ETV Bharat / bharat

ಮಹಾರಾಷ್ಟ್ರದ ಒಂದೇ ಶಾಲೆಯಲ್ಲಿ 225 ವಿದ್ಯಾರ್ಥಿಗಳಿಗೆ ಕೊರೊನಾ! - ಮಹಾರಾಷ್ಟ್ರದ ಒಂದೇ ಶಾಲೆಯಲ್ಲಿ 229 ವಿದ್ಯಾರ್ಥಿಗಳಿಗೆ ಕೊರೊನಾ

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇದೀಗ ಒಂದೇ ಶಾಲೆಯಲ್ಲಿ ಬರೋಬ್ಬರಿ 225 ವಿದ್ಯಾರ್ಥಿಗಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ.

229 Students Covid Positive
229 Students Covid Positive
author img

By

Published : Feb 25, 2021, 3:45 PM IST

ಮುಂಬೈ: ಮಹಾರಾಷ್ಟ್ರ ಸೇರಿ ಕೆಲ ರಾಜ್ಯಗಳಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ಶುರುವಾಗಿದ್ದು, ಅತಿ ಹೆಚ್ಚು ಕೊರೊನಾ ಕೇಸ್​ಗಳು ಇಲ್ಲಿ ಕಂಡು ಬರುತ್ತಿವೆ. ಇದೀಗ ಮಹಾರಾಷ್ಟ್ರದ ಒಂದೇ ಶಾಲೆಯಲ್ಲಿ ಬರೋಬ್ಬರಿ 225 ಕೋವಿಡ್ ಪ್ರಕರಣ ಕಾಣಿಸಿಕೊಂಡಿವೆ.

ಮಹಾರಾಷ್ಟ್ರದ ವಾಸೀಂ ಜಿಲ್ಲೆಯ ಶಾಲೆಯೊಂದರ ಹಾಸ್ಟೆಲ್​ನಲ್ಲಿ 225 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು​ ತಗುಲಿದ್ದು, ಇಡೀ ಶಾಲೆಯನ್ನು ಕಂಟೈನ್ಮೆಂಟ್​ ಝೋನ್ ಎಂದು ಗುರುತಿಸಲಾಗಿದೆ. ಈ ಹಾಸ್ಟೆಲ್​​ನಲ್ಲಿ 300 ವಿದ್ಯಾರ್ಥಿಗಳು ವಾಸವಾಗಿದ್ದು, ಹೆಚ್ಚಾಗಿ ಅಮರಾವತಿ, ಯವತ್ಮಾಲ್​, ಅಕೋಲಾದ ವಿದ್ಯಾರ್ಥಿಗಳಿದ್ದಾರೆ.

ಇದನ್ನೂ ಓದಿ: ಸೋಷಿಯಲ್​ ಮೀಡಿಯಾಕ್ಕೆ ಮಾರ್ಗಸೂಚಿ ಮೂಲಕ ಕಡಿವಾಣ ಹಾಕಿದ ಕೇಂದ್ರ ಸರ್ಕಾರ

ಫೆ.14ರಂದು 21 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಗೊಂಡಿತ್ತು. ಇದಾದ ಬಳಿಕ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಿಸಿಕೊಂಡು 327 ವಿದ್ಯಾರ್ಥಿಗಳು ಹಾಸ್ಟೆಲ್​​ನಲ್ಲಿ ಉಳಿದುಕೊಂಡಿದ್ದರು.

ಕಳೆದ ಒಂದು ವಾರದ ಹಿಂದೆ ಲಾತೂರ್​ ಜಿಲ್ಲೆಯ ಹಾಸ್ಟೆಲ್​ನ 39 ವಿದ್ಯಾರ್ಥಿಗಳು ಹಾಗೂ ಐವರು ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ದೃಢಗೊಂಡಿತ್ತು.

ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಕಾರಣ ಇಲ್ಲಿನ ಸಿಎಂ ಮತ್ತೊಮ್ಮೆ ಲಾಕ್​ಡೌನ್ ಹೇರಿಕೆ ಮಾಡುವ ಬಗ್ಗೆ ಮಾತನಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.