ಮೇಷ: ನೀವು ನಿಮ್ಮ ಕೆಲಸದಲ್ಲಿ ಮತ್ತು ಸಾಮಾಜಿಕ ಬಾಧ್ಯತೆಗಳಲ್ಲಿ ಅತಿಯಾದ ಒತ್ತಡದಲ್ಲಿದ್ದೀರಿ. ನೀವು ಬಿಡುವು ತೆಗೆದುಕೊಂಡು ಕೊಂಚ ನಿಮಗಾಗಿ ಕಾಲ ಕಳೆಯಲು ಪ್ರಯತ್ನಿಸಿ. ನಿಮ್ಮ ಆರೋಗ್ಯದ ಕಡೆ ಗಮನ ನೀಡಬೇಕು. ಇಂದು ನಿಮಗೆ ಶುಭ ದಿನವಾಗಿದೆ.
ವೃಷಭ: ಇಂದು ನೀವು ಗೋಜಲುಗಳಿಂದ ಬಿಡಿಸಿಕೊಂಡು ಹೊರಹೋಗುವ ದಿನ. ನೀವು ಇತರರ ಕೆಲಸಕ್ಕೆ ಹಾಗೂ ಆಕ್ಷೇಪಣೆೆಗಳಿಗೆ ಒಳಗಾಗುತ್ತೀರಿ. ಮಧ್ಯಾಹ್ನದ ವೇಳೆಗೆ ವಿಷಯಗಳು ಆಶಾಭಂಗ ತರಬಹುದು. ಮತ್ತು ನಿಮ್ಮ ವಿಶ್ವಾಸದ ಮಟ್ಟ ಕುಸಿಯಬಹುದು. ನಿಮ್ಮ ಶಕ್ತಿಯ ಮೇಲೆ ಕೆಲಸ ಮಾಡಿ, ನಿಮ್ಮ ದೌರ್ಬಲ್ಯವನ್ನು ನಿವಾರಿಸಿಕೊಳ್ಳಿ.
ಮಿಥುನ : ನೀವು ನಿಮ್ಮ ಹಣ, ಜಂಟಿಯಾಗಿ ಹೊಂದಿರುವ ಸಂಪತ್ತು ಮತ್ತು ಸ್ಥಿರಾಸ್ತಿಯ ಕುರಿತು ಆತಂಕಗೊಳ್ಳುವ ಸಾಧ್ಯತೆ ಇದೆ. ಅತ್ಯಂತ ನಿರ್ಲಕ್ಷಿಸಬಹುದಾದ ಸಮಸ್ಯೆಗಳು ಸಹ ನಿಮ್ಮ ಮೂಡ್ ಹಾಳು ಮಾಡಬಹುದು. ನೀವು ಹಣಕಾಸಿನ ವಿಷಯಗಳಲ್ಲಿ ಅವಕಾಶಗಳನ್ನು ತೆಗೆದುಕೊಳ್ಳಬಹುದು. ನೀವು ವಿಚಲಿತರಾಗದೆ ಇರುವುದು ಸೂಕ್ತ.
ಕರ್ಕಾಟಕ: ಇಂದು ನೀವು ನಿಮ್ಮ ಅಗತ್ಯಗಳನ್ನು ಪೂರೈಸಲು ಹಣ ಬಳಸುತ್ತೀರಿ. ನಿಮ್ಮ ಪ್ರಕಾರ ಏನೇ ಬದಲಾಗಬೇಕೆಂದರೂ ನೀವು ಅದಕ್ಕೆ ಹಣ ಖರ್ಚುಮಾಡಬೇಕು. ನಿಮ್ಮ ಪ್ರೀತಿಪಾತ್ರರು ನಿಮ್ಮ ಹಣಕಾಸಿನ ಲಾಭಗಳನ್ನು ಸಂಭ್ರಮಿಸುತ್ತಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಮತ್ತಷ್ಟು ಖರ್ಚು ಮಾಡುತ್ತೀರಿ.
ಸಿಂಹ : ಕೆಲ ಭರವಸೆಗಳು ಖಾಸಗಿ ಮಾತುಗಳಂತೆ ಎಂದಿಗೂ ವಾಸ್ತವಗೊಳ್ಳುವುದಿಲ್ಲ. ನೀವು ಏನನ್ನು ಬಯಸುತ್ತೀರೋ ಅದಕ್ಕೆ ಎಷ್ಟೋ ಹತ್ತಿರ ಮತ್ತು ಎಷ್ಟೋ ದೂರವಿದ್ದೀರಿ. ನೀವು ಉದಾರತೆಗೆ ಮತ್ತು ವಿನಯಶೀಲತೆಗೆ ಮನಸ್ಸು ಸೋಲುತ್ತದೆ. ನೆನಪಿಟ್ಟುಕೊಳ್ಳಿ, ನೀವು ಪ್ರತಿ ಸಲವೂ ಗೆಲ್ಲಲು ಸಾಧ್ಯವಿಲ್ಲ. ನಿರಾಸೆಗಳನ್ನು ತಪ್ಪಿಸಲು ನಿಮ್ಮ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಿ. ಬದಲಾವಣೆಯ ಗಾಳಿಗೆ ಕಾಯಿರಿ.
ಕನ್ಯಾ: ನಿಮ್ಮ ದಕ್ಷತೆ ನಿಮಗೆ ಹೊಸೆ ಐಡಿಯಾಗಳನ್ನು ಹುಟ್ಟುಹಾಕುತ್ತದೆ. ನಿಮಗೆ ವೈದ್ಯರ ಸಹಾಯ ದೊರೆಯಲಿದೆ. ನೀವು ಹಲವು ತಪ್ಪುಗಳನ್ನು ಸರಿಯಾಗಿ ಮಾಡಬಲ್ಲಿರಿ. ನೀವು ಬೇರೆಯವರನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರ. ನಿಮ್ಮ ಪ್ರೀತಿಪಾತ್ರರಿಗೆ ಇಷ್ಟವಾಗುವ ಕೆಲಸ ಮಾಡಿ.
