ETV Bharat / bharat

ಒಮ್ಮೆ ಜೆಸಿಬಿ ಡ್ರೈವರ್, ಮತ್ತೊಮ್ಮೆ ಅನಾಥ... 28 ವರ್ಷಕ್ಕೆ 24 ಮಹಿಳೆಯರ ಕಟ್ಟಿಕೊಂಡ ಭೂಪ - ಮದುವೆಯಾದ ನಂತರ ಮಹಿಳೆಯರ ಚಿನ್ನಾಭರಣಗಳನ್ನು ಕದಿಯುವುದು

ಜೆಸಿಬಿ ಡ್ರೈವರ್, ಅನಾಥ ಎಂದು ಕೇಳಿಕೊಂಡು ಅಪರಿಚಿತ ಮಹಿಳೆಯರ ಸ್ನೇಹ ಬೆಳೆಸಿ, ಅವರನ್ನು ನಂಬಿಸಿ ಮದುವೆಯಾಗುತ್ತಿದ್ದ ಆರೋಪಿಯೊಬ್ಬನನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ.

28-year-old-bengal-conman-married-24-women
ಒಮ್ಮೆ ಜೆಸಿಬಿ ಡ್ರೈವರ್, ಮತ್ತೊಮ್ಮೆ ಅನಾಥ ಎಂದು ಹೇಳಿ 24 ಮಹಿಳೆಯರ ಕಟ್ಟಿಕೊಂಡ ಭೂಪ
author img

By

Published : Oct 1, 2022, 3:56 PM IST

Updated : Oct 1, 2022, 6:39 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಜನರನ್ನು ಮೋಸಗೊಳಿಸಲು ವಂಚಕರು ಹೇಗೆಲ್ಲ ಹೊಸ ಹೊಸ ತಂತ್ರಗಳನ್ನು ಕಂಡುಕೊಳ್ಳುತ್ತಾರೆ ಎಂಬುದಕ್ಕೆ ಇಲ್ಲೊಂದು ನಿರ್ದಶನ ಇದೆ. ಪಶ್ಚಿಮ ಬಂಗಾಳದ ಯುವಕನೊಬ್ಬ ಅಪರಿಚಿತ ಮಹಿಳೆಯನ್ನು ನಂಬಿಸಿ ತನ್ನೊಂದಿಗೆ ಮದುವೆಯಾದ ಕೆಲವೇ ದಿನಗಳಲ್ಲಿ ಚಿನ್ನಾಭರಣಗಳು ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುತ್ತಿದ್ದ. ಹೀಗೆ ಇದುವರೆಗೆ 24 ಮಹಿಳೆಯರನ್ನು ವಂಚಕ ಮದುವೆಯಾಗಿರುವುದು ಬೆಳಕಿಗೆ ಬಂದಿದೆ.

ಮುರ್ಶಿದಾಬಾದ್ ಜಿಲ್ಲೆಯಲ್ಲಿ ಆರೋಪಿ ಅಸಾಬುಲ್ ಮೊಲ್ಲಾ ಎಂಬಾತನೇ 24 ಮಹಿಳೆಯರನ್ನು ಮದುವೆಯಾದ ಭೂಪ. ಪೊಲೀಸರ ತನಿಖೆಯಲ್ಲಿ ಈ ಎಲ್ಲ ಅಂಶಗಳು ಗೊತ್ತಾಗಿ ಖಾಕಿ ಪಡೆ ಬೇಸ್ತು ಬಿದ್ದಿದೆ. ಮಹಿಳೆಯೊಬ್ಬರು ನೀಡಿದ ದೂರಿನ ಮೇಲೆ ಸಾಗರದಿಘಿ ಠಾಣೆಯ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಈತನ ವಿಚಾರಣೆ ವೇಳೆ ಅನೇಕ ಅಚ್ಚರಿಯ ಅಂಶಗಳು ಬಯಲಾಗಿವೆ. ಅಂದ ಹಾಗೆ ಈತನ ವಯಸ್ಸು 28.

