ಮಥುರಾ(ಉತ್ತರ ಪ್ರದೇಶ): ಡೆಡ್ಲಿ ವೈರಸ್ ಕೋವಿಡ್ ಸೋಂಕಿನಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ನಿತ್ಯ 4 ಲಕ್ಷಕ್ಕೂ ಅಧಿಕ ಸೋಂಕಿತ ಪ್ರಕರಣ ದಾಖಲಾಗುತ್ತಿದ್ದು, ಕೆಲವೊಂದು ರಾಜ್ಯಗಳಲ್ಲಿ ಇದರ ಸ್ಥಿತಿ ಹೇಳತೀರದಾಗಿದೆ.
ಇದೀಗ ಉತ್ತರ ಪ್ರದೇಶದ ಮಥುರಾದಲ್ಲಿನ ಶೆಲ್ಟರ್ ಹೋಂನಲ್ಲಿದ್ದ 28 ಮಕ್ಕಳಿಗೆ ಕೊರೊನಾ ಸೋಂಕು ದೃಢಗೊಂಡಿದ್ದು, ಅವರಿಗೆ ಚಿಕಿತ್ಸೆ ಆರಂಭಿಸಲಾಗಿದೆ.
ಮಥುರಾ ಜಿಲ್ಲೆಯಲ್ಲಿ ಹೊಸದಾಗಿ 333 ರೋಗಿಗಳಲ್ಲಿ ಕೊರೊನಾ ಸೋಂಕು ದೃಢಗೊಂಡಿದ್ದು, ಅದರಲ್ಲಿ ಆಶ್ರಯ ಮನೆಯಲ್ಲಿದ್ದ 28 ಮಕ್ಕಳು ಸೇರಿಕೊಂಡಿದ್ದಾರೆ. ಇದೀಗ ಅಲ್ಲಿನ ಮಕ್ಕಳ ಆರೋಗ್ಯದ ಕಾಳಜಿಗೋಸ್ಕರ ವೈದ್ಯರ ತಂಡ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ವೈದ್ಯ ಪತಿಗೆ ಕೊರೊನಾ ಸೋಂಕು, ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾದ ಹೆಂಡತಿ
40 ಮಕ್ಕಳ ಮಾದರಿ ಸಂಗ್ರಹ
ಶೆಲ್ಟರ್ ಹೋಂನಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ 40 ಮಕ್ಕಳ ಕೊರೊನಾ ಮಾದರಿ ಸಂಗ್ರಹಿಸಲಾಗಿದೆ. ಈ ಆಶ್ರಯ ಮನೆಯಲ್ಲಿ 90 ಮಕ್ಕಳು ವಾಸವಾಗಿದ್ದಾರೆ. ಮಥುರಾದಲ್ಲಿ ಕೋವಿಡ್ನೊಂದ 190 ಜನರು ಸಾವನ್ನಪ್ಪಿದ್ದಾರೆ.