ETV Bharat / bharat

ಎರ್ನಾಕುಲಂನಲ್ಲಿ ಪೊಲೀಸರ ಮೇಲೆ ಹಲ್ಲೆ ಪ್ರಕರಣ: 24 ವಲಸೆ ಕಾರ್ಮಿಕರ ಬಂಧನ - ಕಿಜಕ್ಕಂಬಲಂನಲ್ಲಿ 24 ವಲಸೆ ಕಾರ್ಮಿಕರ ಬಂಧನ

ಕಿಜಕ್ಕಂಬಲಂನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಮಂದಿ ವಲಸೆ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಕಿಜಕ್ಕಂಬಲಂನಲ್ಲಿ ವಲಸೆ ಕಾರ್ಮಿಕರು ತಂಗಿದ್ದ ಶಿಬಿರದಲ್ಲಿ ಕ್ರಿಸ್​ಮಸ್​​ ಆಚರಣೆಯ ಸಂದರ್ಭದಲ್ಲಿ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದು, ಘರ್ಷಣೆ ಸಂಭವಿಸಿತ್ತು.

migrant workers arrest
ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ ವಲಸೆ ಕಾರ್ಮಿಕರು
author img

By

Published : Dec 27, 2021, 10:28 AM IST

ಎರ್ನಾಕುಲಂ: ಕೊಚ್ಚಿಯ ಕಿಜಕ್ಕಂಬಲಂನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಮಂದಿ ವಲಸೆ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ ವಲಸೆ ಕಾರ್ಮಿಕರು

ಈ ಘಟನೆ ಸಂಬಂಧ ಒಟ್ಟು ಎರಡು ಪ್ರಕರಣಗಳು ದಾಖಲಾಗಿವೆ. ಸಿಐ(ಸರ್ಕಲ್ ಇನ್ಸ್‌ಪೆಕ್ಟರ್‌) ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಮಂದಿಯನ್ನು ಹಾಗೂ ಪೊಲೀಸ್ ವಾಹನ ಜಖಂಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಲಾಗಿದೆ. ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇರುವುದರಿಂದ ಆರೋಪಿಗಳ ವೈದ್ಯಕೀಯ ಪರೀಕ್ಷೆಗೆ ವಿಶೇಷ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಪೊಲೀಸರು ಮನವಿ ಮಾಡಿದ್ದಾರೆ.

ಘಟನೆಯ ಹಿನ್ನೆಲೆ:

ಶುಕ್ರವಾರ ಮಧ್ಯರಾತ್ರಿ ಕಿಜಕ್ಕಂಬಲಂನಲ್ಲಿ ವಲಸೆ ಕಾರ್ಮಿಕರು ತಂಗಿದ್ದ ಶಿಬಿರದಲ್ಲಿ ಕ್ರಿಸ್​ಮಸ್​​ ಆಚರಣೆಯ ಸಂದರ್ಭ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದು, ಘರ್ಷಣೆ ಸಂಭವಿಸಿತ್ತು. ಆಗ ಘರ್ಷಣೆ ನಿಯಂತ್ರಿಸಲು ಆಗಮಿಸಿದ ಪೊಲೀಸರ ಮೇಲೆ 300ಕ್ಕೂ ಹೆಚ್ಚು ಕಾರ್ಮಿಕರು ಹಲ್ಲೆ ನಡೆಸಿದ್ದರು. ಅಲ್ಲದೇ ಎರಡು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದರು.

ಈ ವೇಳೆ ಕುನ್ನತ್ತುನಾಡು ಸಿಐ ಶಾಜನ್ ಸೇರಿದಂತೆ ಐವರು ಪೊಲೀಸರು ಗಾಯಗೊಂಡಿದ್ದರು. ಸದ್ಯ ಅವರು ಕೊಳಂಚೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಒಟ್ಟು 156 ಮಂದಿ ವಲಸೆ ಕಾರ್ಮಿಕರನ್ನು (ಕಿಟೆಕ್ಸ್ ಕಂಪನಿಯ ಸಿಬ್ಬಂದಿ) ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಕೊಚ್ಚಿ: ಅಂತಾರಾಜ್ಯ ಕಾರ್ಮಿಕರಿಂದ ಪೊಲೀಸರ ಮೇಲೆ ಹಲ್ಲೆ, ಐವರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.