ETV Bharat / bharat

ವಿಷಪೂರಿತ ಮದ್ಯ ಸೇವನೆಗೆ 28 ಜನ ಸಾವು.. ಏರುತ್ತಲೇ ಇದೆ ಸಾವಿನ ಸಂಖ್ಯೆ! - ಅಲಿಗಢ್​ನಲ್ಲಿ ವಿಷಪೂರಿತ ಮದ್ಯ ಸೇವಿಸಿ 28 ಜನ ಸಾವು,

ವಿಷಪೂರಿತ ಮದ್ಯ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 28ಕ್ಕೆ ಏರಿದೆ. ಕೆಲವರು ಅಸ್ವಸ್ಥರಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Aligarh news  Uttar Pradesh news  28 died in poisonous alcohol scandal  aligarh poisonous liquor scandal  28 ಜನ ಸಾವು,  ಅಲಿಗಢ್​ನಲ್ಲಿ 28 ಜನ ಸಾವು,  ಅಲಿಗಢ್​ನಲ್ಲಿ ವಿಷಪೂರಿತ ಮದ್ಯ ಸೇವಿಸಿ 28 ಜನ ಸಾವು,  ಅಲಿಗಢ್​ ಅಪಾರಾಧ ಸುದ್ದಿ
ಸಂಗ್ರಹ ಚಿತ್ರ
author img

By

Published : May 29, 2021, 1:01 PM IST

Updated : May 29, 2021, 1:40 PM IST

ಅಲಿಗಢ್​: ವಿಷಪೂರಿತ ಮದ್ಯ ಸೇವಿಸಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರುತ್ತಲೇ ಇದ್ದು, ಇದುವರೆಗೆ 28 ಜನ ಮೃತಪಟ್ಟಿರುವುದಾಗಿ ಜಿಲ್ಲಾಡಳಿತ ಹೇಳಿದೆ.

ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಕರ್ಸುವಾ ಗ್ರಾಮದಲ್ಲಿ ನಿನ್ನೆ ವಿಷಪೂರಿತ ಮದ್ಯ ಸೇವಿಸಿ 11 ಜನ ಸಾವನ್ನಪ್ಪಿದ್ದು, ಅನೇಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಈ ಸಾವಿನ ಸಂಖ್ಯೆ 28ಕ್ಕೇರಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಈಗಾಗಲೇ ಆಸ್ಪತ್ರೆಯಲ್ಲಿ 15ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದು, ಮತ್ತಷ್ಟು ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಆಸ್ತಿ ಮುಟ್ಟುಗೋಲಿಗೆ ಸಿಎಂ ಅಸ್ತು!

ಇಡೀ ಘಟನೆ ಬಗ್ಗೆ ಅರಿತುಕೊಂಡ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಕರಣದ​ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಅಧಿಕಾರಿಗಳಿಗೆ ನೋಟಿಸ್​..

ಡಿಎಂ ಚಂದ್ರ ಭೂಷಣ್ ಸಿಂಗ್ ಅವರು ಪ್ರತಿಕ್ರಿಯಿಸಿದ್ದು, ಈವರೆಗೆ ನಾಲ್ಕು ಸರ್ಕಾರಿ ಅಂಗಡಿಗಳಿಗೆ ಸೀಲ್​ ಹಾಕಲಾಗಿದೆ. ಈ ಘಟನೆ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ. 15 ದಿನಗಳಲ್ಲಿ ವಿಚಾರಣೆಯ ವರದಿಯನ್ನು ಎಡಿಎಂ ಆಡಳಿತ ಡಿಪಿ ಪಾಲ್ ಅವರಿಂದ ಕೋರಲಾಗಿದೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಅಬಕಾರಿ ಅಧಿಕಾರಿ, ಖೈರ್ ಮತ್ತು ಕಲ್ಲಿದ್ದಲಿನ ಎಸ್‌ಡಿಎಂ, ಕ್ಷೇತ್ರಾಧಿಕಾರಿ ಗಭಾನಾ ಸೇರಿದಂತೆ ಮೂವರು ಇನ್ಸ್‌ಪೆಕ್ಟರ್‌ಗಳಿಗೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಭೂಷಣ್​ ಸಿಂಗ್​ ಹೇಳಿದ್ದಾರೆ.

ಮೂರು ಪ್ರಕರಣ ದಾಖಲು!

ವಿಷಕಾರಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ 3 ಪ್ರಕರಣಗಳು ದಾಖಲಾಗಿವೆ. ಥಾನಾ ಲೋಧಾ, ಖೈರ್ ಮತ್ತು ಜವಾಂನ ಪೊಲೀಸ್​ ಠಾಣೆಗಳಲ್ಲಿ 12 ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬಂಧಿತರಾದವರಲ್ಲಿ ಮದ್ಯ ಉದ್ಯಮಿ ಅನಿಲ್ ಚೌಧರಿ, ಶಾಪ್​ ಆಪರೇಟರ್ ನರೇಂದ್ರ, ಸೇಲ್ಸ್‌ಮ್ಯಾನ್ ಅಜಯ್ ಸಿಂಗ್​​ನನ್ನು ಬಂಧಿಸಲಾಗಿದೆ.

ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ!

ಪರಾರಿಯಾಗಿರುವ ಮುಖ್ಯ ಆರೋಪಿ ಮದ್ಯ ಉದ್ಯಮಿ ವಿಪಿನ್ ಯಾದವ್ ಮತ್ತು ರಿಷಿ ಶರ್ಮಾ ಬಗ್ಗೆ ಸುಳಿವು ನೀಡುವವರಿಗೆ 50 ಸಾವಿರ ಬಹುಮಾನ ಘೋಷಿಸಲಾಗಿದೆ.

ಎಸ್​ಎಸ್​ಪಿ ಹೇಳಿದ್ದೇನು?

ಲೋಧಾ ಪೊಲೀಸ್ ಠಾಣೆಯಲ್ಲಿ ಪಂಕಜ್ ಸಿಂಗ್, ಗಂಗಾ ಸಹಾಯ್, ಅನಿಲ್ ಚೌಧರಿ, ಗಂಗಾರಾಂ, ದಿಗ್ಪಾಲ್, ನರೇಂದ್ರ, ವಿಪಿನ್ ಯಾದವ್ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ, ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದರಲ್ಲಿ ಗಂಗಾ ಸಹಾಯ್​, ಅನಿಲ್ ಚೌಧರಿ, ಗಂಗಾರಾಂ, ವಿಪಿನ್ ಯಾದವ್ ಮದ್ಯ ಪರವಾನಗಿ ಪಡೆದ ಗುತ್ತಿಗೆದಾರರಾಗಿದ್ದಾರೆ ಎಂದು ಎಸ್‌ಎಸ್‌ಪಿ ಕಲಾನಿಧಿ ನೈಥಾನಿ ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸ್​ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಪೊಲೀಸರು ಗಂಭೀರವಾಗಿ ತನಿಖೆ ಕೈಗೊಂಡಿದ್ದಾರೆ.

Last Updated : May 29, 2021, 1:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.