಗೊತ್ತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವನ್ನು ತನಿಖೆ ಮಾಡಿದ್ದಾರೆ ಮತ್ತು ಅದೇ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಲಲಿತ್ ಶರ್ಮಾ ಚಂದ್ರವರ್ಧೈ ನಗರದ ನಿವಾಸಿಯನ್ನು ಬಂಧಿಸಿರುವುದಾಗಿ ಸತ್ಯೇಂದ್ರ ನೇಗಿ ತಿಳಿಸಿದ್ದಾರೆ.
ಈ ವಿಡಿಯೋಗೆ ಸಂಬಂಧಿಸಿದ ಯಾವುದೇ ರೀತಿಯ ದೂರು ದಾಖಲಾಗಿಲ್ಲ. ವಿಡಿಯೋ ಆಧರಿಸಿ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಲಲಿತ್ ಶರ್ಮಾ ಹೊರತುಪಡಿಸಿ ಇತರ ನಾಲ್ಕು ಜನರನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಸಂತ್ರಸ್ತರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆದರೆ, ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಂತ್ರಸ್ತರನ್ನು ಕಳ್ಳರೆಂದು ಶಂಕಿಸಿದ ಆರೋಪಿಗಳು ಮನ ಬಂದಂತೆ ಥಳಿಸಿದ್ದಾರೆ. ಮಾಹಿತಿಯ ಪ್ರಕಾರ, ಸಂತ್ರಸ್ತ ಮಶೂಕ್ ಅಲಿ ಉತ್ತರ ಪ್ರದೇಶದ ಕಾನ್ಪುರದ ನಿವಾಸಿ. ಈ ವಿಡಿಯೋದಲ್ಲಿ ಆತನೊಂದಿಗೆ ಒಬ್ಬ ಹುಡುಗ ಮತ್ತು ಹುಡುಗಿ ಕೂಡ ಇದ್ದಾರೆ.
ಓದಿ: ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ.. ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