ತುಲಾ: ಹೊಸ ವ್ಯಾಪಾರದ ಸಾಹಸಗಳನ್ನು ಮಾಡಲು ಮುಖ್ಯವಾಗಿ ಫ್ರೀಲಾನ್ಸರ್ ಗಳಿಗೆ ಇದು ಸಕಾರಾತ್ಮಕ ದಿನವಾಗಿದೆ. ನೀವು ನಿಮ್ಮ ಆಂತರಿಕ ಧ್ವನಿಯ ಮಾತು ಕೇಳಿದರೆ ತಪ್ಪಾಗುವುದು ಕಷ್ಟಸಾಧ್ಯ. ಬೆಳಗಿನ ಕಠಿಣ ಪರಿಶ್ರಮ ಮತ್ತು ಮಧ್ಯಾಹ್ನದ ಒತ್ತಡ ಸಂಜೆಯ ಸಂತೋಷಕ್ಕೆ ದಾರಿ ನೀಡುತ್ತವೆ. ನೀವೇನು ಮಾಡುತ್ತೀರೋ ಅದನ್ನು ಆನಂದಿಸಿ.
ವೃಶ್ಚಿಕ: ನಿಮ್ಮ ರಾಶಿ, ನಕ್ಷತ್ರಗಳ ಜೋಡಣೆ ಇಂದು ನಿಮಗೆ ರಚನಾತ್ಮಕ ಅನುಕೂಲಕರ ದಿನವನ್ನು ಉತ್ಪಾದಿಸುವಂತಿದೆ. ನೀವು ಹಿರಿಯರು ಮತ್ತು ಕಿರಿಯರು ಪ್ರತಿಯೊಬ್ಬರನ್ನು ಸಮಾನರಂತೆ ಕಾಣುವ ತಂಡದ ಪ್ರಾಮುಖ್ಯತೆಯನ್ನು ಅರಿತಿದ್ದೀರಿ. ಇದು ನಿಮ್ಮ ಪರಿಸರವನ್ನು ಸಾಮರಸ್ಯಕರವಾಗಿಸುತ್ತದೆ.
ಧನು: ಸುಮ್ಮನೇ ಕುಳಿತುಕೊಳ್ಳುವುದು ನಿಮ್ಮ ಸ್ವಭಾವವಲ್ಲ. ಆದರೆ ನೀವು ಇಂದು ಸೋಮಾರಿಯಾಗಿರುತ್ತೀರಿ. ನೀವು ನಿಮ್ಮ ಕೆಲಸ ಮತ್ತು ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸುತ್ತೀರ.
ಮಕರ: ಬಾಂಧವ್ಯದ ಬಗ್ಗೆ ಕೆಲ ವಾಸ್ತವಾಂಶಗಳು ನಿಮ್ಮ ಗಮನ ಸೆಳೆಯುತ್ತವೆ. ನೀವು ಕೆಲ ರಹಸ್ಯ ಭೇದಿಸಲು ಸಾಕಷ್ಟು ಸಮಯ ಕಳೆಯುತ್ತೀರಿ. ಅಲ್ಲದೆ ಪರಿಣಾಮಕಾರಿ ಸಂವಹನ ಶಕ್ತಿ ತಪ್ಪು ವ್ಯಾಖ್ಯಾನದಿಂದ ಉಂಟಾಗುವ ಸಂಘರ್ಷಗಳನ್ನು ಕರಗಿಸಲು ನೆರವಾಗುತ್ತವೆ. ಚಿಂತೆ ಮಾಡಲು ಕಾರಣವೇ ಇಲ್ಲ, ಆದರೆ ನಿಮ್ಮ ವಿರೋಧಿಗಳ ಜೊತೆ ಎಚ್ಚರಿಕೆಯಿಂದ ಇರಿ.
ಕುಂಭ: ಅನಿರೀಕ್ಷಿತ ಮತ್ತು ಆಶ್ಚರ್ಯಕರ ವಿಷಯಗಳು ನಿಮ್ಮನ್ನು ಇಂದು ಚಕಿತಗೊಳಿಸುತ್ತವೆ. ಸಾಧನೆ, ಹಣ, ಪ್ರೀತಿ ಯಾವುದರ ಕುರಿತು ನೀವು ದಿಢೀರ್ ಆಸೆ ಕಳೆದುಕೊಳ್ಳುತ್ತೀರಿ. ದಿನದ ಅಂತ್ಯಕ್ಕೆ ನೀವು ಓದು, ಸಂಶೋಧನೆ, ಚರ್ಚೆ ಅಥವಾ ಅಂತಹ ಚಟುವಟಿಕೆಗಳಲ್ಲಿ ಕಾಲ ಕಳೆಯುತ್ತೀರಿ.
ಮೀನ: ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಪವಿತ್ರವಾದ ಸಮಯ. ಇಂದು ನಿಮ್ಮ ಭವಿಷ್ಯಕ್ಕೆ ಗಮನಾರ್ಹ ಹೂಡಿಕೆ ಮಾಡುವುದನ್ನು ಕಾಣುತ್ತೀರಿ. ನಿಮ್ಮ ಕುಟುಂಬ ನಿಮ್ಮ ಯಶಸ್ಸಿಗೆ ತಳಹದಿ ಹಾಕುತ್ತದೆ. ನಿಮ್ಮ ನಗು ಇಂದು ಹಲವು ಹೃದಯಗಳನ್ನು ಗೆಲ್ಲುತ್ತದೆ.