ETV Bharat / bharat

Covid ಭೀತಿಯ ನಡುವೆಯೂ ಶೇ.28 ಜನರಿಂದ ಪ್ರವಾಸಕ್ಕೆ ಪ್ಲಾನ್​ : ವರದಿ - ಸರ್ಕಾರಕ್ಕೆ ಎಚ್ಚರಿಕೆ

ಹೆಚ್ಚಿನ ಭಾರತೀಯರು ಮುಂದಿನ ದಿನಗಳಲ್ಲಿ ಪ್ರವಾಸ ಕೈಗೊಳ್ಳಲು ಯೋಚನೆ ಮಾಡುತ್ತಿದ್ದಾರೆ. ಸೂಕ್ತ ನಿರ್ಬಂಧಗಳನ್ನು ವಿಧಿಸದಿದ್ದರೆ ಕೋವಿಡ್ ಅಪಾಯ ತಪ್ಪಿದಲ್ಲ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.

28% Indians plan to travel
ಶೇ.28 ಜನರಿಂದ ಪ್ರವಾಸಕ್ಕೆ ಪ್ಲ್ಯಾನ್
author img

By

Published : Jul 26, 2021, 8:50 AM IST

ಮುಂಬೈ : ಶೇ. 28 ರಷ್ಟು ಭಾರತೀಯರು ಈ ವರ್ಷದ ಆಗಸ್ಟ್ - ಸೆಪ್ಟೆಂಬರ್ ನಡುವೆ ಪ್ರಯಾಣ ಕೈಗೊಳ್ಳಲು ಯೋಚಿಸುತ್ತಿದ್ದಾರೆ. ಇದು ಕೋವಿಡ್​ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸರ್ಕಾರ ಈಗಿನಿಂದಲೇ ಪ್ರಯಾಣ ನಿರ್ಬಂಧ ಹೇರಬೇಕು ಎಂದು ಸಂಸ್ಥೆಯೊಂದು ಎಚ್ಚರಿಕೆ ನೀಡಿದೆ.

ಆನ್​ಲೈನ್​ ಫ್ಲ್ಯಾಟ್​ ಫಾರ್ಮ್​ ಲೋಕಲ್​ ಸರ್ಕಲ್ಸ್​ ಏಪ್ರಿಲ್ 12 ರಂದು ನಡೆಸಿದ ಸಮೀಕ್ಷೆಯ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಕೋವಿಡ್ ಮೂರನೇ ಅಲೆಯ ಅಪಾಯವನ್ನು ತಡೆಯಲು ಸರ್ಕಾರ ಪ್ರಯಾಣ ನಿರ್ಬಂಧ ವಿಧಿಸುವಂತೆ ಸಲಹೆ ನೀಡಿದೆ.

ಕೋವಿಡ್ ಮೂರನೇ ಅಲೆಯ ಅಪಾಯ ಮತ್ತು ಜನರ ಪ್ರಯಾಣದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಲೋಕಲ್​ ಸರ್ಕಲ್ಸ್ ಸಮೀಕ್ಷೆ ನಡೆಸಿತ್ತು. ಇದಕ್ಕಾಗಿ, ದೇಶದ ವಿವಿಧ ರಾಜ್ಯಗಳ 311 ಜಿಲ್ಲೆಗಳ 18,000 ಜನರಿಂದ ಮಾಹಿತಿ ಸಂಗ್ರಹಿಸಿದೆ. ಸಮೀಕ್ಷೆಯಲ್ಲಿ ಶೇ.68 ರಷ್ಟು ಪುರುಷರು ಮತ್ತು ಶೇ.32 ರಷ್ಟು ಮಹಿಳೆಯರು ಪಾಲ್ಗೊಂಡಿದ್ದರು.

ಆಗಸ್ಟ್ - ಸೆಪ್ಟೆಂಬರ್ ಅವಧಿಯಲ್ಲಿ ಶೇ. 28 ರಷ್ಟು ಜನರು ಪ್ರಯಾಣದ ಪ್ಲಾನ್​ಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಪೈಕಿ ಶೇ. 5 ರಷ್ಟು ಜನರು ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಬೇಸಿಗೆಯಲ್ಲಿ ಲಾಕ್​​​ಡೌನ್​ ಕಾರಣ ಪ್ರವಾಸ ಕೈಗೊಳ್ಳಲಾಗದ ಜನರು ಈಗ ಪ್ರಯಾಣ ಮಾಡಲು ಮುಂದಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.