ಮೇಷ
ನಿಮ್ಮ ಧಾರಾಳ ಕ್ರಮದಿಂದ ನಿಮ್ಮ ಮೌಲ್ಯವನ್ನು ಪ್ರದರ್ಶಿಸುತ್ತೀರಿ. ನೀವು ಕೆಲಸದಲ್ಲಿ ಬಹುಶಃ ಮಹತ್ತರ ಯೋಜನೆಗಳು ಮತ್ತು ಆಲೋಚನೆಗಳನ್ನು ರೂಪಿಸುತ್ತೀರಿ, ಮತ್ತು ಇವು ಅತ್ಯಂತ ಅನುಕೂಲಕರವಾಗಿರುತ್ತವೆ. ಇಷ್ಟೆಲ್ಲ ಇದ್ದರೂ ಅಗತ್ಯವಿರುವ ಮಾನ್ಯತೆಯನ್ನು ನೀವು ಪಡೆಯುವುದಿಲ್ಲ. ಧೈರ್ಯ ಕಳೆದುಕೊಳ್ಳಬೇಡಿ. ನಿರುತ್ಸಾಹಗೊಳ್ಳದೆ ಹಿನ್ನಡೆಗಳನ್ನು ಎದುರಿಸುವುದನ್ನು ಕಲಿಯಿರಿ.
ವೃಷಭ
ಈ ದಿನ ನೀವು ನಿಮ್ಮ ಅದೃಷ್ಟಕ್ಕೆ ಬಿಟ್ಟುಬಿಡುವ ಅನಿವಾರ್ಯತೆ ಹೊಂದುತ್ತೀರಿ. ನಿಮ್ಮನ್ನು ನೀವು ವಿಧಿಯ ಆಟಕ್ಕೆ ಶರಣಾಗಿಬಿಟ್ಟರೂ, ಅದರಿಂದ ಒಳ್ಳೆಯದಾಗುತ್ತದೆ ಎಂದು ನಿರೀಕ್ಷೆ ಮಾಡಬೇಡಿ. ನೀವು ತಪ್ಪು ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಭಯ ಬಿಡಿ, ಪ್ರತಿದಿನದಂತೆ ಈ ದಿನವೂ ಮುಂದಕ್ಕೆ ಸಾಗುತ್ತದೆ.
ಮಿಥುನ
ನೀವು ಮಾಡುವ ಪ್ರತಿಯೊಂದರಲ್ಲೂ ಪರಿಪೂರ್ಣತೆಯನ್ನು ಬಯಸುತ್ತೀರಿ, ಮತ್ತು ಈ ತತ್ವವನ್ನು ನಿಮ್ಮ ಜೀವನದ ಪ್ರತಿ ಆಯಾಮದಲ್ಲೂ ಅಭ್ಯಾಸ ಮಾಡುತ್ತೀರಿ. ನಿಮ್ಮ ಪ್ರಯತ್ನಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ನಿಮ್ಮ ಎಲ್ಲಾ ಶಕ್ತಿಗಳನ್ನೂ ಕ್ರೋಢೀಕರಿಸುವುದನ್ನು ದೃಢಪಡಿಸಿಕೊಳ್ಳಿ.
ಕರ್ಕಾಟಕ
ಈ ದಿನ ನಿಮಗೆ ಅದರಲ್ಲಿಯೂ ನಿಮ್ಮ ಬದಲಾಗುತ್ತಿರುವ ಮನಸ್ಥಿತಿಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ತೀವ್ರತೆಗಳ ದಿನವಾಗಿದೆ. ಆದಾಗ್ಯೂ, ನಿಮ್ಮನ್ನು ಅತಿಯಾದ ಭಾವನಾತ್ಮಕತೆ ಅಥವಾ ಅಪ್ರಾಯೋಗಿಕತೆಗೆ ತೊಡಗಿಕೊಳ್ಳಬಾರದು ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ. ಇಲ್ಲದಿದ್ದಲ್ಲಿ, ನೀವು ಸಂಕೀರ್ಣ ಸನ್ನಿವೇಶಗಳಿಗೆ ಸಿಲುಕಿಕೊಳ್ಳಬಹುದು. ಆರೋಗ್ಯದ ಕಡೆ ಗಮನ ನೀಡಿ.
ಸಿಂಹ
ಇಂದು ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ನಿಮ್ಮ ಅಹಂ ನಿಮ್ಮನ್ನು ತಡೆಯದಂತೆ ನೋಡಿಕೊಳ್ಳಿ. ಪ್ರೇಮಿಗಳಿಗೆ ಇಂದು ಉತ್ತಮ ದಿನವಾಗಿದೆ.
ಕನ್ಯಾ
ಹಣಕಾಸಿನ ವ್ಯವಹಾರಗಳು ಇಂದು ಪ್ರಮುಖ ಅಡ್ಡಿ ಎದುರಿಸಲಿವೆ. ನಿಮ್ಮ ಬುದ್ಧಿ ಹೃದಯವನ್ನು ಗೆಲ್ಲಲು ಅವಕಾಶ ಕಲ್ಪಿಸಬೇಕು. ನಿಮ್ಮ ಕಾನೂನು ಕರ್ತವ್ಯಗಳಲ್ಲದೆ ಮತ್ತು ಹೊಸ ಯೋಜನೆಗಳಲ್ಲಿ ನಿಮ್ಮ ಮನಸ್ಸಿನಲ್ಲಿ ಅವುಗಳ ದೀರ್ಘಾವಧಿ ಪರಿಣಾಮ ದೃಷ್ಟಿಯಲ್ಲಿರಿಸಿಕೊಂಡು ನಿಮ್ಮ ವೈಯಕ್ತಿಕ ಸ್ವತ್ತುಗಳ ಕುರಿತು ಹೆಚ್ಚುವರಿ ಗಮನ ನೀಡಿ.
