ETV Bharat / bharat

ಕಸ್ಟಮ್ಸ್​ ಅಧಿಕಾರಿಗಳ ಭರ್ಜರಿ ಬೇಟೆ: 28 ಕೋಟಿ ರೂ ಮೌಲ್ಯದ ಕೊಕೇನ್​ ವಶ - ಕಸ್ಟಮ್ಸ್​ ಇಲಾಖೆ ಅಧಿಕಾರಿಗಳು

ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಸುಮಾರು 28 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​ ಸಾಗಣೆ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.

drugs-seized-in-mumbai-airport
ಕಸ್ಟಮ್ಸ್​ ಅಧಿಕಾರಿಗಳ ಭರ್ಜರಿ ಬೇಟೆ
author img

By

Published : Jan 10, 2023, 1:12 PM IST

ಮುಂಬೈ (ಮಹಾರಾಷ್ಟ್ರ): ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಇಲಾಖೆ ಅಧಿಕಾರಿಗಳು ಸೋಮವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಗ್​ನಲ್ಲಿ ಗುಪ್ತವಾಗಿ ಸಾಗಿಸುತ್ತಿದ್ದ 28 ಕೋಟಿ ರೂಪಾಯಿ ಮೌಲ್ಯದ 2.81 ಕೆಜಿ ಕೊಕೇನ್​ ಡ್ರಗ್ಸ್​ ಜಪ್ತಿ ಮಾಡಿದ್ದು, ಪ್ರಯಾಣಿಕನನ್ನು ಬಂಧಿಸಲಾಗಿದೆ. ಆರೋಪಿ ತಾನು ಹನಿಟ್ರ್ಯಾಪ್​ಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾನೆ.

ವಿಮಾನ ನಿಲ್ದಾಣದಲ್ಲಿ ಹ್ಯಾಂಡ್​ಬ್ಯಾಗ್​ನಲ್ಲಿಟ್ಟು ಸಾಗುತ್ತಿದ್ದಾಗ ಅನುಮಾನದ ಮೇರೆಗೆ ಪೊಲೀಸರು ಆತನನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಬ್ಯಾಗ್​ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದರಲ್ಲಿ ಏನೋ ಇರುವುದು ಕಂಡುಬಂದಿದೆ. ಬ್ಯಾಗ್​ ಭಾರವಿದ್ದು ವಶಕ್ಕೆ ಪಡೆದಿದ್ದಾರೆ. ಬಳಿಕ ಅದನ್ನು ತೆಗೆದು ನೋಡಿದಾಗ ವಿಶೇಷವಾಗಿ ರೂಪಿಸಲಾದ ಪ್ಯಾಕ್​ನಲ್ಲಿ ಡ್ರಗ್ಸ್​ ಇರುವುದು ಗೊತ್ತಾಗಿದೆ.

ಬ್ಯಾಗ್​ ಅನ್ನು ಸಂಪೂರ್ಣವಾಗಿ ತಪಾಸಿಸಿ ಅದರಲ್ಲಿದ್ದ ಮಾದಕ ದ್ರವ್ಯ ವಸ್ತುವಾದ ಕೊಕೇನ್​ ಅನ್ನು ಜಪ್ತಿ ಮಾಡಲಾಗಿದೆ. 2.81 ಕೆಜಿ ತೂಕವಿದ್ದು, ಇದು ಮಾರುಕಟ್ಟೆ ದರದಲ್ಲಿ 28.10 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆಯ ವೇಳೆ ಬಂಧಿತ, ತಾನು ಹನಿಟ್ರ್ಯಾಪ್​ಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ತನ್ನನ್ನು ಬೆದರಿಸಿ ಈ ಕೆಲಸ ಮಾಡಿಸುತ್ತಿದ್ದಾನೆ ಎಂದು ತಿಳಿಸಿದ್ದಾನೆ.

ಕಳೆದ ವಾರ ₹47 ಕೋಟಿ ಡ್ರಗ್ಸ್​ ಜಪ್ತಿ: ಕಳೆದ ವಾರವೂ ಕೂಡ ಮುಂಬೈ ನಿಲ್ದಾಣದಲ್ಲಿ 47 ಕೋಟಿ ರೂ. ಮೌಲ್ಯದ ಹೆರಾಯಿನ್​ ಮತ್ತು ಕೊಕೇನ್​ ಸಾಗಿಸುತ್ತಿದ್ದ ವ್ಯಕ್ತಿಗಳಿಬ್ಬರನ್ನು ಬಂಧಿಸಲಾಗಿತ್ತು. ಈ ದಾಳಿ ವಿಮಾನ ನಿಲ್ದಾಣದ ಮೂರನೇ ವಲಯದಲ್ಲಿ ನಡೆದಿತ್ತು. 31.29 ಕೋಟಿ ರೂಪಾಯಿ ಮೌಲ್ಯದ 4.47 ಕೆಜಿ ತೂಕದ ಹೆರಾಯಿನ್​ ಮತ್ತು 1.59 ಕೆಜಿ ತೂಕದ ಕೊಕೇನ್​ ಜಪ್ತಿ ಮಾಡಲಾಗಿತ್ತು. ಇದು 15.96 ಕೋಟಿ ರೂಪಾಯಿ ಮೌಲ್ಯದ್ದು ಎಂದು ಅಧಿಕಾರಿಗಳು ತಿಳಿಸಿದ್ದರು.

