ETV Bharat / bharat

ಹೊಸ ಸಂಸತ್ ಕಟ್ಟಡ ಉದ್ಘಾಟನಾ ಸಮಾರಂಭ: ಕಾರ್ಯಕ್ರಮಕ್ಕೆ 25 ಪಕ್ಷಗಳ ನಾಯಕರು ಹಾಜರ್​ - Lok Sabha Speaker Om Birla

ಕಾಂಗ್ರೆಸ್​ ಸೇರಿದಂತೆ 19 ವಿರೋಧ ಪಕ್ಷಗಳು ಹೊಸ ಸಂಸತ್​ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಭಾಗಿಯಾಗಲಿವೆ.

ಹೊಸ ಸಂಸತ್ ಕಟ್ಟಡ
ಹೊಸ ಸಂಸತ್ ಕಟ್ಟಡ
author img

By

Published : May 25, 2023, 10:39 PM IST

ನವದೆಹಲಿ: ಪ್ರತಿಪಕ್ಷಗಳ ಬಹಿಷ್ಕಾರದ ಕರೆ ನಡುವೆ ಮೇ 28 ರಂದು ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಭಾಗವಲ್ಲದ 25 ರಾಜಕೀಯ ಪಕ್ಷಗಳ ದೃಢೀಕೃತ ಪಟ್ಟಿಯನ್ನು ಕೇಂದ್ರವು ಸ್ವೀಕರಿಸಿದೆ.

ಬಿಜೆಪಿ ಹೊರತಾಗಿ, ಜೆಡಿಎಸ್​, ಎಐಎಡಿಎಂಕೆ, ಅಪ್ನಾ ದಳ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಶಿವಸೇನೆಯ ಶಿಂಧೆ ಬಣ, ಎನ್‌ಪಿಪಿ ಮತ್ತು ಎನ್‌ಪಿಎಫ್ ಸೇರಿದಂತೆ ಎನ್‌ಡಿಎಯ ಹಲವಾರು ಪಕ್ಷಗಳು ಭಾನುವಾರದ ಸಮಾರಂಭಕ್ಕೆ ಹಾಜರಾಗುವುದನ್ನು ಖಚಿತಪಡಿಸಿವೆ.

ಬಿಜು ಜನತಾ ದಳ, ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ಸೇರಿದಂತೆ ಹಲವು ತಟಸ್ಥ ಪಕ್ಷಗಳು ಉದ್ಘಾಟನೆಗೆ ಹಾಜರಾಗಲಿವೆ. ವಿರೋಧ ಪಕ್ಷಗಳ ಪೈಕಿ ಶಿರೋಮಣಿ ಅಕಾಲಿದಳ ಮತ್ತು ಬಹುಜನ ಸಮಾಜವಾದಿ ಪಕ್ಷ ಮತ್ತು ಜೆಡಿಎಸ್ ಭಾನುವಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿವೆ. ಇನ್ನೊಂದೆಡೆ ಕಾಂಗ್ರೆಸ್ ಸೇರಿದಂತೆ 20 ವಿರೋಧ ಪಕ್ಷಗಳು ಈ ಸಮಾರಂಭವನ್ನು ಈಗಾಗಲೇ ಬಹಿಷ್ಕರಿಸಿವೆ.

ಉದ್ಘಾಟನಾ ಕಾರ್ಯವು ಮಧ್ಯಾಹ್ನ ಪ್ರಾರಂಭ: ಭಾನುವಾರ ಮೇ 28 ರಂದು ಬೆಳಗ್ಗೆ ವಿಸ್ತೃತ ಸಮಾರಂಭವು ನಡೆಯಲಿದೆ ಎಂದು ವಿಶ್ವಾಸಾರ್ಹ ಮೂಲಗಳ ಮೂಲಕ ತಿಳಿದುಬಂದಿದೆ. ಇದರಲ್ಲಿ ವೈದಿಕ ವಿಧಿ ವಿಧಾನದ ಪೂಜೆಗಳು ಬೆಳಗ್ಗೆ 7:30 ರಿಂದ ಪ್ರಾರಂಭವಾಗಲಿದ್ದು, 9 ಗಂಟೆಯವರೆಗೆ ನಡೆಯಲಿದೆ. ಉದ್ಘಾಟನಾ ಕಾರ್ಯವು ಮಧ್ಯಾಹ್ನದ ಸುಮಾರಿಗೆ ಪ್ರಾರಂಭವಾಗುವ ನಿರೀಕ್ಷೆಯಿದೆ.