ಇದನ್ನೂ ಓದಿ: ಅಪಘಾತದಲ್ಲಿ ಕಾಲುಗಳ ಸ್ವಾಧೀನ ಕಳೆದುಕೊಂಡರೂ ಪ್ರಿಯಕರನನ್ನು ವರಿಸಿದ ಯುವತಿ: ಗಂಡನಿಂದ ದೂರ ಮಾಡಿದ ಪೋಷಕರು

ಒಮ್ಮೆ ಜೆಸಿಬಿ ಡ್ರೈವರ್, ಮತ್ತೊಮ್ಮೆ ಅನಾಥ: ಆರೋಪಿಯು ರಸ್ತೆ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗಾಗಿ ಕೆಲಸ ಅರಸಿ ವಿವಿಧ ಪ್ರದೇಶಗಳಿಗೆ ತೆರಳಿದ್ದ. ಅಲ್ಲಿ ಕೆಲವೊಮ್ಮೆ ತನ್ನನ್ನು ತಾನು ಜೆಸಿಬಿ ಡ್ರೈವರ್ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಕೆಲವೊಮ್ಮೆ ತಾನು ಅನಾಥ ಎಂದೂ ಹೇಳಿಕೊಳ್ಳುತ್ತಿದ್ದ. ಹೀಗೆ ಅಪರಿಚಿತ ಮಹಿಳೆಯರ ಸ್ನೇಹ ಬೆಳೆಸಿ, ಅವರನ್ನು ನಂಬಿಸಿ ಮದುವೆಯಾಗುತ್ತಿದ್ದ. ಅಲ್ಲದೇ, ಮಹಿಳೆಯರನ್ನು ನಂಬಿಸಲೆಂದೇ ನಕಲಿ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ ಬೇರೆ ಬೇರೆ ಪ್ರದೇಶಗಳಲ್ಲಿ ಮದುವೆಯಾಗುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮದುವೆಯಾದ ನಂತರ ಮಹಿಳೆಯರ ಚಿನ್ನಾಭರಣಗಳನ್ನು ಕದಿಯುವುದು ಮತ್ತು ನಂತರ ಕೆಲವು ವಾರಗಳ ಮನೆಯಿಂದ ಪರಾರಿಯಾಗುವುದೇ ಆರೋಪಿಯು ಮುಖ್ಯ ಗುರಿಯಾಗಿತ್ತು. ಮನೆಯಿಂದ ಹೋದ ನಂತರ ತನ್ನ ಮೊಬೈಲ್ ಟವರ್ ಲೊಕೇಶನ್ ಮೂಲಕ ಪತ್ತೆಹಚ್ಚುವುದನ್ನು ತಪ್ಪಿಸಲು ಬೇರೆ ಬೇರೆ ಸ್ಥಳಗಳಿಗೆ ತನ್ನ ಮೊಕ್ಕಾಂ ಬದಲಾಯಿಸುತ್ತಿದ್ದ. ಜೊತೆಗೆ ಹಲವು ದಿನಗಳ ಫೋನ್ ಬಂದ್​ ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸ್​ ಮೂಲಗಳಿಂದ ತಿಳಿದು ಬಂದಿದೆ.

ಇಷ್ಟೇ ಅಲ್ಲ, ಆರೋಪಿಯ ವಿಚಾರಣೆಯಲ್ಲಿ ಪೊಲೀಸರಿಗೆ ಮತ್ತೊಂದು ಅಚ್ಚರಿ ಅಂಶ ಕೂಡ ಬೆಳಕಿಗೆ ಬಂದಿದೆ. ಆರೋಪಿಯು ಪಶ್ಚಿಮ ಬಂಗಾಳವಲ್ಲದೇ ಬಿಹಾರದಲ್ಲೂ ವಿವಾಹವಾಗಿರುವುದು ಗೊತ್ತಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಆಕೆ ವಯಸ್ಸು 26.. ಮದುವೆ 6... 7ನೇ ಮದುವೆಯಲ್ಲಿ ರೆಡ್​​ ಹ್ಯಾಂಡ್​ ಆಗಿ ಹಿಡಿದ ಗಂಡ!

Last Updated : Oct 1, 2022, 6:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.