ಇವೆರಡು ಘಟನೆಗಳು ಪ್ರತ್ಯೇಕವಾಗಿ ನಡೆದಿದ್ದು, ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ ವ್ಯಕ್ತಿ ಕೀನ್ಯಾದ ನೈರೋಬಿ ಮೂಲಕ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅನುಮಾನದ ಮೇಲೆ ತಪಾಸಣೆ ನಡೆಸಲಾಗಿತ್ತು. ಆಗ ಈತನ ಬಳಿ 4.47 ಕೆಜಿ ತೂಕದ ಹೆರಾಯಿನ್​ ಸಿಕ್ಕಿತ್ತು. ಅಲ್ಲದೇ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು.

ಇಥಿಯೋಪಿಯಾದ ವಿಮಾನದಲ್ಲಿ ಬಂದಿಳಿದ ಇನ್ನೊಬ್ಬ ಪ್ರಯಾಣಿಕನ ಬಳಿಯ ಮಹಿಳೆಯರ ಕೈಚೀಲ ಮತ್ತು ಕುರ್ತಾದ ಬಟನ್​ಗಳಲ್ಲಿ ಅಡಗಿಸಿಡಲಾಗಿದ್ದ ಕೊಕೇನ್​ ಅನ್ನು ಪತ್ತೆ ಮಾಡಲಾಗಿತ್ತು. ಇದು 1.596 ಕೆಜಿ ತೂಕವಿತ್ತು. ಬಳಿಕ ಇಬ್ಬರೂ ಪ್ರಯಾಣಿಕರ ವಿರುದ್ಧ ಡ್ರಗ್ಸ್​ ನಿಯಂತ್ರಣ ಮತ್ತು ಅಪರಾಧ ಕಾಯ್ದೆಯಡಿ(ಎನ್​ಡಿಪಿಎಸ್​) ಪ್ರಕರಣ ದಾಖಲಿಸಲಾಗಿತ್ತು.

ಹೊಟ್ಟೆಯಲ್ಲಿ ಕೊಕೇನ್​ ಸಾಗಣೆ: ಕಳೆದ ವರ್ಷದ ಸೆಪ್ಟೆಂಬರ್​ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ 13 ಕೋಟಿ ಮೌಲ್ಯದ 1.3 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದರು. ಘಾನಾದಿಂದ ಬಂದ ಪ್ರಯಾಣಿಕನನ್ನು ಬಂಧಿಸಿ, ತಪಾಸಣೆ ನಡೆಸಿದರು. ಈ ವೇಳೆ ಆರೋಪಿ ತನ್ನ ಹೊಟ್ಟೆಯಲ್ಲಿ ಕೊಕೇನ್ ಡ್ರಗ್ಸ್ ಅನ್ನು ಸಾಗಿಸುತ್ತಿದ್ದುದು ಗೊತ್ತಾಗಿತ್ತು. ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ, ಆತನ ಹೊಟ್ಟೆಯಿಂದ 87 ಕ್ಯಾಪ್ಸುಲ್‌ಗಳನ್ನು ಹೊರತೆಗೆಯಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಮುಂಬೈ ಕಸ್ಟಮ್ಸ್ ಪೊಲೀಸರು ಡ್ರಗ್ಸ್ ಕಳ್ಳಸಾಗಣೆ ಮತ್ತು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡ್ರಗ್ ಗುಂಪನ್ನು ಭೇದಿಸಿತ್ತು. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಗಡಿಯಾಚೆಗಿನ ಡ್ರಗ್ಸ್​ ದಂಧೆಯ ಕಿಂಗ್​ ಪಿನ್​ಗಳ ಸೆರೆ: 10 ಕೆಜಿ ಹೆರಾಯಿನ್, 20 ಲಕ್ಷದ ಅಮೆರಿಕನ್ ಡ್ರೋನ್ ಜಪ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.