ETV Bharat / bharat

ವೈದ್ಯಕೀಯ ಶಿಕ್ಷಣ: ಒಬಿಸಿ, ಆರ್ಥಿಕ ದುರ್ಬಲ ವರ್ಗಗಳಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ! - ಪ್ರಧಾನಿ ನರೇಂದ್ರ ಮೋದಿ

ಇತರೆ ಹಿಂದುಳಿದ ವರ್ಗ (ಒಬಿಸಿ) ಸಮುದಾಯಗಳ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿ ಒಬಿಸಿಗೆ ಶೇ 27 ರಷ್ಟು ಮೀಸಲಾತಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ 10 ರಷ್ಟು ಕೋಟಾ ಘೋಷಿಸಲಾಗಿದೆ. ಹೊಸ ಮೀಸಲಾತಿ ನಿಬಂಧನೆಯನ್ನು ಈ ವರ್ಷದ ಪ್ರವೇಶದಲ್ಲೂ ಜಾರಿಗೆ ತರಲಾಗುವುದು ಎಂದು ಸರ್ಕಾರ ತಿಳಿಸಿದೆ.

27% OBC quota in all-India medical admission, 10% for economically weak section
ವೈದ್ಯಕೀಯ ಪ್ರವೇಶದಲ್ಲಿ ಒಬಿಸಿಗಳಿಗೆ 27 ರಷ್ಟು, ಆರ್ಥಿಕವಾಗಿ ದುರ್ಬಲ ವರ್ಗಳಿಗೆ 10 ರಷ್ಟು ಮೀಸಲಾತಿ ಘೋಷಣೆ
author img

By

Published : Jul 29, 2021, 4:42 PM IST

ನವದೆಹಲಿ: ಅಖಿಲ ಭಾರತ ವೈದ್ಯಕೀಯ ಪ್ರವೇಶಾತಿಯಲ್ಲಿ ಒಬಿಸಿಗೆ ಶೇ 27 ರಷ್ಟು ಮೀಸಲಾತಿ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ಆದೇಶ ಜಾರಿಗೆ ಬರಲಿದೆ.

ಪ್ರತಿವರ್ಷ ಎಂಬಿಬಿಎಸ್‌ನಲ್ಲಿ ಸುಮಾರು 1,500 ಒಬಿಸಿ ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ಪದವಿ 2,500 ಒಬಿಸಿ ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

  • Our Government has taken a landmark decision for providing 27% reservation for OBCs and 10% reservation for Economically Weaker Section in the All India Quota Scheme for undergraduate and postgraduate medical/dental courses from the current academic year. https://t.co/gv2EygCZ7N

    — Narendra Modi (@narendramodi) July 29, 2021 " class="align-text-top noRightClick twitterSection" data=" ">

ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿ ಒಬಿಸಿಗೆ ಶೇ 27 ರಷ್ಟು ಮೀಸಲಾತಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ 10 ರಷ್ಟು ಕೋಟಾವನ್ನು ಸರ್ಕಾರ ಘೋಷಿಸಿದೆ. ಹೊಸ ಮೀಸಲಾತಿ ನಿಬಂಧನೆಯನ್ನು ಈ ವರ್ಷದ ಪ್ರವೇಶದಲ್ಲೂ ಜಾರಿಗೆ ತರಲಾಗುವುದು ಎಂದು ಸರ್ಕಾರ ತಿಳಿಸಿದೆ. ದಂತ ಸೇರಿದಂತೆ ಎಲ್ಲಾ ಪದವಿಪೂರ್ವ ಹಾಗೂ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳು 2021-22 ರಿಂದ ಒಬಿಸಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾತಿ ಅನ್ವಯಿಸಲಿದೆ.

ಎಂಬಿಬಿಎಸ್‌ನಲ್ಲಿ ಸುಮಾರು 1,500 ಒಬಿಸಿ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವೀಧರರಾದ 2,500 ವಿದ್ಯಾರ್ಥಿಗಳು ಈ ಮೀಸಲಾತಿಯಿಂದ ಪ್ರತಿವರ್ಷ ಪ್ರಯೋಜನ ಪಡೆಯಲಿದ್ದಾರೆ. ಇದು ಪ್ರತಿವರ್ಷ ನಮ್ಮ ಸಾವಿರಾರು ಯುವಕರಿಗೆ ಉತ್ತಮ ಅವಕಾಶಗಳನ್ನು ಪಡೆಯಲು ಮತ್ತು ನಮ್ಮ ದೇಶದಲ್ಲಿ ಸಾಮಾಜಿಕ ನ್ಯಾಯದ ಹೊಸ ಮಾದರಿಯನ್ನು ಸೃಷ್ಟಿಸಲು ಅಪಾರ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶಾದ್ಯಂತದ ಒಬಿಸಿ ವಿದ್ಯಾರ್ಥಿಗಳು ಈಗ ಯಾವುದೇ ರಾಜ್ಯದಲ್ಲಿ ಹುದ್ದೆಗಳಿಗಾಗಿ ಸ್ಪರ್ಧಿಸಲು ಎಐಕ್ಯು ಯೋಜನೆಯಲ್ಲಿ ಈ ಮೀಸಲಾತಿಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಕೇಂದ್ರದ ಯೋಜನೆಯಾಗಿರುವುದರಿಂದ, ಈ ಮೀಸಲಾತಿಗಾಗಿ ಒಬಿಸಿಗಳ ಕೇಂದ್ರ ಪಟ್ಟಿಯನ್ನು ಬಳಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.