ತುಲಾ
ನಿಮ್ಮ ಪ್ರೀತಿಪಾತ್ರರೊಂದಿಗೆ ಹತ್ತಿರವಾಗಲು ಇಂದು ಸೂಕ್ತವಾದ ದಿನವಾಗಿದೆ. ನೀವಿಬ್ಬರೂ ನಿಮ್ಮ ಒತ್ತಡದ ಕಾರ್ಯಗಳ ನಡುವೆಯೂ ಒಟ್ಟಾಗಿ ಕಾಲ ಕಳೆಯಲು ಶಕ್ತರಾಗುತ್ತೀರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂಜೆ ಕಾಲ ಕಳೆಯುತ್ತೀರಿ. ಇಂದು ನೀವು ಮಾನಸಿಕವಾಗಿಯೂ ಶಕ್ತಿಯುತವಾಗಿರುತ್ತೀರಿ. ಈ ದಿನವನ್ನು ಸಮರ್ಥವಾಗಿ ಬಳಸಿಕೊಳ್ಳಿರಿ.
ವೃಶ್ಚಿಕ
ಎಲ್ಲಾ ಸಾಧ್ಯತೆಗಳಲ್ಲೂ, ನಿಮ್ಮ ಮನಸ್ಥಿತಿ ಅತ್ಯಂತ ದಾಳಿಕಾರಕವಾಗಿರುತ್ತದೆ. ನಿಮ್ಮ ದಾಳಿಕೋರತನ ಪ್ರಸ್ತುತಕ್ಕೆ ಅದೃಷ್ಟದೇವತೆಯನ್ನು ಮುಂದಕ್ಕೆ ಕಳುಹಿಸಬಹುದು. ಯಾವುದೇ ಬಗೆಯ ಹೊಡೆದಾಟಗಳು ಅಥವಾ ತೊಂದರೆಗಳಿಂದ ದೂರ ಉಳಿಯುವುದು ಉತ್ತಮ. ಆದರೆ ಸಂಜೆಯ ವೇಳೆಗೆ, ನಿರಾಳವಾಗುವ ಸಾಧ್ಯತೆ ಇದೆ.
ಧನು
ಕಾರ್ಯಗಳು ಮಾತುಗಳಿಗಿಂತ ಹೆಚ್ಚು ದೊಡ್ಡದಾಗಿ ಮಾತನಾಡುತ್ತವೆ ಎಂದು ನೆನಪಿನಲ್ಲಿರಿಸಿಕೊಳ್ಳಿ. ಬಹಳ ದೀರ್ಘಕಾಲದಿಂದ ಗಮನ ಬೇಡುತ್ತಿರುವ ನಿಮ್ಮ ಕೆಲಸವನ್ನು ಪೂರೈಸುವ ಎಲ್ಲಾ ಸಾಧ್ಯತೆಗಳೂ ಇವೆ. ಈಗ ಯಶಸ್ವಿಯಾಗಿ ಮುಂದುವರೆಯುತ್ತಿರುವ ಸಂಘರ್ಷಗಳನ್ನು ಮಂಡಿಸಿದರೂ ಅವುಗಳನ್ನು ತಾರ್ಕಿಕವಾಗಿ ಪರಿಹರಿಸುತ್ತೀರಿ.
ಮಕರ
ನೀವು ಬಂಧುಮಿತ್ರರೊಂದಿಗೆ ಸಾಕಷ್ಟು ಆನಂದವನ್ನು ತ್ಯಾಗ ಮಾಡಿದ್ದೀರಿ, ಬಹಳ ಕಷ್ಟಪಟ್ಟುಕೆಲಸ ಮಾಡಿದ್ದೀರಿ ಮತ್ತು ನಿಮ್ಮ ಗುರಿ ತಲುಪಲು ಗಮನ ಕೇಂದ್ರೀಕರಿಸಿದ್ದೀರಿ. ನೀವು ಪಟ್ಟ ಕಷ್ಟಕ್ಕೆ ಪ್ರತಿಫಲ ದೊರೆಯುವ ದಿನ ಇದಾಗಿದೆ.
ಕುಂಭ
ಅತ್ಯಂತ ಸಂಕೀರ್ಣ ಸಮಸ್ಯೆಗಳನ್ನು ಅತ್ಯಂತ ಸುಲಭವಾಗಿ ಪರಿಹರಿಸುತ್ತೀರಿ. ಆದಾಗ್ಯೂ ಜನರು ನಿಮ್ಮ ಮೇಲೆ ಹೊಣೆಗಾರಿಕೆಯನ್ನು ಎತ್ತಿ ಹಾಕುತ್ತಿದ್ದಾರೆ. ಇತರರ ತಪ್ಪುಗಳಿಗೆ ಹೊಣೆಯಾಗುವ ಇದು ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಆದರೂ ದೌರ್ಬಲ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುವ ಅವಕಾಶವಿದೆ.
ಮೀನ
ಇಂದು ನಿಮ್ಮ ಗ್ರಹಗಳ ಸ್ಥಾನವನ್ನು ನೋಡಿದರೆ, ಹಣಕಾಸಿನ ಅದೃಷ್ಟ ತಿರುಗು ಮುರುಗಾಗುವ ಸಾಧ್ಯತೆಯಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದೀರಿ. ಹಣಕಾಸಿನ ವ್ಯವಹಾರಗಳ ವಿಷಯಕ್ಕೆ ಬಂದರೆ ಜಾಗರೂಕರಾಗಿರಿ.