ಬೆಳಗ್ಗೆ ನಡೆಯುವ ಪೂಜೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಉಪ ಸಭಾಪತಿ ಹರಿವಂಶ್ ಮತ್ತು ಒಂದೆರಡು ಉನ್ನತ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ. ದೇಶಾದ್ಯಂತ ವಿಶೇಷ ಅರ್ಚಕರು ಆಗಮಿಸಿ ಪೂಜೆಗಳನ್ನು ನೆರವೇರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಳಗ್ಗೆ 11:30 ಕ್ಕೆ ಸಂಸತ್ತಿನ ಸದಸ್ಯರು, ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾ ಸದಸ್ಯರು, ಸಭಾಪತಿಗಳು ಮತ್ತು ಇತರ ಗಣ್ಯ ಅತಿಥಿಗಳು ಸೇರಿದಂತೆ ಎಲ್ಲಾ ಆಹ್ವಾನಿತರು ಹೊಸ ಕಟ್ಟಡದಲ್ಲಿರುವ ಲೋಕಸಭೆಯ ಚೇಂಬರ್‌ನಲ್ಲಿ ಕುಳಿತುಕೊಳ್ಳುವ ನಿರೀಕ್ಷೆಯಿದೆ.

ಮೋದಿ ಅವರು ಸಮಾರೋಪ ಭಾಷಣ ಮಾಡುವ ನಿರೀಕ್ಷೆ: ಕಾರ್ಯಕ್ರಮ ಸುಮಾರು 12 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 1:30 ರ ಹೊತ್ತಿಗೆ ಮುಗಿಯುವ ನಿರೀಕ್ಷೆಯಿದೆ. ಸಮಾರಂಭದ ಸಮಯದಲ್ಲಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸೆಂಗೋಲ್( ಅಧಿಕಾರ ದಂಡ) ಅನ್ನು ಹೊಸ ಕಟ್ಟಡದಲ್ಲಿ ಸ್ಥಾಪಿಸಲಾಗುವುದು. ಇದು ಮೂಲ ಲೋಕಸಭೆಯಾಗಲಿದೆ.

ಚೇಂಬರ್, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಭಾಷಣ ಮಾಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಮಾರೋಪ ಭಾಷಣ ಮಾಡುವ ನಿರೀಕ್ಷೆಯಿದೆ. ಮೇ 28 ರಂದು ನಡೆಯಲಿರುವ ನೂತನ ಸಂಸತ್ತಿನ ಉದ್ಘಾಟನೆಗೆ ಆಮಂತ್ರಣ ಪತ್ರಗಳನ್ನು ಇ - ಆಹ್ವಾನದ ಮೂಲಕ ಕಳುಹಿಸಲಾಗಿದೆ. ಮೇ 28 ರಂದು ನೂತನ ಸಂಸತ್ ಭವನವನ್ನು ದೇಶಕ್ಕೆ ಸಮರ್ಪಿಸಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಉದ್ಘಾಟನಾ ಸಮಾರಂಭದ ನಂತರ ಭಾಷಣ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲ ಮುಖ್ಯಮಂತ್ರಿಗಳಿಗೂ ಆಹ್ವಾನ: ಉಭಯ ಸದನಗಳ ಹಾಲಿ ಸದಸ್ಯರನ್ನು ಹೊರತುಪಡಿಸಿ ಮಾಜಿ ಲೋಕಸಭಾ ಸ್ಪೀಕರ್‌ಗಳು ಮತ್ತು ಮಾಜಿ ರಾಜ್ಯಸಭಾ ಅಧ್ಯಕ್ಷರಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ ಎಂದು ಅನಾಮಧೇಯತೆಯ ಷರತ್ತಿನ ಮೂಲಗಳು ಎಎನ್‌ಐಗೆ ತಿಳಿಸಿವೆ. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಎಲ್ಲ ಮುಖ್ಯಮಂತ್ರಿಗಳನ್ನು ಸಹ ಆಹ್ವಾನಿಸಲಾಗಿದೆ. ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳ ಕಾರ್ಯದರ್ಶಿಗಳಿಗೂ ಆಹ್ವಾನಗಳನ್ನು ಕಳುಹಿಸಲಾಗಿದೆ.

ಇದನ್ನೂ ಓದಿ: ಹೊಸ ಸಂಸತ್ ಕಟ್ಟಡ ಉದ್ಘಾಟನೆ ವಿವಾದ: ಪ್ರಧಾನಿಯೇ ಸರ್ಕಾರದ ಮುಖ್ಯಸ್ಥರು- ಬಿಜೆಪಿ ಸಮರ್ಥನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.